ಧೂಳೆಬ್ಬಿಸಲು ಬಂತು Realme 5G ಫೋನ್; 6500mAh ಬಿಗ್ ಬ್ಯಾಟರಿ.. 512GB ಸ್ಟೋರೇಜ್.. ಬಜೆಟ್ ಬೆಲೆ!
ರಿಯಲ್‌ಮಿ ತನ್ನ ಬಹುನಿರೀಕ್ಷಿತ 5G ಫೋನನ್ನು ಬಿಡುಗಡೆ ಮಾಡಿದೆ. ಇದು ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ (Realme GT 7 Pro Racing Edition) ಹೆಸರಿನೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಹೌದು, ಕಂಪನಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ರಿಯಲ್‌ಮಿ GT 7 ಪ್ರೊ ಅನ್ನು ಪರಿಚಯಿಸಿತ್ತು. ಈ ಪ್ರೊಸೆಸರ್‌ನೊಂದಿಗೆ ಭಾರತಕ್ಕೆ ಬಂದ ಮೊದಲ ಸ್ಮಾರ್ಟ್‌ಫೋನ್ ಇದಾಗಿತ್ತು. ಇದನ್ನು 59,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಇದೀಗ, ರಿಯಲ್‌ಮಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ವಿಶ್ವದ ಅತ್ಯಂತ ಅಗ್ಗದ ಫೋನನ್ನು ಅನಾವರಣಗೊಳಿಸಿದೆ.
ಹೌದು, ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ಅಧಿಕೃತವಾಗಿ ಇಂದು ಲೋಕಾರ್ಪಣೆಗೊಂಡಿದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 120W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಜೊತೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB RAM + 512GB ಸ್ಟೋರೇಜ್ ಸೇರಿದಂತೆ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಸ್ಮಾರ್ಟ್‌ಫೋನ್ 6.78 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಇದು ಮೈಕ್ರೋ ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಡಾಲ್ಬಿ ವಿಷನ್ ಬೆಂಬಲ ಸಹ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.
RAM ಮತ್ತು ಸ್ಟೋರೇಜ್
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು 12GB RAM ಮತ್ತು 16GB RAM ಹೊಂದಿದೆ. ಈ ಫೋನಿ ಮೂಲ ರೂಪಾಂತರವು 12GB RAM + 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಟಾಪ್ ವೇರಿಯಂಟ್ 16GB RAM + 512GB ಸ್ಟೋರೇಜ್ ಆಯ್ಕೆ ಪಡೆದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್ ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ತಂತ್ರಜ್ಞಾನವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಸಹ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಈ ಫೋನ್ ಬೈಪಾಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ ಬೆಲೆ
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 12GB RAM + 256GB ಸ್ಟೋರೇಜ್ ಆಯ್ಕೆಯ ಬೆಲೆ 36,820 ರೂ. ಆಗಿದೆ. 12GB RAM + 512GB ಸ್ಟೋರೇಜ್ ರೂಪಾಂತರವನ್ನು 43,950 ರೂ.ಗೆ ಪರಿಚಯಿಸಲಾಗಿದೆ. 16GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 40,390 ರೂ. ಇದೆ.
ಫೋನಿನ 16GB RAM + 512GB ಸ್ಟೋರೇಜ್ ರೂಪಾಂತರವನ್ನು 47,510 ರೂ. ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದು ಬ್ಲೂ ನೆಪ್ಚೂನ್ ಎಕ್ಸ್‌ಪ್ಲೋರರ್ ಆವೃತ್ತಿ ಮತ್ತು ಸ್ಟಾರ್ ಟ್ರಯಲ್ ಟೈಟಾನಿಯಂ ಬಣ್ಣಗಳಲ್ಲಿ ಮಾರಾಟವಾಗಲಿದೆ. ಪ್ರಸ್ತುತ, ಈ ಮೊಬೈಲ್ ಚೀನಾದಲ್ಲಿ ಖರೀದಿಗೆ ಲಭ್ಯವಿದೆ. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ಪ್ರಕಟಿಸಿಲ್ಲ.


Click it and Unblock the Notifications








