Home
ಮೊಬೈಲ್

7,000mAh ಬ್ಯಾಟರಿಯ ಹೊಸ Realme 5G ಫೋನ್ ಕೇವಲ ₹12,999ಕ್ಕೆ ಬಿಡುಗಡೆ!

ಭಾರತದಲ್ಲಿ ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲೇ Realme ತನ್ನ ಬಜೆಟ್ ಬೆಲೆಯ ಹೊಸ 5G ಫೋನ್ Realme P4 Lite 5G ಅನ್ನು ಇಂದು (19, ಮಾರ್ಚ್ ಗುರುವಾರ) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು RealmeP4 ಶ್ರೇಣಿಗೆ ಇತ್ತೀಚಿನ ಸೇರ್ಪಡೆಯಾಗಿದ್ದು, ಇದು ಈಗಾಗಲೇ P4, P4x ಮತ್ತು P4 Pro 5G ಮಾದರಿಗಳ ಜೊತೆಗೆ ಸೇರ್ಪಡೆಯಾಗಿದೆ. ಈ ಹೊಸ Lite ಆವೃತ್ತಿಯ ಫೋನ್ ಮೂಲಕ ಕಡಿಮೆ ಬೆಲೆಯ 5G ಫೋನ್ ವಿಭಾಗದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಲು ಕಂಪನಿ ಪ್ರಯತ್ನಿಸಿದೆ.

Realme P4 Lite 5G : ಬೆಲೆ ಮತ್ತು ಲಭ್ಯತೆ
ಭಾರತೀಯ ಮಾರುಕಟ್ಟೆಗೆ Realme P4 Lite 5G ಫೋನ್ ( 4GB RAM ಮತ್ತು 64GB ಸ್ಟೋರೇಜ್ ) 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಗೊಂಡಿದೆ. ಇದಕ್ಕಿಂತ ಸ್ವಲ್ಪ ಹೆಚ್ಚಿನ 4GB + 128GB ಮಾದರಿಯು 13,999 ರೂ.ಗೆ ಮತ್ತು 6GB + 128GB ಮಾದರಿಯು 15,999 ರೂ.ಗೆ ಲಭ್ಯವಿವೆ. Mosaic Blue ಮತ್ತು Mosaic Green ಬಣ್ಣಗಳಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, Flipkart, Realme ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು. ಇನ್ನು ಲಾಂಚ್ ಆಫರ್‌ಗಳ ಭಾಗವಾಗಿ ರೂ. 1,000 ತಕ್ಷಣದ ರಿಯಾಯಿತಿ, ರೂ. 500 ಬ್ಯಾಂಕ್ ಡಿಸ್ಕೌಂಟ್ ಮತ್ತು ಈಗಾಗಲೇ Realme ಬಳಕೆದಾರರಿಗೆ ಹೆಚ್ಚುವರಿ ರೂ. 500 ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ ಎಂದು Realme ತಿಳಿಸಿದೆ.

Realme P4 Lite 5G : ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವಿಷಯಕ್ಕೆ ಬಂದರೆ, Realme P4 Lite 5G ಫೋನ್ 6.8 ಇಂಚಿನ HD+ LCD ಪರದೆಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ನೀಡುತ್ತದೆ. ಈ ಡಿಸ್‌ಪ್ಲೆಯಲ್ಲಿ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ಹಾಗೂ ಗೇಮಿಂಗ್ ಅನುಭವ ಮೃದುವಾಗಿರುತ್ತದೆ. 900 ನಿಟ್ಸ್ ಪೀಕ್ ಬ್ರೈಟ್ನೆಸ್ ಇರುವುದರಿಂದ ಹೊರಗಡೆಯಲ್ಲಿಯೂ ಸ್ಪಷ್ಟ ದೃಶ್ಯ ಕಾಣುತ್ತದೆ ಎಂದು ಕಂಪೆನಿ ತಿಳಿಸಿದೆ. ಜೊತೆಗೆ, IP64 ರೇಟಿಂಗ್ ಹೊಂದಿರುವುದರಿಂದ ಧೂಳು ಮತ್ತು ನೀರಿನ ಸಿಂಪಡಣೆಯಿಂದ ಸ್ವಲ್ಪ ಮಟ್ಟದ ರಕ್ಷಣೆ ಸಿಗುತ್ತದೆ.

ಕಾರ್ಯಕ್ಷಮತೆ ವಿಚಾರದಲ್ಲಿ, MediaTek Dimensity 6300 5G ಪ್ರೊಸೆಸರ್ Realme P4 Lite 5G ಫೋನ್‌ಗೆ ಶಕ್ತಿ ನೀಡುತ್ತದೆ. ಇದು ದಿನನಿತ್ಯದ ಬಳಕೆ, ಸೋಷಿಯಲ್ ಮೀಡಿಯಾ, ವಿಡಿಯೋ ಸ್ಟ್ರೀಮಿಂಗ್ ಹಾಗೂ ಸಾಮಾನ್ಯ ಗೇಮಿಂಗ್‌ಗೆ ಸಮರ್ಪಕವಾಗಿದೆ. ಹೆಚ್ಚುವರಿಯಾಗಿ, ಈ ಫೋನಿನಲ್ಲಿ 5,300 sq mm ವ್ಯಾಪ್ತಿಯ Airflow vapour chamber ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಫೋನ್ ಬಿಸಿಯಾಗುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

7,000mAh ಬ್ಯಾಟರಿಯ ಹೊಸ Realme 5G ಫೋನ್ ಕೇವಲ ₹12,999ಕ್ಕೆ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, Realme P4 Lite 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ f/2.2 ಅಪರ್ಚರ್‌ನೊಂದಿಗೆ ಬಂದಿದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಪೋನ್ ಬ್ಯಾಟರಿ ವಿಷಯದಲ್ಲಿ ಗಮನಾರ್ಹವಾಗಿದೆ, Realme P4 Lite 5G ಫೋನ್ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು, ದಿನಪೂರ್ತಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿದೆ. ಇದಕ್ಕೆ 15W ವೈಯರ್ಡ್ ಚಾರ್ಜಿಂಗ್ ಬೆಂಬಲವೂ ಇದೆ.

ಸಾಫ್‌ವೇರ್ ವಿಭಾಗದಲ್ಲಿ, Realme P4 Lite 5G ಫೋನ್ Android 16 ಆಧಾರಿತ Realme UI 7.0 ನಲ್ಲಿ ಕಾರ್ಯನಿರ್ವಹಿಸುತ್ತದ ಮತ್ತು ಎರಡು ವರ್ಷಗಳ OS ಅಪ್ಡೇಟ್ ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ನೀಡುವುದಾಗಿ ಕಂಪನಿಯು ತಿಳಿಸಿದೆ. ಸ್ಟೋರೇಜ್ ಆಯ್ಕೆಗಳ Realme P4 Lite 5G ಫೋನ್ಲ್ಲಿ ಗರಿಷ್ಠ 6GB LPDDR4X RAM ಮತ್ತು 128GB UFS 2.2 ಸ್ಟೋರೇಜ್ ಲಭ್ಯವಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 5, Bluetooth 5.3, 3.5mm ಹೆಡ್‌ಫೋನ್ ಜಾಕ್ ಮತ್ತು USB Type-C ಪೋರ್ಟ್ ಸೇರಿವೆ.

ಒಟ್ಟಿನಲ್ಲಿ, ಕಡಿಮೆ ಬೆಲೆಯಲ್ಲಿಯೇ ದೊಡ್ಡ ಬ್ಯಾಟರಿ, ವೇಗವಾದ 144Hz ಡಿಸ್‌ಪ್ಲೇ ಮತ್ತು 5G ಬೆಂಬಲವನ್ನು ಹುಡುಕುತ್ತಿರುವ ಬಳಕೆದಾರರಿಗೆ Realme P4 Lite 5G ಒಂದು ಆಕರ್ಷಕ ಆಯ್ಕೆಯಾಗಿ ಪರಿಣಮಿಸಿದೆ. ದಿನನಿತ್ಯದ ಬಳಕೆಗಾಗಿ ಸಮತೋಲನ ಹೊಂದಿದ ಫೋನ್ ಬೇಕಾದವರಿಗೆ ಇದು ಗಮನಿಸಬಹುದಾದ ಹೊಸ ಆಯ್ಕೆಯಾಗಿದೆ.Realme P4 Lite 5G ಫೋನಿನ ಮೂಲಕ ವಿಶೇಷವಾಗಿ ದೊಡ್ಡ ಬ್ಯಾಟರಿ, ವೇಗವಾದ ಡಿಸ್‌ಪ್ಲೇ ಮತ್ತು 5G ಬೆಂಬಲವನ್ನು ಗಮನಿಸುವ ಸಾಮಾನ್ಯ ಬಳಕೆದಾರರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

Best Mobiles in India

English summary
Realme has launched the Realme P4 Lite 5G in India, expanding its P4 series with an affordable 5G option. Starting at ₹12,999, the smartphone comes in multiple storage variants and is available in Mosaic Blue and Mosaic Green colours via Flipkart and Realme’s official website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+