Home
ಮೊಬೈಲ್

Realme GT 8 Pro ರಿಲೀಸ್‌ಗೂ ಮೊದಲೇ GT 7 Pro ಬೆಲೆಯಲ್ಲಿ ಭಾರೀ ಇಳಿಕೆ!

ಭಾರತದ ಮಾರುಕಟ್ಟೆಗೆ ಬಹುನಿರೀಕ್ಷಿತ Realme GT 8 Pro ಸ್ಮಾರ್ಟ್‌ಫೋನ್ ಇದೇ ನವೆಂಬರ್ 20ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲೇ ಇದರ ಹಿಂದಿನ ಪೀಳಿಗೆಯ Realme GT 7 Pro ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ದೇಶದಲ್ಲಿ ಬಿಡುಗಡೆಯಾದಾಗ ₹59,999 ರೂ. ಬೆಲೆಯಲ್ಲಿ ಪರಿಚಯಗೊಂಡಿದ್ದ Realme GT 7 Pro ಸ್ಮಾರ್ಟ್‌ಫೋನ್ ಈಗ ₹15,501 ರೂ. ರಿಯಾಯಿತಿಯೊಂದಿಗೆ ಖದೀರಿಗೆ ಲಭ್ಯವಿದೆ. ಹಾಗಾದರೆ, Realme GT 7 Pro ಸ್ಮಾರ್ಟ್‌ಫೋನ್ ಹೇಗಿದೆ?, ಇದರ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Realme GT 7 Pro ಹೊಸ ಬೆಲೆ: ಹೆಚ್ಚು ವೈಶಿಷ್ಟ್ಯಗಳು, ಕಡಿಮೆ ಖರ್ಚು
ದೇಶದಲ್ಲಿ ಬಿಡುಗಡೆಯಾದಾಗ Realme GT 7 Pro ಸ್ಮಾರ್ಟ್‌ಫೋನ್ ಬೆಲೆ ₹59,999 ರೂ. ಆಗಿತ್ತು. ಇದೀಗ ₹15,501 ರೂ. ರಿಯಾಯಿತಿಯೊಂದಿಗೆ ಕೇವಲ ₹44,498 ರೂ.ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಜೊತೆಗೆ, ಆಯ್ದ ಬ್ಯಾಂಕ್ ಕಾರ್ಡ್‌ಗಳಿಂದ ಖರೀದಿಸಿದರೆ ₹400 ರೂ.ಗಳ ಹೆಚ್ಚುವರಿ ತಕ್ಷಣದ ರಿಯಾಯಿತಿ ಕೂಡ ಸಿಗುತ್ತದೆ. ನೀವು ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡಿದರೆ ಗರಿಷ್ಠ ₹33,300 ರೂ.ವರೆಗೆ ಎಕ್ಸ್ಚೇಂಜ್ ಬೋನಸ್ ಪಡೆಯುವ ಅವಕಾಶವಿದೆ. ಆದರೆ,ವಿನಿಮಯ ಮೌಲ್ಯವು ನಿಮ್ಮ ಹಳೆಯ ಫೋನ್‌ನ ಸ್ಥಿತಿ ಹಾಗೂ ಮಾದರಿಯ ಮೇಲೆ ಅವಲಂಬಿತವಾಗಿರುತ್ತದೆ.

Realme GT 8 Pro ರಿಲೀಸ್‌ಗೂ ಮೊದಲೇ GT 7 Pro ಬೆಲೆಯಲ್ಲಿ ಭಾರೀ ಇಳಿಕೆ!

Realme GT 7 Pro ವೈಶಿಷ್ಟ್ಯಗಳು: ಪ್ರೀಮಿಯಂ ಡಿಸೈನ್, ಫ್ಲ್ಯಾಗ್‌ಶಿಪ್ ಪರ್ಫಾರ್ಮೆನ್ಸ್
ಈ Realme GT 7 Pro ಈಗ ಹಿಂದಿನ ಪೀಳಿಗೆಯ ಸ್ಮಾರ್ಟ್‌ಫೋನ್ ಆಗಬಹುದು. ಆದರೆ, ಇದು ಈಗಲೂ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಬಹುದು.

  • Realme GT 7 Pro "ಮಾರ್ಸ್ ಡಿಸೈನ್" ಅನ್ನು ಹೊಂದಿದ್ದು, ಟೆಕ್ಸ್ಚರ್ಡ್ ಬ್ಯಾಕ್, ಬಾಳಿಕೆ ಬರುವ ವಾಯುಯಾನ ಅಲ್ಯೂಮಿನಿಯಂ ಫ್ರೇಮ್ ಮತ್ತು ಬಾಗಿದ ಡಿಸ್ಪ್ಲೇ ಹೊಂದಿದೆ.
  • ಈ ಫೋನಿನಲ್ಲಿ 6.78 ಇಂಚಿನ FHD+ AMOLED ಡಿಸ್ಪ್ಲೇ ಇದೆ, ಇದು HDR10+, Dolby Vision 6,500 ನಿಟ್ಸ್ ಬ್ರೈಟ್ನೆಸ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ.
  • ಕಾರ್ಯಕ್ಷಮತೆಗಾಗಿ, Snapdragon 8 Elite ಚಿಪ್‌ಸೆಟ್ ಇದೆ. ಇದು ಪ್ರಸ್ತುತವೂ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ಅತೀ ವೇಗದ ಪ್ರದರ್ಶನ ನೀಡುವ ಚಿಪ್‌ಸೆಟ್ ಆಗಿದೆ.
  • ಕ್ಯಾಮೆರಾ ವಿಭಾಗದಲ್ಲಿ, ಫೋನಿನ ಹಿಂಭಾಗದಲ್ಲಿ 50MP ಪ್ರಾಥಮಿಕ ಸೆನ್ಸರ್, 50MP ಟೆಲಿಫೋಟೋ (3x ಆಪ್ಟಿಕಲ್ ಜೂಮ್ ಸಹಿತ) ಮತ್ತು 8MP ಅಲ್ಟ್ರಾ ವೈಡ್ ಲೆನ್ಸ್ ದೊರೆಯುತ್ತದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
  • ಬ್ಯಾಟರಿ ವಿಚಾರದಲ್ಲಿ, ಈ ಫೋನ್ 5,800mAh ಬ್ಯಾಟರಿ ಹೊಂದಿದ್ದು, 120W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಇದು ಗೇಮರ್ಸ್ ಮತ್ತು ಹೈ ಪರ್ಫಾರ್ಮೆನ್ಸ್ ಯೂಸರ್‌ಗಳಿಗೆ ಪರ್ಫೆಕ್ಟ್ ಆಯ್ಕೆಯಾಗಿದೆ.

Realme GT 8 Pro: ಲಾಂಚ್ ವಿವರಗಳು
ಹೊಸ Realme GT 8 Pro ಸ್ಮಾರ್ಟ್‌ಫೋನ್ ದೇಶದಲ್ಲಿ ಇದೇ ನವೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬಿಡುಗಡೆಯಾದ ನಂತರ Flipkart ಹಾಗೂ Realme ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.ಈ Realme GT 8 Pro ಸ್ಮಾರ್ಟ್‌ಫೋನ್ ದೇಶದ ಎರಡನೇ Snapdragon 8 Elite Gen 5 ಚಿಪ್‌ಸೆಟ್ ಹೊಂದಿರುವ ಫೋನ್ ಆಗಲಿದೆ ( ಮೊದಲನೆಯದಾಗಿ ಇದೇ ನವೆಂಬರ್ 13 ರಂದು OnePlus 15 ಫೋನ್ ಬಿಡುಗಡೆಯಾಗಲಿದೆ). ಇನ್ನು ಈ Realme GT 8 Pro ಫೋನ್‌ನ ಆರಂಭಿಕ ಬೆಲೆ ₹60,000 ಒಳಗೆ ಇರಬಹುದು ಎಂಬ ನಿರೀಕ್ಷೆ ಇದೆ.

Realme GT 7 Pro : ಪ್ರಸ್ತುತ ಖರೀದಿಸಬಹುದೇ?
ಹೊಸ ಮಾದರಿ Realme GT 8 Pro ಬಂದರೂ, ಈಗಿನ ಬೆಲೆ ಇಳಿಕೆಯಿಂದ GT 7 Pro ಇನ್ನೂ ಪ್ರೀಮಿಯಂ ವಿಭಾಗದಲ್ಲಿ ಶಕ್ತಿಯುತ ಸ್ಪರ್ಧಿಯಾಗಿದೆ. ಗೇಮಿಂಗ್, ಪರ್ಫಾರ್ಮೆನ್ಸ್ ಹಾಗೂ ಕ್ಯಾಮೆರಾ ಅಂಶಗಳಲ್ಲಿ ಈ ಫೋನ್ ಇನ್ನೂ ಮೌಲ್ಯಯುತ ಆಯ್ಕೆಯಾಗಿಯೇ ಉಳಿಯುತ್ತದೆ. ಹಾಗಾಗಿ, ಪ್ರೀಮಿಯಂ ಫೀಚರ್‌ಗಳು, ವೇಗದ ಚಾರ್ಜಿಂಗ್ ಮತ್ತು ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆ ಬಯಸುವವರಿಗೆ ಇದು ಈಗ ಅತ್ಯುತ್ತಮ ಖರೀದಿ ಸಮಯ ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, Realme GT 8 Pro ಆಗಮನಕ್ಕಾಗಿ ನೀವು ಕೂಡ ಕಾಯುತ್ತಿದ್ದೀರಾ? ಹಾಗಾದರೆ ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Realme GT 7 Pro, which originally debuted at ₹59,999, has received a huge price reduction of ₹15,501. This move comes just days before the much-anticipated launch of the Realme GT 8 Pro in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+