Realme: ಇಂದಿನಿಂದ ಮಾರಾಟ ಆರಂಭಿಸಲಿದೆ ರಿಯಲ್‌ಮಿ GT 6T ಸರಣಿ ಮೊಬೈಲ್: ಬೆಲೆ, ಲಭ್ಯತೆ ತಿಳಿಯಿರಿ
ರಿಯಲ್‌ಮಿ (Realme) ಸಂಸ್ಥೆ ತನ್ನ ವಿಭಿನ್ನ ಶೈಲಿಯ ಫೀಚರ್ಸ್ ಅಗ್ಗದ ಬೆಲೆಯ ಮೂಲಕ ಜನಮನ್ನಣೆ ಪಡೆದುಕೊಂಡಿದೆ, ಈ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ದೇಶೀಯ ಮಾರುಟ್ಟೆಯಲ್ಲಿ ತನ್ನದೇ ಆದ ವಿಶೇಷ ಬೇಡಿಕೆ ಹೊಂದಿವೆ. ಅವುಗಳನ್ನು ಕೊಳ್ಳಲು ಗ್ರಾಹಕರು ಕೂಡ ಕಾದು ಕುಳಿತಿರುತ್ತಾರೆ, ಕಳೆದ ವಾರ ರಿಯಲ್‌ಮಿ GT 6T ಶ್ರೇಣಿಯ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಸೇಲ್ ಆರಂಭಿಸಿದೆ.
ರಿಯಲ್‌ಮಿ ಸಂಸ್ಥೆಯು ತನ್ನ ಮುಂದುವರೆದ ಜೆನರೇಷನ್ ಆಗಿರುವ GT ಸರಣಿಯ ರಿಯಲ್‌ಮಿ GT 6T ಯನ್ನು ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಮೊಬೈಲ್ ಅಧಿಕೃತವಾಗಿ ಬಿಡುಗಡೆಯಾದ ಒಂದು ವಾರದ ಬಳಿಕ ಇಂದು ಮಧ್ಯಾಹ್ನ 12 ಗಂಟೆಯಿಂದ ಭಾರತದಾದ್ಯಂತ ತನ್ನ ಮಾರಾಟವನ್ನು ಆರಂಭಿಸಲಿದೆ. ಈ ಮೊಬೈಲ್‌ನ ಆರಂಭಿಕ ಮಾರಾಟವು ಅಮೇಜಾನ್ ಮತ್ತು ರಿಯಲ್‌ಮಿ ವೆಬ್‌ಸೈಟ್ ಆಗಿರುವ realme.com ನಲ್ಲಿ ಲಭ್ಯವಿದೆ.

ಭಾರತದಲ್ಲಿ ರಿಯಲ್‌ಮಿ GT 6T ಬೆಲೆ ಮತ್ತು ಕೊಡುಗೆಗಳು:
ಈ ಮೊಬೈಲ್ ಭಾರತದಲ್ಲಿ ನಾಲ್ಕು ವೇರಿಯಂಟ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದ್ದು, 8+128 GB ವೇರಿಯಂಟ್‌ನ ಬೆಲೆ 33,999 ರೂ. 8+256 GB ವೇರಿಯಂಟ್‌ನ ಬೆಲೆ 35,999 ರೂ. 12+256 GB ವೇರಿಯಂಟ್‌ನ ಬೆಲೆ 37,999 ರೂ. ಮತ್ತು 12+512 GB ವೇರಿಯಂಟ್ ಬೆಲೆ 41,999 ರೂ. ಗಳಾಗಿವೆ.
ಆರಂಭಿಕ ಮಾರಾಟದ ಸಮಯದಲ್ಲಿ ಅಮೇಜಾನ್ ಇಂಡಿಯಾ ಮತ್ತು ರಿಯಲ್‌ಮಿ ವೆಬ್‌ಸೈಟ್‌ಗಳಲ್ಲಿ 3,000 ರೂ. ಗಳ ರಿಯಾಯಿತಿಯನ್ನು ಎಲ್ಲಾ ವೇರಿಯಂಟ್‌ಗಳಿಗೂ ನೀಡಲಿದೆ ಹಾಗೂ 4,000 ರೂ. ಗಳ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡುತ್ತಿವೆ. ಈ ರಿಯಾಯಿತಿಗಳ ಬಳಿಕ ರಿಯಲ್‌ಮಿ GT 6T ಯ 8+128 GB ವೇರಿಯಂಟ್ 26,999 ರೂ. ಗಳಿಗೆ ಸಿಗಲಿದೆ. 8+256 GB ವೇರಿಯಂಟ್ 28,999 ರೂ. ಗಳಿಗೆ ದೊರೆಯಲಿದೆ, 12+256 GB ವೇರಿಯಂಟ್ ರೂ 31,999 ರೂ .ಗಳಿಗೆ ಸಿಗಲಿದೆ. 12+512 GB ವೇರಿಯಂಟ್ 35,999 ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ.
ಇದರ ಜೊತೆಗೆ, ಅಮೇಜಾನ್ ಹಾಗೂ ರಿಯಲ್.ಕಾಮ್ ಮೊಬೈಲ್ ಎಕ್ಸ್‌ಚೇಂಜ್ ಮೇಲೆ ಹೆಚ್ಚುವರಿಯಾಗಿ 2,000 ರಿಯಾಯಿತಿ ಮತ್ತು ಫೋನ್ ಖರೀದಿಸಿದ ಆರು ತಿಂಗಳವರೆಗೆ ಯಾವುದೇ ಇಎಂಐ ವೆಚ್ಚ ಇರುವುದಿಲ್ಲ ಎಂದು ತಿಳಿಸಿದೆ.
ರಿಯಲ್‌ಮೀ GT 6T ಫೀಚರ್ಸ್: ಇದು ಫ್ಲೂಯಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್ ಬಣ್ಣದ ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 6.78-ಇಂಚಿನ ಅಮೋಲ್ಡ್ ಫುಲ್ HD+ ಡಿಸ್‌ಪ್ಲೇ ಜೊತೆಗೆ 2780 x 1264 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. 120Hz ವರೆಗಿನ ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು 6,000 ಗರಿಷ್ಠ ಸ್ಕ್ರೀನ್ ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗ್ 7+ Gen 3 SoC ನಿಂದ ಕಾರ್ಯನಿರ್ವಹಿಸಲಿದೆ.
ಇದು 12GB RAM ಮತ್ತು 512GB ಸ್ಟೋರೆಜ್ ಗರಿಷ್ಟ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5.0 ಬೆಂಬಲಿತವಾಗಿದೆ ಮತ್ತು ಕಂಪನಿಯು ಮೂರು ವರ್ಷಗಳ OS ಅಪ್ಡೇಟ್ ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್, 50MP ಪ್ರಾಥಮಿಕ ಲೆನ್ಸ್, 8MP ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದು 32MP ಫ್ರಂಟ್ ಕ್ಯಾಮೆರಾ ಹೊಂದಿದೆ. ಜೊತೆಗೆ 120W GaN ಚಾರ್ಜರ್‌ಗೆ ಬೆಂಬಲದೊಂದಿಗೆ 5,500mAh ಬ್ಯಾಟರಿ ಸೌಲಭ್ಯ ಹೊಂದಿದೆ.


Click it and Unblock the Notifications








