ಇಂದೇ ಲಾಂಚ್ ಆಗಲಿದೆ Realme GT 6T ಸ್ಮಾರ್ಟ್ ಫೋನ್: ಏನಿರಲಿದೆ ಫೀಚರ್ಸ್
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ತನ್ನದೇ ಆದ ವಿಭಿನ್ನ ಶೈಲಿಯ ಫೀಜರ್ಸ್ ಮೂಲಕ ಜನಮನ್ನಣೆ ಗಳಿಸಿದೆ, ಇದೀಗ ನೂತನ ಸ್ಮಾರ್ಟ್‌ಫೋನ್ ರಿಯಲ್‌ಮಿ GT 6T (Realme GT 6T) ಹೆಸರಿನ ನೂನತ ಮೊಬೈಲ್ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.
ರಿಯಲ್‌ಮಿ ಸಂಸ್ಥೆ ಜಿಟಿ ಸೀರಿಸ್ ಪರಿಚಯಿಸುವ ಕುರಿತು ದೇಶದಾದ್ಯಂತ ಪ್ರಚಾರ ಮಾಡುತ್ತಾ ಬಂದಿದ್ದು, ಇದೀಗ ಭಾರತದಲ್ಲಿ ಮೇ 22ರಂದು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈ ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್ 7+ Gen 3 ಪ್ರೊಸೆಸರ್, 8T LTPO ಅಮೋಲ್ಡ್ (AMOLED) ಡಿಸ್ಪ್ಲೇ, 120W ವೇಗದ ಚಾರ್ಜಿಂಗ್ ಸೇರಿದಂತೆ ಕೆಲವು ಮಹತ್ವಪೂರ್ಣ ಹೊಸ ಬಗೆಯ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಹಾಗಿದ್ರೆ ಈ ಮೊಬೈಲ್ ಫೀಚರ್ಸ್ ಕುರಿತು ಪೂರ್ಣ ಮಾಹಿತಿ ಬೇಕೆ ಈ ಲೇಖನ ಪೂರ್ತಿಯಾಗಿ ಓದಿ...

ರಿಯಲ್‌ಮಿ GT 6T (Realme GT 6T) ಭಾರತದಲ್ಲಿ ಬಿಡುಗಡೆಯ ಮಾಹಿತಿ:
ರಿಯಲ್‌ಮಿ ತನ್ನ ಇತ್ತೀಚಿನ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೇ 22-2024ರ ಮಧ್ಯಾಹ್ನ 12ಗಂಟೆಗೆ ಲಾಂಚ್ ಮಾಡಲಿದೆ. ಈ ಬಿಡುಗಡೆ ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಬ್ರ್ಯಾಂಡ್‌ನ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.
ಭಾರತದಲ್ಲಿ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್ ಬೆಲೆ ಮತ್ತು ಮಾರಾಟದ ದಿನಾಂಕ:
ಇದುವರೆಗೆ ಭಾರತದಲ್ಲಿ ಮೊಬೈಲ್‌ನ ನಿಖರವಾದ ಬೆಲೆ ಹಾಗೂ ಮೊಬೈಲ್ ಮಾರಾಟದ ಕುರಿತು ಅಧಿಕೃತ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ ಆದರೂ, ಕೆಲವು ವರದಿಗಳು ಬೆಲೆಯ ಕುರಿತು ಕೆಲವು ಸುಳಿವು ನೀಡಿದೆ. ಭಾರತದಲ್ಲಿ Realme GT 6T ಸ್ಮಾರ್ಟ್‌ಫೋನ್ ಅನ್ನು ಸುಮಾರು 31,999 ರೂ. ಗಳಿಗೆ ಸಿಗುವ ಸಾಧ್ಯತೆ ಇದ್ದು, ಇದರ ಹೊರತಾಗಿಯು ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ, ಇದರ ನಿಖರವಾದ ಬೆಲೆ ತಿಳಿಯಲು ಮೊಬೈಲ್ ಲಾಂಚ್ ಆಗುವವರೆಗೂ ಕಾಯುವುದು ಉತ್ತಮ.
ಇನ್ನೂ ಮಾರಾಟಕ್ಕೆ ಸಂಬಂಧಿಸಿದಂತೆ ಅಮೆಜಾನ್ ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್ ನಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ಈಗಾಗಲೆ ಧೃಡಪಡಿಸಿದೆ.
ರಿಯಲ್‌ಮಿ GT 6T ಫೀಚರ್ಸ್: ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್-ಟೋನ್ ಫಿನಿಶ್ ನೀಡುತ್ತದೆ. ಪ್ಯಾನೆಲ್‌ಗೆ ಮಿರರ್ ಫಿನಿಶ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಜೊತೆಗೆ ಎರಡು ಕ್ಯಾಮೆರಾದ ಮಾಡೆಲ್‌ಗಳನ್ನು ಹೊಂದಿದೆ. ಸದ್ಯ ಈ ಫೋನ್ ಸಿಲ್ವರ್ ಕಲರ್‌ನಲ್ಲಿ ದೊರೆಯಲಿದ್ದು, ಹೆಚ್ಚಿನ ಕಲರ್‌ಗಳಲ್ಲಿ ಮುಂದಿನ ದಿನಗಳಲ್ಲಿ ಪಡೆಯಬಹುದಾಗಿದೆ.
ಡಿಸ್‌ಪ್ಲೇ: ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 8T LTPO ಅಮೋಲ್ಡ್ (AMOLED) ಡಿಸ್‌ಪ್ಲೇ, 1-120Hz ನ ವೇರಿಯಬಲ್ ರಿಫ್ರೆಶ್ ರೇಟ್ ಹೊಂದಿರಲಿದೆ ಎಂದು ರಿಯಲ್‌ಮಿ ತಿಳಿಸಿದೆ. ಜೊತೆಗೆ 2780 x 1264 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ ಡಿಸ್‌ಪ್ಲೇ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2ರ ರಕ್ಷಣೆ ಪಡೆದುಕೊಂಡಿದೆ.
ಕಾರ್ಯಕ್ಷಮತೆ ಮತ್ತು ಓಎಸ್: ಕಾರ್ಯಕ್ಷಮತೆ ವಿಷಯದಲ್ಲಿ ರಿಯಲ್‌ಮಿ GT 6T ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ (Qualcomm Snapdragon) 7+ ಜೆನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಹೊಸ ಕ್ವಾಲ್ಕಾಮ್ ಚಿಪ್‌ಸೆಟ್ ಅನ್ನು ಒಳಗೊಂಡಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಇದು ಎಂದು ಕಂಪನಿ ಹೇಳಿಕೊಂಡಿದೆ.
ಕ್ಯಾಮೆರಾ ಮತ್ತು ಬ್ಯಾಟರಿ: ಇದು ಡ್ಯುಯೆಲ್ ಬ್ಯಾಕ್ ಕ್ಯಾಮೆರಾ ಹೊಂದಿದ್ದು, ಓಐಎಸ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಶೂಟರ್ ಕ್ಯಾಮೆರಾ ಹೊಂದಿರಲಿದೆ.
ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, 120W ವೇಗದ ಚಾರ್ಜಿಂಗ್ ಸಹ ಹೊಂದಿದ್ದು, ಕೇವಲ 10 ನಿಮಿಷಗಳಲ್ಲಿ ಮೊಬೈಲ್ ಅನ್ನು 50 ಪ್ರತಿಶತದಷ್ಟು ಚಾರ್ಜ್ ಮಾಡಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ.


Click it and Unblock the Notifications








