Realme: ಜೂನ್ ತಿಂಗಳಿನಲ್ಲಿ ಲಾಂಚ್ ಆಗಲಿದೆ ರಿಯಲ್‌ಮಿ GT 6 !: ಫೀಚರ್ಸ್, ಬೆಲೆಯ ವಿವರ ತಿಳಿಯಿರಿ
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಭಾರತದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿವೆ. ಈ ಫೋನ್‌ಗಳ ಉತ್ತಮ ಫೀಚರ್ಸ್‌ನಿಂದಾಗಿ ಜನರು ಇವುಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಕಂಪನಿ ಕೂಡ ಉತ್ತಮ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಪರಿಚಯಿಸುತ್ತಾ ಬಂದಿದೆ ಇದೀಗ ಶೀಘ್ರದಲ್ಲೇ ರಿಯಲ್‌ಮಿ GT 6 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾದ್ರೆ ಬಿಡುಗಡೆ ಮಾಡಲಿರುವ ರಿಯಲ್‌ಮಿ GT 6 (Realme GT 6) ಸ್ಮಾರ್ಟ್‌ಫೋನ್ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಭಾರತದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ರಿಯಲ್‌ಮಿ ಸಿದ್ಧವಾಗಿದೆ. ಕಂಪನಿಯ ಹಿರಿಯ ಕಾರ್ಯನಿರ್ವಾಹಕರು ರಿಯಲ್‌ಮಿ GT 6 (Realme GT 6) ಟೀಸರ್ ಬಿಡುಗಡೆ ಮಾಡಿದ್ದು, ಜೂನ್ ತಿಂಗಳ ಮಧ್ಯದಲ್ಲಿ ಈ ಸ್ಮಾರ್ಟ್‌ಫೋನ್ ಭಾರತಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಸ್ಮಾರ್ಟ್‌ಫೋನ್ ಭಾರತಕ್ಕೆ ಆಗಮಿಸಲಿದೆ ಎಂದು ದೃಢಪಡಿಸಿದೆ, ಆದರೆ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಇದರ ಹೊರತಾಗಿ ಸ್ಮಾರ್ಟ್‌ಫೋನ್ ಈ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಊಹಿಸಲಾಗಿದೆ.

ರಿಯಲ್‌ಮಿ (Realme) ಸಂಸ್ಥೆಯ ಉಪಾಧ್ಯಕ್ಷ ಚೇಸ್ ಕ್ಸು X ಮೂಲಕ ಕಿರು ವೀಡಿಯೊ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿ, ರಿಯಲ್‌ಮಿ GT 6 ನ ಸಂಭವನೀಯ ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ನೀಡಿದ್ದಾರೆ. ರಿಯಲ್‌ಟಾಕ್ (RealTALK) ಸಂಚಿಕೆ-2 ರ ಟೀಸರ್‌ನಲ್ಲಿ ಕಂಪನಿಯ ಕಾರ್ಯನಿರ್ವಾಹಕರು ರಿಯಲ್‌ಮಿ ಟೆಕ್ ನ್ಯೂಸ್ (Realme Tech News)ನಲ್ಲಿ Realme GT 6 ಕುರಿತು ಪೋಸ್ಟರ್ ನೀಡಿದ್ದಾರೆ.
ಈ ಪೋಸ್ಟರ್‌ನಲ್ಲಿ ಜೂನ್ 20 ಎಂಬ ಪದಗಳನ್ನು ದಪ್ಪವಾಗಿ ತೋರಿಸಲಾಗಿದೆ, ಇದು ಚೀನೀ ಸ್ಮಾರ್ಟ್‌ಫೋನ್ ತಯಾರಕರಿಂದ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂಭವನೀಯ ದಿನಾಂಕದ ಸುಳಿವು ಎಂದು ಊಹಿಸಲಾಗಿದೆ.
ರಿಯಲ್‌ಮಿ GT 6 (Realme GT 6) ನಿರೀಕ್ಷಿತ ಬೆಲೆ: ಈ ಸ್ಮಾರ್ಟ್‌ಫೋನ್ ಈಗಾಗಲೆ ಬಿಡುಗಡೆಯಾಗಿರುವ ರಿಯಲ್‌ಮಿ GT Neo 6 ನ ರೂಪಾಂತರ ಎಂದು ಹೇಳಲಾಗುತ್ಇದ್ದು ಈ ಸ್ಮಾರ್ಟ್‌ಫೋನ್ ಬೆಲೆ ಆಧಾರವಾಗಿ ಹೇಳುವುದಾದರೆ. 12GB + 256GB ವೇರಿಯಂಟ್ CNY 2,099 ಅಂದರೆ ಸುಮಾರು 24,000 ರೂ. ಗಳು, 16GB + 256GB ವೇರಿಯಂಟ್‌ನ ಬೆಲೆ CNY 2,399 ಅಂದರೆ ಸುಮಾರು 27,000 ರೂ. ಗಳು, ಮತ್ತು ಟಾಪ್-ಎಂಡ್ 16GB + 1TB ಬೆಲೆಯು 2,999 ಅಂದರೆ ಸುಮಾರು 34,000 ರೂ. ಗಳಾಗಿವೆ
ರಿಯಲ್‌ಮಿ GT 6 (Realme GT 6) ನಿರೀಕ್ಷಿತ ಫೀಚರ್ಸ್: ವರದಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್ ರಿಯಲ್‌ಮಿ GT Neo 6 ಸ್ಮಾರ್ಟ್‌ಫೋನ್‌ನ ರೂಪಾಂತರ ಎಂದು ಹೇಳಲಾಗುತ್ತಿದೆ. ಈ ನಿಯೋ ಸ್ಮಾರ್ಟ್‌ಫೋನ್ ಅನ್ನು ಮೇ 9ರಂದು ಚೀನಾದಲ್ಲಿ ಬಿಡುಗಡೆ ಮಾಡಲಾಯಿತು. ಇದೇ ನಿಜವಾಗಿದ್ದರೆ ಮುಂಬರಲಿರುವ ಸ್ಮಾರ್ಟ್‌ಫೋನ್ 6.78 ಇಂಚಿನ 1.5K LTPO ಜೊತೆಗೆ AMOLED ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಈ ನಿಯೋ ಮಾದರಿ 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್ ಜೊತೆಗೆ 16GB RAM ಮತ್ತು 1TB ವರೆಗಿನ ಸ್ಟೋರೆಜ್ ಸಾಮರ್ಥ್ಯದ ಜೊತೆಗೆ ಸಜ್ಜುಗೊಂಡಿದೆ. ಇದು 50MP ಪ್ರಾಥಮಿಕ ಸೋನಿ ಸೆನ್ಸಾರ್ ಮತ್ತು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ಇದು 5,500mAh ಬ್ಯಾಟರಿ ಹಾಗೂ ಮತ್ತು 120W ಚಾರ್ಜರ್ ಹೊಂದಿದೆ.


Click it and Unblock the Notifications








