ಭಾರತದಲ್ಲಿ ಮೇ 27 ರಂದು Realme GT 7T ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳು!
ಶೆನ್‌ಜೆನ್ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ತನ್ನ ಮುಂದಿನ ಮಿಡ್‌ರೇಂಜ್ ಸ್ಮಾರ್ಟ್‌ಫೋನ್ Realme GT 7T ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮೇ 27 ರಂದು ಮಧ್ಯಾಹ್ನ 1:30 ಕ್ಕೆ ಬಿಡುಗಡೆ ಮಾಡಲು ಸಿದ್ಧವಾಗಿದೆ. Realme ಸಂಸ್ಥೆಯು ಈಗಾಗಲೇ ಬಿಡುಗಡೆಗೊಳಿಸಿರುವ ಟೀಸರ್‌ಗಳ ಮೂಲಕ ಈ Realme GT 7T ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹೊರಹಾಕಿದೆ. ಈ ಸ್ಮಾರ್ಟ್‌ಫೋನ್ MediaTek Dimensity 8400 Max ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಮತ್ತು ಇದು 120W ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 7,000mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ದೃಢಪಡಿಸಲಾಗಿದೆ. ಕಂಪನಿಯ YouTube ಚಾನೆಲ್ ಮೂಲಕ ಈ ಬಿಡುಗಡೆ ಸಮಾರಂಭವನ್ನು ನೇರಪ್ರಸಾರ ವೀಕ್ಷಿಸಬಹುದಾಗಿದೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
Realme GT 7T ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
Realme GT 7T ಸ್ಮಾರ್ಟ್‌ಫೋನಿನ ನಿಖರ ಬೆಲೆಯ ಬಗ್ಗೆ ಕಂಪನಿ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಫೋನ್ ಬಿಡುಗಡೆಯಾದಾಗ ಮಾತ್ರ ಇದರ ಬೆಲೆ ತಿಳಿಯಲಿದೆ. ಆದರೆ, ಯುರೋಪ್‌ನಲ್ಲಿ Realme GT 7T EUR 699 (ಸುಮಾರು ₹69,800) ಬೆಲೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ, ಈ ಹ್ಯಾಂಡ್‌ಸೆಟ್ Amazon, Realme ಇಂಡಿಯಾ ಇ-ಸ್ಟೋರ್ ಮತ್ತು ಇತರ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಹಾಗೂ ಇಲ್ಲಿನ ಬೆಲೆ ಯೂರೋಪ್‌ಗಿಂತಲೂ ಕಡಿಮೆ ಇರುವುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರ.!
Realme GT 7T : ವಿನ್ಯಾಸ
Realme ತನ್ನ ವೆಬ್‌ಸೈಟ್‌ನಲ್ಲಿ Realme GT 7T ಸ್ಮಾರ್ಟ್‌ಫೋನ್ಅನ್ನು ಈಗಾಗಲೇ ಪಟ್ಟಿ ಮಾಡಿದೆ, ಇದು ಫೋನ್‌ನ ವಿನ್ಯಾಸವನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ ರೇಸಿಂಗ್ ಹಳದಿ, ಐಸ್‌ಸೆನ್ಸ್ ಕಪ್ಪು ಮತ್ತು ಐಸ್‌ಸೆನ್ಸ್ ನೀಲಿ ಬಣ್ಣಗಳಲ್ಲಿ ಲಭ್ಯವಿರಲಿದೆ. ಹ್ಯಾಂಡ್‌ಸೆಟ್ ಸಮತಟ್ಟಾದ ಅಂಚುಗಳು ಮತ್ತು ದುಂಡಾದ ಮೂಲೆಗಳನ್ನು ಹೊಂದಿದ್ದು, ನೀಲಿ ಮತ್ತು ಕಪ್ಪು ಬಣ್ಣದ ರೂಪಾಂತರಗಳು ಕಿತ್ತಳೆ ಬಣ್ಣದ ಪವರ್ ಬಟನ್ ಅನ್ನು ಹೊಂದಿವೆ. ಹಳದಿ ಬಣ್ಣದ ಮಾದರಿಯು ಬಣ್ಣ-ಸಂಯೋಜಿತ ಪವರ್ ಬಟನ್ ಅನ್ನು ಹೊಂದಿದೆ.
Realme GT 7T ಡಿಸ್‌ಪ್ಲೇ
ಡಿಸ್‌ಪ್ಲೇ ವಿಷಯಕ್ಕೆ ಬಂದರೆ, Realme GT 7T ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಹೊಂದಿರುವ 6.8-ಇಂಚಿನ 1.5K LTPS AMOLED ಡಿಸ್ಪ್ಲೇ ಅನ್ನು ಹೊಂದಿರುತ್ತದೆ ಎಂದು ಇತ್ತೀಚಿನ ವರದಿಗಳು ಸೂಚಿಸುತ್ತವೆ. ಈ ಪರದೆಯು 6,000 ನಿಟ್‌ಗಳ ಗರಿಷ್ಠ ಹೊಳಪಿನ ಮಟ್ಟವನ್ನು ನೀಡುತ್ತದೆ ಎಂದು Realme ಹೇಳಿಕೊಂಡಿದೆ. ಡಿಸ್‌ಪ್ಲೇ ಕುರಿತ ಇನ್ನಷ್ಟು ವಿವರಗಳು ಬಿಡುಗಡೆಯಾದ ನಂತರವೇ ಪ್ರಕಟವಾಗುವ ನಿರೀಕ್ಷೆ ಇದೆ.
Realme GT 7T : ಕಾರ್ಯಕ್ಷಮತೆ ಮತ್ತು OS
Realme GT 7T ಸ್ಮಾರ್ಟ್‌ಫೋನ್ ಇತ್ತೀಚೆಗೆ ಅನಾವರಣಗೊಂಡ MediaTek Dimensity 8400 Max ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು Realme ದೃಢಪಡಿಸಿದೆ. ಈ ಚಿಪ್‌ಸೆಟ್ AnTuTu ಬೆಂಚ್‌ಮಾರ್ಕ್ ಪರೀಕ್ಷೆಯಲ್ಲಿ 1.78 ಮಿಲಿಯನ್ ಅಂಕಗಳನ್ನು ಗಳಿಸಿದೆ ಎಂದು ಹೇಳಲಾಗಿದೆ, ಇದು ಅದರ ಪ್ರಬಲ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Realme ಯ Realme UI 6.0 ಸ್ಕಿನ್‌ನೊಂದಿಗೆ Android 15 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Realme GT 7T : ಕ್ಯಾಮೆರಾಗಳು
Realme GT 7T ಸ್ಮಾರ್ಟ್‌ಫೋನ್ ಕ್ಯಾಮೆರಾ ವ್ಯವಸ್ಥೆಯು ಗಮನಾರ್ಹ ಅಪ್‌ಗ್ರೇಡ್‌ಗಳನ್ನು ಪಡೆಯಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿನ ಪಟ್ಟಿಯ ಪ್ರಕಾರ, ಇದು Sony IMX 896 ಸೆನ್ಸಾರ್ ಹೊಂದಿರುವ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿಗಾಗಿ, ಇದು ಹೋಲ್-ಪಂಚ್ ಡಿಸ್ಪ್ಲೇ ಕಟೌಟ್‌ನಲ್ಲಿರುವ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.
ಒಟ್ಟಾರೆಯಾಗಿ, Realme GT 7T ಸ್ಮಾರ್ಟ್‌ಫೋನ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಸ್ಮಾರ್ಟ್‌ಫೋನ್ ಪ್ರಿಯರು ಭಾರೀ ಕುತೂಹಲದಿಂದ ಎದುರುನೋಡುತ್ತಿರುವ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಲಭ್ಯವಾಗಲಿದೆ ಮತ್ತು ಇದರ ಸಂಪೂರ್ಣ ವೈಶಿಷ್ಟ್ಯಗಳೇನು ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








