ಮತ್ತೆ ಧೂಳೆಬ್ಬಿಸಿದ Realme.. ಕಡೆಗೂ ಬಂದೇಬಿಡ್ತು ಹೊಸ ಫೋನ್: 50MP ಕ್ಯಾಮೆರಾ, 5800mAh ಬ್ಯಾಟರಿ
ರಿಯಲ್‌ಮಿ ಪ್ರಿಯರಿಗೆ ಸರ್ಪ್ರೈಸ್ ಗಿಫ್ಟ್. Realme ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ Realme GT 6 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಮತ್ತು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. Realmeನ ಈ ಫೋನ್ Snapdragon 8 Gen 3 ಪ್ರೊಸೆಸರ್ ಮತ್ತು 16GB LPDDR5X RAM ಅನ್ನು ಹೊಂದಿದೆ. GT 6 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5800mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. Realme GT 6ನ ವಿಶೇಷತೆಗಳೇನು? ಹೊಸ ಫೀಚರ್ಸ್ ಏನಿರಲಿದೆ? ಬೆಲೆ ಎಷ್ಟು? ಇತ್ಯಾದಿ ವಿವರಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ರಿಯಲ್‌ಮಿ ಕಂಪನಿಯು ಟೆಕ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮೊಬೈಲ್ ಪ್ರಿಯರ ಮನಸ್ಸು ಗೆದ್ದಿದೆ. ಹೀಗಾಗಿಯೇ, ರಿಯಲ್‌ಮಿ ಮೊಬೈಲ್‌ಗಳು ಗ್ರಾಹಕರ ಹಾಟ್ ಫೇವರಿಟ್ ಎನಿಸಿವೆ. ಕಡಿಮೆ ಬೆಲೆಯಲ್ಲಿ ಭರಪೂರ ಫೀಚರ್ಸ್ ಹೊಂದಿರುವ ಫೋನ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುತ್ತಿದೆ. ಇದೀಗ ನೂತನ Realme GT 6 ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Realme GT 6ನಲ್ಲಿನ ಹೊಸ ವಿಶೇಷತೆಗಳೇನು?
ಈ Realme GT 6 ಫೋನ್ 6.78-ಇಂಚಿನ 8T LTPO AMOLED ಡಿಸ್ಪ್ಲೇ ಹೊಂದಿದೆ. 2780×1264 ಪಿಕ್ಸೆಲ್‌ಗಳ ರೆಸಲ್ಯೂಶನ್, ರಿಫ್ರೆಶ್ ರೇಟ್ 120Hz, 6000nits ವರೆಗಿನ ಗರಿಷ್ಠ ಬ್ರೈಟ್‌ನೆಸ್ ಒಳಗೊಂಡಿದೆ. ಡಿಸ್ಪ್ಲೇ ಕ್ರಿಸ್ಟಲ್ ಆರ್ಮರ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಪ್ರೊಸೆಸರ್‌ನೊಂದಿಗೆ Adreno 750 GPU ಅನ್ನು ಹೊಂದಿದೆ. ಇದಲ್ಲದೆ, Android 14 ಆಧಾರಿತ realme UI 5ನಲ್ಲಿ ಕಾರ್ಯನಿರ್ವಹಿಸುತ್ತದೆ.
ಅತ್ಯಾಕರ್ಷಕ ಕ್ಯಾಮೆರಾ ಸೆಟಪ್
ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ GT 6 ಸೋನಿ IMX890 ಸಂವೇದಕ, OIS ಜೊತೆಗೆ 50MP ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಫ್ರಂಟ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ 5800mAh ಬ್ಯಾಟರಿಯನ್ನು ಹೊಂದಿದ್ದು, ಇದು 120W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಹೈ-ರೆಸ್ ಆಡಿಯೊವನ್ನು ಹೊಂದಿದೆ.
Realme GT 6ನ ಬೆಲೆ ಎಷ್ಟು?
- 12GB + 256GB - ಅಂದಾಜು 32,130 ರೂ.
- 16GB + 256GB - ಸುಮಾರು 35,580 ರೂ.
- 16GB + 512GB - ಅಂದಾಜು 39,025 ರೂ.
- 16GB + 1TB - ಸುಮಾರು 44,765 ರೂ.
ಈ ಫೋನ್ ಪ್ರಸ್ತುತ ಆರ್ಡರ್ ಮಾಡಲು ಲಭ್ಯವಿದೆ. ಜುಲೈ 15 ರಿಂದ ಚೀನಾದಲ್ಲಿ ಮಾರಾಟ ಪ್ರಾರಂಭಿಸಲಿದೆ. Realme GT 6ನ 12GB + 256GB ಸ್ಟೋರೇಜ್ ರೂಪಾಂತರದ ಬೆಲೆ 2799 ಯುವಾನ್ (32,130 ರೂ.), 16GB + 256GB ಸ್ಟೋರೇಜ್ ರೂಪಾಂತರದ ಬೆಲೆ 3099 ಯುವಾನ್ (ಅಂದಾಜು ರೂ. 35,580), 16GB + 512GB ಸ್ಟೋರೇಜ್ ರೂಪಾಂತರದ ಬೆಲೆ 3399 ಯುವಾನ್ ಇದೆ. 1TB ಸ್ಟೋರೇಜ್ ರೂಪಾಂತರದ ಬೆಲೆ 3899 ಯುವಾನ್ ಇದೆ.
Realme GT 6 ಸಂಪೂರ್ಣ ಫೀಚರ್ಸ್
- ಡಿಸ್ಪ್ಲೇ: 6.78-ಇಂಚಿನ (2780×1264 ಪಿಕ್ಸೆಲ್‌ಗಳು) 120Hz 8T LTPO AMOLED ಡಿಸ್ಪ್ಲೇ, 6000 nits ಗರಿಷ್ಠ ಬ್ರೈಟ್‌ನೆಸ್, 2160Hz ಹೈ-ಡಬ್ಲ್ಯೂಎಫ್‌ರೆಸ್ಟಲ್ ಗಾಜಿನ ರಕ್ಷಣೆ.
- ರಿಫ್ರೆಶ್ ರೇಟ್: 120Hz ರಿಫ್ರೆಶ್ ದರ.
- ಪ್ರೊಸೆರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 750 GPU.
- ಸ್ಟೋರೇಜ್: 12GB / 16GB LPDDR5X RAM ಜೊತೆಗೆ 256GB / 512GB / 1TB (UFS 4.0) ಸ್ಟೋರೇಜ್.
- OS: ರಿಯಲ್‌ಮಿ UI 5 ಜೊತೆಗೆ Android 14
- ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
- ಕ್ಯಾಮೆರಾ: ಸೋನಿ IMX890 ಸಂವೇದಕದೊಂದಿಗೆ 50MP ಹಿಂಬದಿಯ ಕ್ಯಾಮೆರಾ, OIS, f/1.88 ಅಪರ್ಚರ್, 8MP IMX355 112° ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್.
- ಫ್ರಂಟ್ ಕ್ಯಾಮೆರಾ: Samsung S5K3P9 ಸಂವೇದಕದೊಂದಿಗೆ 16MP ಫ್ರಂಟ್ ಕ್ಯಾಮೆರಾ, f/2.45 ಅಪರ್ಚರ್, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ.
- ಅಳತೆ: 162.02× 76.07×8.43mm.
- ತೂಕ: 206.7 ಗ್ರಾಂ.
- ರಕ್ಷಣೆ: ಧೂಳು ಮತ್ತು ನೀರು ನಿರೋಧಕ (IP65).
- ಬ್ಯಾಟರಿ: 5800mAh ಬ್ಯಾಟರಿ.
- ಚಾರ್ಜಿಂಗ್: 120W SuperVOOC ಫಾಸ್ಟ್ ಚಾರ್ಜಿಂಗ್.
- ಕನೆಕ್ಟಿವಿಟಿ ಆಯ್ಕೆಗಳು: USB ಟೈಪ್-ಸಿ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಹೈ-ರೆಸ್ ಆಡಿಯೋ, 5G SA/ NSA, ಡ್ಯುಯಲ್ 4G VoLTE, Wi-Fi 7 802.11 be (2.4GHz + 5GHz), ಬ್ಲೂಟೂತ್ 5.4, USB ಟೈಪ್-C.


Click it and Unblock the Notifications








