Home
ಮೊಬೈಲ್

4000 ಡಿಸ್ಕೌಂಟ್‌ ಗುರು..! ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ Realme ಫೋನ್.. ಜು.20ಕ್ಕೆ ಮಾರಾಟ

ರಿಯಲ್‌ಮಿ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಕಂಪನಿಯು Realme GT 6T ಅನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಹೊಸ ಮಿರಾಕಲ್ ನೇರಳೆ (Miracle Purple) ಬಣ್ಣವನ್ನು ನೀಡಲಾಗಿದೆ. (Realme GT 6T Smartphone miracle purple colour variant). ಇನ್ಮುಂದೆ ಈ ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಫ್ಲೂಯಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್ ಮತ್ತು ಮಿರಾಕಲ್ ನೇರಳೆ ಕಲರ್‌ಗಳಲ್ಲಿ ಖರೀದಿಸಬಹುದು. ಈ ಫೋನ್ ಅತ್ಯಾಕರ್ಷಕ ಡಿಸೈನ್, ದೊಡ್ಡ ಬ್ಯಾಟರಿ ಬ್ಯಾಕಪ್, ಅದ್ಭುತ ಕ್ಯಾಮೆರಾದೊಂದಿಗೆ ಗ್ರಾಹಕರನ್ನು ಆಕರ್ಷಿಸಿದೆ.

Realme GT 6T ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ಈ ಫೋನ್ 6.78 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಹೊಸ ಬಣ್ಣದ ರೂಪಾಂತರದ ಮಾರಾಟವು ಜುಲೈ 20 ರಿಂದ ಪ್ರಾರಂಭವಾಗಲಿದೆ. ಇದರ ಬೆಲೆ ಎಷ್ಟು? ಏನೆಲ್ಲಾ ಆಫರ್‌ ಲಭ್ಯವಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

4000 ಡಿಸ್ಕೌಂಟ್‌ ಗುರು..! ಮತ್ತೆ ಎಂಟ್ರಿ ಕೊಟ್ಟ Realme ಫೋನ್: ಜು.20ಕ್ಕೆ ಸೇಲ್

ಹೊಸ Realme GT 6T ವೇರಿಯಂಟ್ ಬೆಲೆ ಎಷ್ಟು?

ಹೊಸ ಮಿರಾಕಲ್ ಪರ್ಪಲ್ ಕಲರ್‌ನ Realme GT 6Tಯು 8GB + 256GB ಮತ್ತು 12GB + 512GB ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿರಲಿದೆ. 8GB 128GB ಮತ್ತು 12GB 512GB ಸ್ಟೋರೇಜ್‌ ರೂಪಾಂತರದ ಆರಂಭಿಕ ಬೆಲೆ 32,999 ರೂ. ಇದೆ. 12 GB RAM ಮತ್ತು 256 GB ಸ್ಟೋರೇಜ್‌ ವೇರಿಯಂಟ್‌ ಬೆಲೆ 35,999 ರೂ. ಆಗಿದೆ.

4,000 ರೂ. ಡಿಸ್ಕೌಂಟ್‌, ಜುಲೈ 20 ರಿಂದ ಮಾರಾಟ

Realme GT 6T ಸ್ಮಾರ್ಟ್‌ಫೋನ್ ಮಿರಾಕಲ್ ಪರ್ಪಲ್ ಬಣ್ಣದ ರೂಪಾಂತರವನ್ನು ಜುಲೈ 20 ರಿಂದ ಖರೀದಿಸಬಹುದು. Realmeನ ಅಧಿಕೃತ ವೆಬ್‌ಸೈಟ್ realme.com, Amazon ಸೇರಿದಂತೆ ಇತರ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿದೆ. ಗ್ರಾಹಕರು ಎಲ್ಲಾ ಬಣ್ಣಗಳ ಆಯ್ಕೆಗಳ ಖರೀದಿ ಮೇಲೆ 4,000 ರೂ.ಗಳ ರಿಯಾಯಿತಿಯನ್ನು ಸಹ ಪಡೆಯಬಹುದು.

Realme GT 6T ಸ್ಮಾರ್ಟ್‌ಫೋನ್ ವಿಶೇಷತೆಗಳು

Realme GT 6T ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. 6000nits ಗರಿಷ್ಠ ಬ್ರೈಟ್‌ನೆಸ್, 2500Hz ಮಾದರಿ ದರವನ್ನು ಹೊಂದಿದೆ. ಇದು ಮುಂಭಾಗದಲ್ಲಿ ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

4000 ಡಿಸ್ಕೌಂಟ್‌ ಗುರು..! ಮತ್ತೆ ಎಂಟ್ರಿ ಕೊಟ್ಟ Realme ಫೋನ್: ಜು.20ಕ್ಕೆ ಸೇಲ್

ಪ್ರೊಸೆಸರ್‌: ಈ ರಿಯಲ್‌ಮಿ ಹೊಸ ಬಣ್ಣದ ಸ್ಮಾರ್ಟ್‌ಫೋನ್ 4nm Qualcomm Snapdragon 7+ Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಇದನ್ನು Adreno 732 GPU ನೊಂದಿಗೆ ಪರಿಚಯಿಸಲಾಗಿದೆ. 12 GB ವರೆಗೆ LPDDR5X RAM ಮತ್ತು 512 GB UFS 4.0 ಸ್ಟೋರೇಜ್‌ ಒಳಗೊಂಡಿದೆ.

ಕ್ಯಾಮೆರಾ: Realme GT 6T ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಜೊತೆಗೆ 50 ಮೆಗಾಪಿಕ್ಸೆಲ್ Sony LYT ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP Sony IMX615 ಕ್ಯಾಮೆರಾವನ್ನು ಹೊಂದಿದೆ. ಇದು ನಿಮ್ಮ ಸೆಲ್ಫಿ ಅನುಭವವನ್ನು ಉತ್ತಮಗೊಳಿಸುತ್ತದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 120W ಸೂಪರ್ ವೋಕ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 5,500mAh ಬ್ಯಾಟರಿಯನ್ನು ಸಹ ಹೊಂದಿದೆ. ಇದು ಐಸ್‌ಬರ್ಗ್ ಆವಿ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಸಾಧನವನ್ನು 26 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿಯು ಹೇಳಿದೆ. ಹಾಗೆಯೇ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಕೂಡಾ ಲಭ್ಯವಿದೆ.

Best Mobiles in India

English summary
Realme GT 6T gets a new Miracle Purple colour option in India. This new colour option will be available only in 8GB/256GB and 12GB/256GB models. The sale of the new colour will start from July 20th midnight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+