Realme GT 6 ಬಿಡುಗಡೆಗೆ ಡೇಟ್ ಫಿಕ್ಸ್! ಬೊಂಬಾಟ್ ಫೀಚರ್ಸ್, ಬೆಲೆ ಎಷ್ಟು?: ಇಲ್ಲಿದೆ ಫುಲ್ ಡೀಟೆಲ್ಸ್
Realme ಕಂಪನಿಯು ತನ್ನ Realme GT ಸರಣಿಯ Realme GT 6 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚೆಗೆ ಲಾಂಚ್ ಆದ Realme GT 6T ಗಿಂತ ಉನ್ನತ ಶ್ರೇಣಿಯಲ್ಲಿ ಇರಲಿದೆ. ರಿಯಲ್‌ಮಿ ಕಂಪನಿಯು, ಈ ಮೊಬೈಲ್‌ನೊಂದಿಗೆ AI ಫೀಚರ್ಸ್ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಯಾವ ಯಾವ ದೇಶಗಳ ಮಾರುಕಟ್ಟೆಗಳಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ಲೀಸ್ಟ್‌ನಲ್ಲಿ ಭಾರತವೂ ಸೇರಿದೆ. ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬ ತಿಳಿಯೋಣ ಬನ್ನಿ.
Realme GT 6ನ ಹೈಲೈಟ್ಸ್‌ಗಳು
- Realme GT 6 ಅನ್ನು ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
- ಫ್ಲ್ಯಾಗ್‌ಶಿಪ್ ಜೂನ್‌ನಲ್ಲಿ ಎಂಟ್ರಿ ಕೊಡವ ಸಾಧ್ಯತೆಯಿದೆ.
- Realme GT ಸರಣಿಯು ಎರಡು ವರ್ಷಗಳ ನಂತರ Realme GT 6Tಯೊಂದಿಗೆ ಭಾರತದಕ್ಕೆ ಮರಳುತ್ತಿದೆ.

Realme GT 6 ಮೊಬೈಲ್‌ನ ಫೋಟೋ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಕೆಲವು ಫೀಚರ್ಸ್‌ಗಳು ಬಹಿರಂಗವಾಗಿವೆ. ಇದು AI ಫೀಚರ್ಸ್‌ಗಳನ್ನು ವಿವರಿಸುವ ಮತ್ತು AI ಸ್ಮಾರ್ಟ್ ಲೂಪ್, AI ನೈಟ್ ವಿಷನ್, AI ಸ್ಮಾರ್ಟ್ Removal ಮತ್ತು AI ಸ್ಮಾರ್ಟ್ ಸರ್ಚ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. Realme GT 6 ಅನ್ನು GT ನಿಯೋ 6ನ ರೀಬ್ರಾಂಡ್ ಎಂದು ಪರಿಗಣಿಸಲಾಗಿದೆ.
Realme GT 6 ಮೊಬೈಲ್ ಬಿಡುಗಡೆಗೆ ಕೌಂಟ್‌ಡೌನ್!
- Realme ಕಂಪನಿಯು ಈವರೆಗೆ Realme GT 6 ಫೋನ್‌ನ ಹಾರ್ಡ್‌ವೇರ್ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಇದು Realme GT Neo 6ನ ರೀಬ್ರಾಂಡ್ ಎಂದು ಹೇಳಲಾಗಿದೆ.
- Realme GT 6 ಮುಂದಿನ ತಿಂಗಳು ಅಂದರೆ ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಟಿಪ್‌ಸ್ಟರ್ ಅಭಿಷೇಕ್ ಯಾದವ್ ಹೇಳಿದ್ದಾರೆ.
- Realme GT 6 ಮೊಬೈಲ್ ಅನ್ನು ಭಾರತ, ಫಿಲಿಪೈನ್ಸ್, ಪೋಲೆಂಡ್, ಟರ್ಕಿ, ಸೌದಿ ಅರೇಬಿಯಾ, ಥೈಲ್ಯಾಂಡ್, ಮಲೇಷ್ಯಾ, ಮೆಕ್ಸಿಕೋ, ಇಂಡೋನೇಷ್ಯಾ, ಇಟಲಿ, ಸ್ಪೇನ್ ಮತ್ತು ಇತರೆ ದೇಶದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
- ಜಿಟಿ ಸರಣಿಯ ಹೊರತಾಗಿ, ರಿಯಲ್‌ಮಿ ತನ್ನ ಎಐ ತಂತ್ರಜ್ಞಾನಗಳನ್ನು ಸಂಪೂರ್ಣ ಉತ್ಪನ್ನ ಶ್ರೇಣಿಯೊಂದಿಗೆ ನಿಯೋಜಿಸುವ ಗುರಿಯನ್ನು ಹೊಂದಿದೆ ಎಂದು ರಿಯಲ್‌ಮಿ ಸಿಇಒ ಸ್ಕೈ ಲಿ ಖಚಿತಪಡಿಸಿದ್ದಾರೆ.
ಇಲ್ಲಿದೆ Realme GT Neo 6 ಮೊಬೈಲ್‌ನ ವಿಶೇಷತೆಗಳು
- ಡಿಸ್ಪ್ಲೇ: Realme GT Neo 6 ಮೊಬೈಲ್ 6.78-ಇಂಚಿನ FHD+ AMOLED 8T LTPO ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ದರ, 6,000 nits ಗರಿಷ್ಠ ಬ್ರೈಟ್‌ನೆಸ್, HDR ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿದೆ.
- ಪ್ರೊಸೆಸರ್: Realme GT 5ಗೆ ಹೋಲಿಸಿದರೆ Realme GT Neo 6 ಸ್ಮಾರ್ಟ್‌ಫೋನ್ Snapdragon 8 Gen 2 ಪ್ರೊಸೆಸರ್ ಹೊಂದಿರಲಿದೆ. ಹ್ಯಾಂಡ್‌ಸೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್‌ನಿಂದ ಗ್ರಾಫಿಕ್ಸ್‌ಗಾಗಿ Adreno GPUನೊಂದಿಗೆ ಜೋಡಿಸಲ್ಪಟ್ಟಿದೆ.
- ಸ್ಟೋರೇಜ್ ಆಯ್ಕೆ: Realme GT Neo 6 ಮೊಬೈಲ್‌ನಲ್ಲಿ ಚಿಪ್‌ಸೆಟ್ ಅನ್ನು 16GB RAM ಮತ್ತು 1TB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ.
- ಓಎಸ್: Android 14-ಆಧಾರಿತ Realme UI 5.0 ಕಸ್ಟಮ್ ಸ್ಕಿನ್ ಬಾಕ್ಸ್‌ನಿಂದ ಹೊರಗಿದೆ.
- ಕ್ಯಾಮೆರಾ: OIS ಜೊತೆಗೆ 50MP Sony IMX882 ಪ್ರೈಮರಿ ಸೆನ್ಸರ್ (primary sensor) ಮತ್ತು 8MP Sony IMX355 ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. ಸೆಲ್ಫಿ ಶೂಟರ್‌ಗಾಗಿ 32MP ಫ್ರಂಟ್ ಕ್ಯಾಮೆರಾ ಇರಲಿದೆ.
- ಬ್ಯಾಟರೊ: Realme GT 6 ಮೊಬೈಲ್ 120W SuperVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, 5,500mAh ಬ್ಯಾಟರಿಯನ್ನು ಬ್ಯಾಕಪ್ ಒದಗಿಸಲಿದೆ.
- ಇತರೆ ಫೀಚರ್ಸ್: ಒಂದು IP65 ರೇಟಿಂಗ್, ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು NFC ಇದೆ.
Realme 'ಸಿ' ಸರಣಿಯ Realme C63 ಬಿಡುಗಡೆ
Realme ಕಂಪನಿಯು, ಇಂಡೋನೇಷ್ಯಾದಲ್ಲಿ Realme C63 ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು Unisoc T612 SoC ಪ್ರೊಸೆಸರ್ ಹೊಂದಿದ್ದು, Android 14 ಅನ್ನು ರನ್ ಮಾಡುತ್ತದೆ. 7.74mm ದಪ್ಪವನ್ನು ಹೊಂದಿದ್ದು, 8GB RAM ಮತ್ತು 256GB ಸ್ಟೋರೇಜ್ ಹೊಂದಿದೆ. 6.74 ಇಂಚಿನ HD+ 90Hz LCD ಡಿಸ್ಪೇ, 50MP ಹಿಂಬದಿಯ ಕ್ಯಾಮರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಹೊಂದಿದೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








