Home
ಮೊಬೈಲ್

ಭಾರತದಲ್ಲಿ Realme GT 8 Pro ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟ!

Realme ಕಂಪನಿಯು ತನ್ನ ಬಹುನಿರೀಕ್ಷಿತ Realme GT 8 Pro ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಅಕ್ಟೋಬರ್ 21ರಂದು ಚೀನಾದಲ್ಲಿ Realme GT 8 ಸರಣಿಯ ಭಾಗವಾಗಿ ಅನಾವರಣಗೊಂಡ ಈ ಫೋನ್, ಸುಮಾರು ಒಂದು ತಿಂಗಳ ನಂತರ ಭಾರತದಲ್ಲೂ ಲಾಂಚ್ ಆಗುತ್ತಿದೆ. ಈ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಈಗ ನವೀಕರಿಸಲಾಗಿದ್ದು, ಭಾರತದಲ್ಲಿ Realme GT 8 Pro ಸ್ಮಾರ್ಟ್‌ಫೋನ್ ನವೆಂಬರ್ 20ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಹಾಗಾದರೆ, ಮುಂಬರಲಿರುವ ಹೊಸ Realme GT 8 Pro ಸ್ಮಾರ್ಟ್‌ಫೋನ್ ಏನೆಲ್ಲಾ ಪೀಚರ್ಸ್ ಹೊತ್ತುಬರುತ್ತಿದೆ?, ಬೆಲೆ ಎಷ್ಟಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Realme GT 8 Pro : ಪ್ರಮುಖ ಫೀಚರ್ಸ್
Realme ಕಂಪೆನಿಯು ಸ್ವಲ್ಪ ಸಮಯದಿಂದಲೇ Realme GT 8 Pro ಭಾರತೀಯ ರೂಪಾಂತರದ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ಬಹಿರಂಗಪಡಿಸುತ್ತಿದೆ. ದೇಶದಲ್ಲಿ ಬಿಡುಗಡೆಯಾಗುವ Realme GT 8 Pro ಸ್ಮಾರ್ಟ್‌ಫೋನ್ ಕೂಡ ಚೀನೀ ಪ್ರತಿರೂಪದಂತೆಯೇ ಫ್ಲ್ಯಾಗ್‌ಶಿಪ್ 3nm ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 SoC ಪ್ರೊಸೆಸರ್ ಹೊಂದಿದೆ ಎಂಬುದನ್ನು ದೃಢಪಡಿಸಲಾಗಿದೆ. ಜೊತೆಗೆ ಹೈಪರ್ ವಿಷನ್ + AI ಚಿಪ್, 7,000 ಚದರ ಎಂಎಂ ವೇಪರ್ ಚೇಂಬರ್ (VC) ಕೂಲಿಂಗ್ ಸಿಸ್ಟಮ್‌ ಹಾಗೂ LPDDR5X RAM ಮತ್ತು UFS 4.1 ಆನ್‌ಬೋರ್ಡ್ ಸ್ಟೋರೇಜ್‌ ಇರಲಿದೆ.

ವಿನ್ಯಾಸದ ವಿಷಯದಲ್ಲಿ, ಭಾರತದಲ್ಲಿ ಬಿಡುಗಡೆಯಾಗಲಿರುವ Realme GT 8 Pro ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್‌ನೊಂದಿಗೆ ಬರುತ್ತದೆ. ಈ ಫೋನ್ ಸುಮಾರು 214 ಗ್ರಾಂ ತೂಗುತ್ತದೆ ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ ಲೋಹದ ಫ್ರೇಮ್ ಮತ್ತು ಹೋಲ್-ಪಂಚ್ ಕಟೌಟ್ ಅನ್ನು ಹೊಂದಿರುತ್ತದೆ. ಹಾಗೆಯೇ, ಈ ಸಫೋನ್‌ನಲ್ಲಿ 2K ರಸಲ್ಯೂಶನ್ ಡಿಸ್‌ಪ್ಲೇ ಇರುವುದನ್ನು ಸಹ ಖಚಿತಪಡಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಭಾರತೀಯ ರೂಪಾಂತರದ Realme GT 8 Pro ಪೋನ್ ಚೀನಾ ಮಾದರಿಯ Realme GT 8 Pro ಫೋನ್ ಹೊಂದಿರುವ ವೈಶಿಷ್ಟ್ಯಗಳನ್ನೇ ಹೊಂದಿರುವ ಸಾಧ್ಯತೆ ಇದೆ. ಹಾಗಾದರೆ, ಚೀನಾ ಮಾದರಿಯ Realme GT 8 Pro ಫೋನಿನ ಸಂಪೂರ್ಣ ಫೀಚರ್ಸ್ ಹೇಗಿವೆ ಎಂಬುದನ್ನು ಸಹ ನೋಡೋಣ ಬನ್ನಿ.

ಭಾರತದಲ್ಲಿ Realme GT 8 Pro ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟ!

ಚೀನಾದಲ್ಲಿ ಬಿಡುಗಡೆಯಾಗಿರುವ Realme GT 8 Pro ಮಾದರಿಯು Qualcomm Snapdragon 8 Elite Gen 5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಚಿಪ್‌ R1 X ಗ್ರಾಫಿಕ್ಸ್ ಪ್ರೊಸೆಸರ್ ಹೊಂದಿದ್ದು, ಇದು ಗೇಮಿಂಗ್ ಮತ್ತು ಹೈ-ಎಂಡ್ ಗ್ರಾಫಿಕ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್‌ 6.79 ಇಂಚಿನ 2K AMOLED (1,440x3,136 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ ಡಿಸ್‌ಪ್ಲೇ ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 7,000 ನಿಟ್ ಪೀಕ್ ಬ್ರೈಟ್ನೆಸ್ ನೀಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಮಾದರಿಯು 200MP ಟೆಲಿಫೋಟೋ ಕ್ಯಾಮೆರಾ, 50MP ಪ್ರೈಮರಿ Ricoh GR ಲೆನ್ಸ್ ಹಾಗೂ 50MP ಅಲ್ಟ್ರಾ-ವೈಡ್ ಲೆನ್ಸ್ ಒಳಗೊಂಡಿದೆ. ಇದು 120x ಡಿಜಿಟಲ್ ಜೂಮ್ ಹಾಗೂ 8K ವಿಡಿಯೋ ರೆಕಾರ್ಡಿಂಗ್‌ಗೂ ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ವಿಭಾಗದಲ್ಲಿ, ಫೋನ್‌ನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಇದೆ. ನೀರು ಮತ್ತು ಧೂಳಿನಿಂದ ರಕ್ಷಣೆಗೆ IP69, IP68, IP66 ರೇಟಿಂಗ್‌ಗಳೊಂದಿಗೆ ಬಂದಿದೆ. ಭದ್ರತೆಗಾಗಿ, ಫೋನ್‌ನಲ್ಲಿ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಅನ್‌ಲಾಕ್ ಸೌಲಭ್ಯವೂ ಇದೆ.

ಸ್ಟ್ಯಾಂಡರ್ಡ್ Realme GT 8: ಪ್ರಮುಖ ವೈಶಿಷ್ಟ್ಯಗಳು
ಸ್ಟ್ಯಾಂಡರ್ಡ್ GT 8 ಮಾದರಿಯು ಕೂಡ ಅದೇ Snapdragon 8 Elite Gen 5 ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ UFS 4.0 ಸ್ಟೋರೇಜ್ ನೀಡಲಾಗಿದೆ.
ಡಿಸ್‌ಪ್ಲೇ ವಿಭಾಗದಲ್ಲಿ, ಸ್ಟ್ಯಾಂಡರ್ಡ್ ಮತ್ತು ಪ್ರೊ ಎರಡೂ ಮಾದರಿಗಳು ಒಂದೇ ರೀತಿಯ ವಿಶೇಷಣಗಳೊಂದಿಗೆ ಒಂದೇ ರೀತಿಯ ಡಿಸ್ಪ್ಲೇಗಳನ್ನು ಹೊಂದಿವೆ.
ಕ್ಯಾಮೆರಾ ವಿಭಾಗದಲ್ಲಿ, ಇದು 50MP ಪ್ರೈಮರಿ ಲೆನ್ಸ್, 8MP ಅಲ್ಟ್ರಾ-ವೈಡ್ ಮತ್ತು 50MP ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ ಸ್ವಲ್ಪ ಕಡಿಮೆ ಸಾಮರ್ಥ್ಯದ 16MP ಫ್ರಂಟ್ ಕ್ಯಾಮೆರಾ ಇದೆ.
ಈ ಫೋನ್ ಕೂಡ 7,000mAh ಬ್ಯಾಟರಿ ಹೊಂದಿದೆ. ಆದರೆ, ಇದು 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಎರಡೂ ಫೋನ್‌ಗಳು ಹಂಚಿಕೊಂಡಿವೆ.

'Realme GT 8' ಸರಣಿ: ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ Realme GT 8 Pro ಮಾದರಿಯ ಪ್ರಾರಂಭಿಕ ಬೆಲೆ CNY 3,999 (ಸುಮಾರು ₹50,000) ಆಗಿದ್ದು, ಉನ್ನತ ಮಾದರಿಗಳು ₹64,000 ವರೆಗೆ ಹೋಗುತ್ತವೆ. ಸ್ಟ್ಯಾಂಡರ್ಡ್ GT 8 ಮಾದರಿಯ ಬೆಲೆ ₹36,000 ರಿಂದ ₹51,000 ನಡುವೆಯಿದೆ. ಈ ಎರಡೂ ಫೋನ್‌ಗಳು ಬ್ಲೂ, ವೈಟ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿವೆ. ಒಟ್ಟಾರೆ ಸಾರಾಂಶವಾಗಿ, Realme GT 8 ಸರಣಿ ಶಕ್ತಿಶಾಲಿ ಪ್ರದರ್ಶನ, ಅತ್ಯುತ್ತಮ ಡಿಸ್‌ಪ್ಲೇ ಮತ್ತು ದೀರ್ಘಕಾಲ ಬಾಳುವ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ಬಂದಿದೆ.

Best Mobiles in India

English summary
The Realme GT 8 Pro smartphone, which will be launched in India, has also been confirmed to feature the flagship 3nm octa-core Snapdragon 8 Elite Gen 5 SoC processor, just like its Chinese counterpart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+