Home
ಮೊಬೈಲ್

ಭಾರತಕ್ಕೆ Realme GT 8 Pro: ಯೋಗೇಶ್ ಬ್ರಾರ್ ಅವರಿಂದ ದಿನಾಂಕ ಸೋರಿಕೆ!

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ (Realme) ತನ್ನ ಬಹುನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಸರಣಿಯಾದ Realme GT 8 ಸರಣಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇತ್ತೀಚಿಗಷ್ಟೇ, ಕಂಪನಿಯು ನವೆಂಬರ್ ತಿಂಗಳಲ್ಲಿ ಪ್ರಮುಖವಾಗಿ Realme GT 8 Pro ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವುದನ್ನು ಖಚಿತಪಡಿಸಿತ್ತು. ಇದೀಗ ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು Realme GT 8 Pro ಫೋನ್ ನವೆಂಬರ್ 20 ರಂದು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ.

ರಿಯಲ್‌ಮಿ ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ (X, ಹಿಂದೆ ಟ್ವಿಟರ್) ಪೋಸ್ಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ತೆರೆದಿರುವ ಮೀಸಲಾದ ಮೈಕ್ರೋಸೈಟ್‌ಗಳ ಮೂಲಕ ಭಾರತದಲ್ಲಿ Realme GT 8 Pro ಬಿಡುಗಡೆಯನ್ನು ದೃಢಪಡಿಸಿದೆ. ಸದ್ಯಕ್ಕೆ, ಕಂಪನಿಯು ವೆನಿಲ್ಲಾ Realme GT 8 ಮಾದರಿಯ ಭಾರತೀಯ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಎರಡೂ ಫೋನ್‌ಗಳು ಶೀಘ್ರದಲ್ಲೇ ದೇಶಕ್ಕೆ ಬರಲಿವೆ ಎಂಬ ನಿರೀಕ್ಷೆ ಇದೆ. ಹಾಗಾದರೆ, ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿರುವ Realme GT 8 ಸರಣಿ ಫೋನ್‌ಗಳು ಹೇಗಿವೆ ಎಂಬುದನ್ನು ಸಹ ನೋಡೋಣ ಬನ್ನಿ.

Realme GT 8 Pro: ಪ್ರಮುಖ ವೈಶಿಷ್ಟ್ಯಗಳ ವಿವರ
ಭಾರತೀಯ ಮಾದರಿಯ Realme GT 8 Pro ಫೋನ್ ಕೂಡ Snapdragon 8 Elite Gen 5 ಚಿಪ್‌ಸೆಟ್‌ ಹೊಂದಿರಲಿದೆ ಮತ್ತು Ricoh GR ಹಿಂಭಾಗದ ಕ್ಯಾಮೆರಾ ಹೊಂದಿರುವುದನ್ನು ದೃಢಪಡಿಸಲಾಗಿದೆ. ಈ ಫೋನ್ ಬಹುತೇಕ ಚೀನಾ ಮಾದರಿಯಂತೆಯೇ ದೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ Realme GT 8 Pro ಫೋನ್ ಈ ಕೆಳಗಿನಂತೆ ಫೀಚರ್ಸ್ ಹೊಂದಿದೆ.

  • ಡಿಸ್‌ಪ್ಲೇ: Realme GT 8 Pro ಫೋನ್ 6.79 ಇಂಚಿನ 2K AMOLED (1,440x3,136 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ರೇಟ್ ಮತ್ತು ಪ್ರಭಾವಶಾಲಿ 7,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ.
  • ಪ್ರೊಸೆಸರ್: ಚೀನಾದಲ್ಲಿ ಬಿಡುಗಡೆಯಾಗಿರುವ Realme GT 8 Pro ಮಾದರಿಯು Qualcomm Snapdragon 8 Elite Gen 5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಜೊತೆಗೆ ಈ ಚಿಪ್‌ R1 X ಗ್ರಾಫಿಕ್ಸ್ ಪ್ರೊಸೆಸರ್ ಹೊಂದಿದ್ದು, ಇದು ಗೇಮಿಂಗ್ ಮತ್ತು ಹೈ-ಎಂಡ್ ಗ್ರಾಫಿಕ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ.
  • ಕ್ಯಾಮೆರಾ: ಕ್ಯಾಮೆರಾ ವಿಭಾಗದಲ್ಲಿ, ಪ್ರೊ ಮಾದರಿಯು ಪ್ರೀಮಿಯಂ Ricoh GR ಲೆನ್ಸ್ ಅನ್ನು ಒಳಗೊಂಡ 50MP ಪ್ರೈಮರಿ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಬೃಹತ್ 200MP ಟೆಲಿಫೋಟೋ ಕ್ಯಾಮೆರಾದೊಂದಿಗೆ ತ್ರಿವಳಿ ಹಿಂಬದಿಯ ಸೆಟಪ್ ಹೊಂದಿದೆ. ಇದು 120x ಡಿಜಿಟಲ್ ಜೂಮ್ ಮತ್ತು 8K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.
  • ಬ್ಯಾಟರಿ ಮತ್ತು ರಕ್ಷಣೆ: ಫೋನ್ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಜೊತೆಗೆ, ಇದು ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆಗಾಗಿ IP69, IP68, IP66 ರೇಟಿಂಗ್‌ಗಳನ್ನು ಸಹ ಪಡೆದಿದೆ. ಭದ್ರತೆಗಾಗಿ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.
  • ಭಾರತಕ್ಕೆ Realme GT 8 Pro: ಯೋಗೇಶ್ ಬ್ರಾರ್ ಅವರಿಂದ ದಿನಾಂಕ ಸೋರಿಕೆ!

ಸ್ಟ್ಯಾಂಡರ್ಡ್ Realme GT 8: ಸಾಮರ್ಥ್ಯ ಮತ್ತು ವ್ಯತ್ಯಾಸಗಳು

  • ವೆನಿಲ್ಲಾ Realme GT 8 ಕೂಡ ಅದೇ Snapdragon 8 Elite Gen 5 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, UFS 4.0 ಸ್ಟೋರೇಜ್ ಹೊಂದಿದೆ. ಪ್ರೊ ಮಾದರಿಯಂತೆಯೇ ಡಿಸ್‌ಪ್ಲೇ ವಿಶೇಷಣಗಳನ್ನು ಹಂಚಿಕೊಳ್ಳುವ ಈ ಸ್ಟ್ಯಾಂಡರ್ಡ್ ಮಾದರಿಯು ಕ್ಯಾಮೆರಾ ಮತ್ತು ಚಾರ್ಜಿಂಗ್ ವೇಗದಲ್ಲಿ ಸ್ವಲ್ಪ ಭಿನ್ನವಾಗಿದೆ:
  • ಕ್ಯಾಮೆರಾ: ಇದು 50MP ಪ್ರೈಮರಿ ಲೆನ್ಸ್, 8MP ಅಲ್ಟ್ರಾ-ವೈಡ್ ಮತ್ತು 50MP ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಇದೆ.
  • ಬ್ಯಾಟರಿ: ಸ್ಟ್ಯಾಂಡರ್ಡ್ ಮಾದರಿ ಕೂಡ 7,000mAh ಬ್ಯಾಟರಿಯನ್ನು ಹೊಂದಿದ್ದರೂ, ಇದು ಸ್ವಲ್ಪ ಕಡಿಮೆ 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸುತ್ತದೆ.

ಬೆಲೆ ಎಷ್ಟಿರಲಿದೆ?
ಚೀನಾದಲ್ಲಿ Realme GT 8 Pro ಮಾದರಿಯು CNY 3,999 (ಸುಮಾರು ₹50,000) ಪ್ರಾರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, ಉನ್ನತ ಮಾದರಿಗಳು ₹64,000 ವರೆಗೆ ಇದೆ. ಇತ್ತ ಸ್ಟ್ಯಾಂಡರ್ಡ್ GT 8 ಮಾದರಿಯ ಬೆಲೆ ₹36,000 ರಿಂದ ₹51,000 ನಡುವೆಯಿದೆ. ಭಾರತದಲ್ಲಿಯೂ ಇದೇ ರೀತಿಯ ಬೆಲೆ ನಿರೀಕ್ಷಿಸಲಾಗಿದೆ. ಮೇಲಿನ ವೈಶಿಷ್ಟ್ಯಗಳಿಂದ ಗಮನಿಸುವುದಾದರೆ, Realme GT 8 ಸರಣಿಯು ಅತ್ಯುತ್ತಮ ಪ್ರೊಸೆಸರ್, ಉನ್ನತ ಗುಣಮಟ್ಟದ ಡಿಸ್‌ಪ್ಲೇ ಮತ್ತು ದೀರ್ಘ ಬಾಳಿಕೆ ಬರುವ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನಸೆಳೆಯುವ ನಿರೀಕ್ಷೆ ಇದೆ. ಅದರಲ್ಲೂ ವಿಶೇಷವಾಗಿ, Realme GT 8 Pro ಮಾದರಿಯು Xiaomi, iQOO ಮತ್ತು OnePlus ನಂತಹ ಬ್ರ್ಯಾಂಡ್‌ಗಳ ಪ್ರಮುಖ ಫೋನ್‌ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ. ಹಾಗಾಗಿ, ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಕೂಡ ಅಧಿಕೃತ ಬಿಡುಗಡೆಯ ದಿನಾಂಕಕ್ಕಾಗಿ ಕಾತುರರಾಗಿದ್ದಾರೆ.

Best Mobiles in India

English summary
Realme has affirmed its plans to launch the Realme GT 8 Pro model domestically in November. Additionally, widely recognized tipster Yogesh Brar has suggested that the Realme GT 8 Pro phone is expected to be introduced in India on November 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+