ಜೂನ್ 20ರಂದು Realme GT 6 ಸ್ಮಾರ್ಟ್‌ಫೋನ್ ಲಾಂಚ್; SuperVOOC ಚಾರ್ಜಿಂಗ್ ಜೊತೆಗೆ 5,500mAh ಬ್ಯಾಟರಿ ಖಚಿತ !
ಕಡಿಮೆ ಬೆಲೆಯಲ್ಲಿ ಉನ್ನತ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವಲ್ಲಿ ರಿಯಲ್‌ಮಿ ಸಂಸ್ಥೆ (Realme) ಉಳಿದೆಲ್ಲಾ ಬ್ರಾಂಡ್‌ಗಳಿಗಿಂತ ಮುಂದಿದೆ. ಅದರಂತೆ ಗ್ರಾಹಕರು ಕೂಡ ಮುಗಿಬಿದ್ದು ರಿಯಲ್‌ಮಿ ಸಂಸ್ಥೆಯ ಫೋನ್‌ಗಳನ್ನು ಖರೀದಿಸುತ್ತಾರೆ. ಈ ಮೊಬೈಲ್‌ಗಳ ಅತ್ಯಾಕರ್ಷಕ ಫೀಚರ್ಸ್ ಗ್ರಾಹಕರನ್ನು ಆಕರ್ಷಿಸಿದ್ದು, ಇದೀಗ ರಿಯಲ್‌ಮಿ ಸಂಸ್ಥೆ ಜೂನ್ 20 ರಂದು ತನ್ನ ಬಹುನಿರೀಕ್ಷಿತ Realme GT 6 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಕುರಿತು ಅಧಿಕೃತ ಮಾಹಿತಿ ನೀಡಿದೆ ಹಾಗಿದ್ರೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
Realme GT 6 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಜೂನ್ 20 ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಸಂಸ್ಥೆ ಸಿದ್ದವಾಗಿದೆ. ಜೊತೆಗೆ ಪ್ರಸಿದ್ದ ಇ-ಕಾಮರ್ಸ್ ತಾಣವಾಗಿರುವ ಫ್ಲಿಪ್‌ಕಾರ್ಟ್ (Flipkart) ಮೂಲಕ ಭಾರತದಲ್ಲಿ ಮಾರಾಟ ಆರಂಭಿಸಲಿದೆ ಎಂದು ಸಂಸ್ಥೆ ಅಧಿಕೃತಗೊಳಿಸಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚೀನೀ ಟೆಕ್ ಬ್ರ್ಯಾಂಡ್ ಹೊಸ GT ಸರಣಿಯ ಫೋನ್‌ನ ವಿನ್ಯಾಸ ಮತ್ತು ವಿಶೇಷತೆಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ತೀರಾ ಇತ್ತೀಚೆಗೆ, ಬ್ರ್ಯಾಂಡ್ ರಿಯಲ್‌ಮಿ GT 6 ರ ಬ್ಯಾಟರಿ ಮತ್ತು ಚಾರ್ಜಿಂಗ್ ವಿವರಗಳನ್ನು ದೃಢಪಡಿಸಿದೆ. ಇದು ಈಗಾಗಲೇ Snapdragon 8s Gen 3 SoC ನಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಅಂಶವನ್ನೂ ಬಹಿರಂಗಪಡಿಸಿದೆ. ಇದು ಹಲವಾರು ಕೃತಕ ಬುದ್ಧಿಮತ್ತೆ (AI) ಚಾಲಿತ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ.

Realme GT 6 ಬ್ಯಾಟರಿ, ಚಾರ್ಜಿಂಗ್ ವಿವರಗಳು:
ರಿಯಲ್‌ಮಿ ಮತ್ತು ಫ್ಲಿಪ್‌ಕಾರ್ಟ್ ಎರಡೂ ವೆಬ್‌ಸೈಟ್‌ಗಳಲ್ಲಿ ಮೀಸಲಾದ ಲ್ಯಾಂಡಿಂಗ್ ಪುಟದ ಮೂಲಕ Realme GT 6 ಬಿಡುಗಡೆ ಮಾಡುವ ಕುರಿತು ಸಂಸ್ಥೆ ಸ್ಪಷ್ಟಪಡಿಸಿದೆ. ಬಿಡುಗಡೆಯಾಗಿರುವ ಟೀಸರ್‌ಗಳ ಪ್ರಕಾರ, ಮುಂಬರುವ ಫೋನ್ 120W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಡ್ಯುಯಲ್ ಸೆಲ್ ಬ್ಯಾಟರಿಯನ್ನು 10 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಮತ್ತು 28 ನಿಮಿಷಗಳಲ್ಲಿ ಶೂನ್ಯದಿಂದ 100 ಪ್ರತಿಶತದಷ್ಟು ಜಾರ್ಜ್ ಮಾಡಲಿದೆ ಎಂದು ಹೇಳಲಾಗುತ್ತದೆ.
Realme GT 6 ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 46 ಗಂಟೆಗಳ ಟಾಕ್ ಟೈಮ್ ಮತ್ತು ಎಂಟು ಗಂಟೆಗಳ PUBG ಗೇಮ್ ಪ್ಲೇ ಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದು 1600 ಫುಲ್ ಚಾರ್ಜ್ ಸೈಕಲ್‌ಗಳ ಬಳಿಕ 80 ಪ್ರತಿಶತ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ದಿನಕ್ಕೆ ಒಂದು ಚಾರ್ಜ್ ನಂತೆ ನಾಲ್ಕು ವರ್ಷಗಳವರೆಗೆ ಬ್ಯಾಟರಿ ಬಳಕೆಯನ್ನು ಖಚಿತಪಡಿಸುತ್ತದೆ ಎಂದು ರಿಯಲ್‌ಮಿ ಸಂಸ್ಥೆ ಹೇಳಿದೆ.
Realme GT 6 ಬಿಡುಗಡೆ ಕಾರ್ಯಕ್ರಮವು ಭಾರತದಲ್ಲಿ ಇದೇ ಜೂನ್ 20 ರಂದು ಮದ್ಯಾಹ್ನ 1.30 ಕ್ಕೆ ನಡೆಯಲಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಕೂಡ ಮಾರಾಟ ಆರಂಭಿಸಲಿದೆ. ಇದು ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಈಗಾಗಲೇ ಕಂಪನಿ ದೃಢಪಡಿಸಿದೆ ಮತ್ತು ಗೇಮಿಂಗ್‌ಗಾಗಿ ಪ್ರತಿ ಸೆಕೆಂಡಿಗೆ 120 ಫ್ರೇಮ್‌ಗಳ ರಿಫ್ರೆಶ್ ರೇಟ್ ನೀಡುತ್ತದೆ. ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 10,014mm ಚದರ ಡ್ಯುಯಲ್ VC ಕೂಲಿಂಗ್ ಸಿಸ್ಟಂ ಅನ್ನು ಒಳಗೊಂಡಿರುವಂತೆ ಸ್ಪಷ್ಟಪಡಿಸಿದೆ.
Realme GT 6 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 50 ಮೆಗಾಪಿಕ್ಸೆಲ್ Sony LYT-808 ಪ್ರಾಥಮಿಕ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ Sony IMX355 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








