Home
ಮೊಬೈಲ್

ಭಾರತಕ್ಕೆ ನವೆಂಬರ್‌ನಲ್ಲಿ Realme GT 8 Pro ಆಗಮನ ಅಧಿಕೃತ: ಮತ್ತೊಂದು ಸಂಚಲನ?

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Realme GT 8 Pro ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಅಧಿಕೃತವಾಗಿ ಘೋಷಿಸಿದೆ. ಕಳೆದ ತಿಂಗಳು ಮಧ್ಯಭಾಗದಲ್ಲಿ ಚೀನಾದಲ್ಲಿ ಪರಿಚಯವಾಗಿದ್ದ Realme GT 8 ಸರಣಿಯಲ್ಲಿ ಬೇಸ್ Realme GT 8 ಮತ್ತು Realme GT 8 Pro ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗತ್ತು. ಇವುಗಳಲ್ಲಿ Realme GT 8 Pro ಸ್ಮಾರ್ಟ್‌ಫೋನ್ ಅನ್ನು ಇದೇ ನವೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಪರಿಚಯಿಸುವುದನ್ನು ಕಂಪೆನಿಯು ಖಚಿತಪಡಿಸಿದೆ.

Realme ತನ್ನ ಅಧಿಕೃತ X (ಹಿಂದೆ ಟ್ವಿಟರ್) ಪೋಸ್ಟ್‌ನಲ್ಲಿ, ಭಾರತದಲ್ಲಿ ನವೆಂಬರ್‌ ತಿಂಗಳು Realme GT 8 Pro ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಜೊತೆಗೆ, ಈ ಫೋನ್ ಕುರಿತು ರಿಯಲ್‌ಮಿ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಎರಡು ಮೀಸಲಾದ ಮೈಕ್ರೋಸೈಟ್‌ಗಳನ್ನು ತೆರೆಯಲಾಗಿದೆ. ಇವುಗಳಲ್ಲಿ, ಭಾರತೀಯ ಮಾದರಿಯ Realme GT 8 Pro ಫೋನ್ ಕೂಡ Snapdragon 8 Elite Gen 5 ಚಿಪ್‌ಸೆಟ್‌ ಹೊಂದಿರಲಿದೆ ಮತ್ತು Ricoh GR ಹಿಂಭಾಗದ ಕ್ಯಾಮೆರಾ ಹೊಂದಿರುವುದನ್ನು ದೃಢಪಡಿಸಲಾಗಿದೆ.

ಭಾರತದ ಮಾರುಕಟ್ಟೆಗೆ ವೆನಿಲ್ಲಾ ಮಾದರಿಯ ಬೇಸ್ Realme GT 8 ಆಗಮನದ ಕುರಿತು Realme ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ದೇಶದಲ್ಲಿ ಈ ಎರಡೂ ಫೋನ್‌ಗಳು ಕೂಡ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ನಾವು ಗಮನಿಸುವುದಾದರೆ, ಕಳೆದ ಅಕ್ಟೋಬರ್ 21 ರಂದು ಚೀನಾದಲ್ಲಿ Realme GT 8 ಸರಣಿಯನ್ನು ಮೊದಲು ಅನಾವರಣಗೊಳಿಸಿತು.ಈ ಎರಡೂ ಸ್ಮಾರ್ಟ್‌ಪೋನ್‌ಗಳು ಹೈ-ಎಂಡ್ ಫೀಚರ್ಸ್ ಗಳೊಂದಿಗೆ ಬಂದಿವೆ. ಹಾಗಾದರೆ, ಹೊಸ Realme GT 8 ಮತ್ತು Realme GT 8 Pro ಎರಡು ಫೋನ್‌ಗಳು ಹೇಗಿವೆ?, ಅಲ್ಲಿನ ಬೆಲೆಗಳು ಎಷ್ಟು ಎಂಬುದನ್ನು ನೋಡೊಣ ಬನ್ನಿ.

Realme GT 8 Pro: ಪ್ರಮುಖ ವೈಶಿಷ್ಟ್ಯಗಳು
ಚೀನಾದಲ್ಲಿ ಬಿಡುಗಡೆಯಾಗಿರುವ Realme GT 8 Pro ಮಾದರಿಯು Qualcomm Snapdragon 8 Elite Gen 5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಚಿಪ್‌ R1 X ಗ್ರಾಫಿಕ್ಸ್ ಪ್ರೊಸೆಸರ್ ಹೊಂದಿದ್ದು, ಇದು ಗೇಮಿಂಗ್ ಮತ್ತು ಹೈ-ಎಂಡ್ ಗ್ರಾಫಿಕ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್‌ 6.79 ಇಂಚಿನ 2K AMOLED (1,440x3,136 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ ಡಿಸ್‌ಪ್ಲೇ ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 7,000 ನಿಟ್ ಪೀಕ್ ಬ್ರೈಟ್ನೆಸ್ ನೀಡುತ್ತದೆ.

ಭಾರತಕ್ಕೆ ನವೆಂಬರ್‌ನಲ್ಲಿ Realme GT 8 Pro ಆಗಮನ ಅಧಿಕೃತ: ಮತ್ತೊಂದು ಸಂಚಲನ?

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಮಾದರಿಯು 200MP ಟೆಲಿಫೋಟೋ ಕ್ಯಾಮೆರಾ, 50MP ಪ್ರೈಮರಿ Ricoh GR ಲೆನ್ಸ್ ಹಾಗೂ 50MP ಅಲ್ಟ್ರಾ-ವೈಡ್ ಲೆನ್ಸ್ ಒಳಗೊಂಡಿದೆ. ಇದು 120x ಡಿಜಿಟಲ್ ಜೂಮ್ ಹಾಗೂ 8K ವಿಡಿಯೋ ರೆಕಾರ್ಡಿಂಗ್‌ಗೂ ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.ಬ್ಯಾಟರಿ ವಿಭಾಗದಲ್ಲಿ, ಫೋನ್‌ನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಇದೆ. ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆಯನ್ನು ನೀಡುವ ಭರವಸೆಯ IP69, IP68, IP66 ರೇಟಿಂಗ್‌ಗಳೊಂದಿಗೆ ಬರುತ್ತದೆ. ಭದ್ರತೆಗಾಗಿ, ಫೋನ್‌ನಲ್ಲಿ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಅನ್‌ಲಾಕ್ ಸೌಲಭ್ಯವೂ ಇದೆ.

ಸ್ಟ್ಯಾಂಡರ್ಡ್ Realme GT 8: ಪ್ರಮುಖ ವೈಶಿಷ್ಟ್ಯಗಳು
ಸ್ಟ್ಯಾಂಡರ್ಡ್ GT 8 ಮಾದರಿಯು ಕೂಡ ಅದೇ Snapdragon 8 Elite Gen 5 ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ UFS 4.0 ಸ್ಟೋರೇಜ್ ನೀಡಲಾಗಿದೆ.
ಡಿಸ್‌ಪ್ಲೇ ವಿಭಾಗದಲ್ಲಿ, ಸ್ಟ್ಯಾಂಡರ್ಡ್ ಮತ್ತು ಪ್ರೊ ಎರಡೂ ಮಾದರಿಗಳು ಒಂದೇ ರೀತಿಯ ವಿಶೇಷಣಗಳೊಂದಿಗೆ ಒಂದೇ ರೀತಿಯ ಡಿಸ್ಪ್ಲೇಗಳನ್ನು ಹೊಂದಿವೆ.
ಕ್ಯಾಮೆರಾ ವಿಭಾಗದಲ್ಲಿ, ಇದು 50MP ಪ್ರೈಮರಿ ಲೆನ್ಸ್, 8MP ಅಲ್ಟ್ರಾ-ವೈಡ್ ಮತ್ತು 50MP ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ ಸ್ವಲ್ಪ ಕಡಿಮೆ ಸಾಮರ್ಥ್ಯದ 16MP ಫ್ರಂಟ್ ಕ್ಯಾಮೆರಾ ಇದೆ.
ಈ ಫೋನ್ ಕೂಡ 7,000mAh ಬ್ಯಾಟರಿ ಹೊಂದಿದೆ. ಆದರೆ, ಇದು 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಎರಡೂ ಫೋನ್‌ಗಳು ಹಂಚಿಕೊಂಡಿವೆ.

'Realme GT 8' ಸರಣಿ: ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ Realme GT 8 Pro ಮಾದರಿಯ ಪ್ರಾರಂಭಿಕ ಬೆಲೆ CNY 3,999 (ಸುಮಾರು ₹50,000) ಆಗಿದ್ದು, ಉನ್ನತ ಮಾದರಿಗಳು ₹64,000 ವರೆಗೆ ಹೋಗುತ್ತವೆ. ಸ್ಟ್ಯಾಂಡರ್ಡ್ GT 8 ಮಾದರಿಯ ಬೆಲೆ ₹36,000 ರಿಂದ ₹51,000 ನಡುವೆಯಿದೆ. ಈ ಎರಡೂ ಫೋನ್‌ಗಳು ಬ್ಲೂ, ವೈಟ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿವೆ. ಒಟ್ಟಾರೆಯಾಗಿ, Realme GT 8 ಸರಣಿ ಶಕ್ತಿಶಾಲಿ ಪ್ರದರ್ಶನ, ಅತ್ಯುತ್ತಮ ಡಿಸ್‌ಪ್ಲೇ ಮತ್ತು ದೀರ್ಘಕಾಲ ಬಾಳುವ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಭಾರತದಲ್ಲಿ Realme GT 8 ಸರಣಿ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಇದೇ ನವೆಂಬರ್‌ನಲ್ಲಿ Realme GT 8 Pro ಆಗಮನವಾಗಲಿದೆ. ಇದು ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ Xiaomi, iQOO ಮತ್ತು OnePlus ಫೋನ್‌ಗಳಿಗೆ ಗಟ್ಟಿಯಾದ ಸ್ಪರ್ಧೆ ನೀಡುವ ಸಾಧ್ಯತೆ ಇದೆ.

Best Mobiles in India

English summary
Realme GT 8 Pro launch is scheduled for November in India, Realme has set up two dedicated microsites on Realme India and Flipkart, which confirm that the Indian variant of the Realme GT 8 Pro will feature a Snapdragon 8 Elite Gen 5 chipset and a Ricoh GR rear camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+