Realme: ನ.4ಕ್ಕೆ ಬರುತ್ತೆ ಹೊಸ ಫೋನ್! ರಾಶಿ ಫೀಚರ್ಸ್.. ಲೀಕ್ ಆಯ್ತು ಬೆಲೆ!
ರಿಯಲ್‌ಮಿ (Realme) ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದು ರಿಯಲ್‌ಮಿ GT 7 ಪ್ರೊ (Realme GT 7 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿಶೇಷವೆಂದರೆ, ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಇದು ಈ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. ಕಂಪನಿಯು, ಈ ಹೊಸ ಮೊಬೈಲ್ ಅನ್ನು ಮುಂದಿನ ತಿಂಗಳು (ನವೆಂಬರ್) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ರಿಯಲ್‌ಮಿ GT 7 ಪ್ರೊ ಮೊದಲು ಚೀನಾದಲ್ಲಿ ನವೆಂಬರ್ 4 ರಂದು ಲಾಂಚ್ ಆಗಲಿದೆ. ಕೆಲವು ದಿನಗಳ ನಂತರ, ಈ ಮೊಬೈಲ್ ಭಾರತದಲ್ಲೂ ಬಿಡುಗಡೆಯಾಗಲಿದೆ. ಪ್ರಸ್ತುತ, ಕಂಪನಿಯು ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ನವೆಂಬರ್ ಎರಡನೇ ವಾರದಲ್ಲಿ ಕಂಪನಿಯು ಹೊಸ ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಮೈಕ್ರೊ ಕ್ವಾಡ್ ಕರ್ವ್ ವಿನ್ಯಾಸ ಹೊಂದಿದೆ. ಇದರಲ್ಲಿ ಸ್ಯಾಮ್‌ಸಂಗ್‌ನ ಇಕೋ ಒಎಲ್‌ಇಡಿ ಪ್ಲಸ್ ಪ್ಯಾನೆಲ್ ಲಭ್ಯವಿರಲಿದೆ.

'ಎಐ ಪವರ್‌ಹೌಸ್' - ಯಾವೆಲ್ಲಾ ಎಐ ಫೀಚರ್ಸ್‌ಗಳಿವೆ?
ಕಂಪನಿಯು ರಿಯಲ್‌ಮಿ GT7 ಪ್ರೋ ಅನ್ನು 'ಎಐ ಪವರ್‌ಹೌಸ್' ಎಂದು ಕರೆದಿದೆ. ಈ ಫೋನ್ ರಿಯಲ್‌ಮಿ ಯುಐ 6.0 ನಲ್ಲಿ ಬಿಡುಗಡೆಯಾಗಲಿದೆ. ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿದೆ. ಎಐ ಸ್ಕೆಚ್ ಟು ಇಮೇಜ್, ಎಐ ಮೋಷನ್ ಡೆಬ್ಲರ್, ಎಐ ಗೇಮ್ ಸೂಪರ್ ರೆಸಲ್ಯೂಶನ್ ಮತ್ತು ಎಐ ಟೆಲಿಫೋಟೋ ಅಲ್ಟ್ರಾ ಕ್ಲಾರಿಟಿಯಂತಹ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಮೇಜ್ ಎಡಿಟಿಂಗ್, ಸ್ಕೆಚ್ ಮೇಕಿಂಗ್ ಮತ್ತು ಮೊಬೈಲ್ ಗೇಮಿಂಗ್ ಸುಲಭವಾಗಲಿದೆ.
ರಿಯಲ್‌ಮಿ GT 7 ಪ್ರೊ ಫೋನಿನ ಬೆಲೆ
ಕಂಪನಿಯು ಈವರೆಗೆ ಬಿಡುಗಡೆ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಲ್‌ಮಿ GT7 ಪ್ರೊ ಅತ್ಯಂತ ಶಕ್ತಿಶಾಲಿಯಾಗಿರಲಿದೆ. ಈ ಫ್ಲ್ಯಾಗ್‌ಶಿಪ್ ಫೋನಿನ ಬೆಲೆ 60 ಸಾವಿರ ರೂ. ಆಗಿರಲಿದೆ. ಫೋನಿನ 12GB ಸ್ಟೋರೇಜ್ ಬೆಲೆ 55,000 ರೂ. ಇರಲಿದೆ. ಮತ್ತು 16GB RAM ಸ್ಟೋರೇಜ್ ಬೆಲೆ 65,000 ಕ್ಕಿಂತ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ.
ರಿಯಲ್‌ಮಿ GT 7 ಪ್ರೊ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ GT 7 ಪ್ರೊ ಮೊಬೈಲ್ 6.7 ಇಂಚಿನ 1.5K ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಫೋನಿನಲ್ಲಿ ಸ್ಯಾಮ್‌ಸಂಗ್ ಒಎಲ್‌ಇಡಿ ಪ್ಯಾನೆಲ್ ಇರಲಿದೆ. ಜೊತೆಗೆ, ಕ್ವಾಲ್ಕಾಮ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊದಲೇ ಹೇಳಿದಂತೆ ರಿಯಲ್‌ಮಿ GT 7 ಪ್ರೊ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲ ಫೋನ್ ಆಗಿರುತ್ತದೆ. ಈ ಪ್ರೊಸೆಸರ್ 3ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಾಗಿದೆ. ಅಡ್ರಿನೊ ಜಿಪಿಯು ಮತ್ತು ಹೆಕ್ಸಾಗನ್ ಎನ್‌ಪಿಯು ಜೊತೆಗೆ ಓರಿಯನ್ ಸಿಪಿಯು ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ.
ಸ್ಟೋರೇಜ್ ಆಯ್ಕೆ
ಮುಂಬರುವ ರಿಯಲ್‌ಮಿ GT 7 ಪ್ರೊ ಮೊಬೈಲ್ 16GB RAM ಹೊಂದಿರಲಿದೆ. ಮೊಬೈಲ್‌ನ ಟಾಪ್ ವೇರಿಯಂಟ್ UFS 4.0 ಸ್ಟೋರೇಜ್ ಆಯ್ಕೆಯೊಂದಿಗೆ 1TB ಮೆಮೊರಿಯನ್ನು ಹೊಂದಿರಲಿದೆ. ಈ ಫೋನಿನ ಮೂಲ ರೂಪಾಂತರವನ್ನು 12GB RAM ನೊಂದಿಗೆ ಬಿಡುಗಡೆ ಮಾಡಲಾಗುವುದು. ಇದು 256GB ಸ್ಟೋರೇಜ್ ಒಳಗೊಂಡಿರಲಿದೆ.
ಕ್ಯಾಮೆರಾ ಸೆಟಪ್
ಕಂಪನಿಯು ರಿಯಲ್‌ಮಿ GT 7 ಪ್ರೊ ಅನ್ನು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಲಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX882 ಟೆಲಿಫೋಟೋ ಕ್ಯಾಮೆರಾ ಹೊಂದಿರಲಿದೆ. ಇದು ಪೆರಿಸ್ಕೋಪ್ ಲೆನ್ಸ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಮೊಬೈಲ್‌ನಲ್ಲಿ ಎಐ ಟೆಲಿಫೋಟೋ ಅಲ್ಟ್ರಾ ಕ್ಲಾರಿಟಿ ವೈಶಿಷ್ಟ್ಯ ಲಭ್ಯವಿರುತ್ತದೆ. ಈ ಫೋನ್ 3x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಬೆಂಬಲವನ್ನು ಸಹ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ಸಿಲಿಕಾನ್ ಕಾರ್ಬನ್ ನೆಗೆಟಿವ್ ಎಲೆಕ್ಟ್ರೋಡ್ ಬ್ಯಾಟರಿ ಆಗಿರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಫೋನ್‌ನಲ್ಲಿ 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.


Click it and Unblock the Notifications








