Home
ಮೊಬೈಲ್

Realme GT 8 Pro ನಲ್ಲಿ ಕಸ್ಟಮೈಸ್ ಕ್ಯಾಮೆರಾ ಬಂಪ್!..ಯಪ್ಪಾ, ಏನೆಲ್ಲಾ ಮಾಡ್ತಾರೆ!

ಭಾರತದಲ್ಲಿ ಶೀಘ್ರದಲ್ಲೇ ಬಹುನಿರೀಕ್ಷಿತ Realme GT 8 Pro ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. Snapdragon 8 Elite Gen 5 ಚಿಪ್‌ನೊಂದಿಗೆ ಬರುತ್ತಿರುವ ಈ Realme GT 8 Pro ಸ್ಮಾರ್ಟ್‌ಫೋನ್ ಈಗಾಗಲೇ ತನ್ನ ವೈಶಿಷ್ಟ್ಯಗಳಿಂದ ಗಮನಸೆಳೆದಿದೆ. ಆದರೆ, ಇದಕ್ಕಿಂತಲೂ ಹೆಚ್ಚು ಗಮನಸೆಳೆದಿರುವುದು ಫೋನಿನಲ್ಲಿರುವ Switchable Camera Bump.! ಹೌದು, ಸಾಮಾನ್ಯವಾಗಿ ಎಲ್ಲ ಫೋನ್‌ಗಳ ಕ್ಯಾಮೆರಾ ವಿನ್ಯಾಸ ಸ್ಥಿರವಾಗಿರುತ್ತದೆ, ಆದರೆ GT 8 Pro ಯಲ್ಲಿ ಬಳಕೆದಾರರು ತಮ್ಮ ಇಷ್ಟಕ್ಕೆ ತಕ್ಕಂತೆ ಕ್ಯಾಮೆರಾ ಬಂಪ್‌ ಅನ್ನು ಬದಲಾಯಿಸಬಹುದು.!

ನೀವು Realme GT 8 Pro ಅನ್ನು ಪಡೆದಾಗ ಫೋನ್‌ನೊಂದಿಗೆ ಡೀಫಾಲ್ಟ್‌ನಂತೆ ವೃತ್ತಾಕಾರದ ಕ್ಯಾಮೆರಾ ಬಂಪ್ ಸಿಗುತ್ತದೆ, ಆದರೆ ಬಯಸಿದರೆ ಆಯತಾಕಾರದ ಅಥವಾ ರೋಬೋಟ್ ಶೈಲಿಯ ವಿನ್ಯಾಸವನ್ನೂ ಬಳಸಬಹುದು. ಕೇವಲ ಚಿಕ್ಕ ಸ್ಕ್ರೂ ಡ್ರೈವರ್‌ನ ಸಹಾಯದಿಂದ ಬಂಪ್ ತೆಗೆದು ಹೊಸದನ್ನು ಅಳವಡಿಸಬಹುದು. ಈ ರೀತಿಯ ವಿನ್ಯಾಸವು ಫೋನ್‌ಗೆ ಹೊಸದಾದ ವೈಯಕ್ತಿಕ ಸ್ಪರ್ಶ ನೀಡುತ್ತದೆ. Realme ಸಂಸ್ಥೆ ಮುಂದಿನ ದಿನಗಳಲ್ಲಿ ವಿಭಿನ್ನ ವಿನ್ಯಾಸಗಳು ಮತ್ತು ವಸ್ತುಗಳಿಂದ ತಯಾರಾದ ಹೊಸ ಕ್ಯಾಮೆರಾ ಮ್ಯಾಡ್ಯೂಲ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದೆ.

Realme GT 8 Pro ನಲ್ಲಿ ಕಸ್ಟಮೈಸ್ ಕ್ಯಾಮೆರಾ ಬಂಪ್..ಯಪ್ಪಾ, ಏನೆಲ್ಲಾ ಮಾಡ್ತಾರೆ?

ಈ ಕ್ಯಾಮೆರಾ ವಿನ್ಯಾಸ ವಿಶೇಷತೆ ಹಾಗೂ ಅತ್ಯುತ್ತಮ ಫೀಚರ್ಸ್ ಜೊತೆಗೆ ಭಾರತದಲ್ಲಿಇದೇ ನವೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ Realme GT 8 Pro ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಇದು ಭಾರತದ ಎರಡನೇ Snapdragon 8 Elite Gen 5 ಸ್ಮಾರ್ಟ್‌ಫೋನ್ ಆಗಬಹುದು. (ಇದೇ ಚಿಪ್‌ಸೆಟ್ ಹೊಂದಿರುವ OnePlus 15 ಪೋನ್ ನವೆಂಬರ್ 13ರಂದು ಬಿಡುಗಡೆಯಾಗಲಿದೆ). ಬಿಡುಗಡೆಯ ನಂತರ ಈ Realme GT 8 Pro ಫೋನ್ Realme ಅಧಿಕೃತ ವೆಬ್‌ಸೈಟ್ ಮತ್ತು Flipkart ಮೂಲಕ ಮಾರಾಟಕ್ಕೆ ಬರಲಿದೆ. ಇದರ ಪ್ರಾರಂಭಿಕ ಬೆಲೆ ₹60,000 ಒಳಗೆ ಇರಬಹುದು ಎಂಬ ನಿರೀಕ್ಷೆಯಿದೆ.

Realme GT 8 Pro ನಲ್ಲಿ ಕಸ್ಟಮೈಸ್ ಕ್ಯಾಮೆರಾ ಬಂಪ್..ಯಪ್ಪಾ, ಏನೆಲ್ಲಾ ಮಾಡ್ತಾರೆ?

Realme GT 8 Pro: ಆಕರ್ಷಕ ವಿನ್ಯಾಸ, ಆರಾಮದಾಯಕ ಹಿಡಿತ!
ಈಗಾಗಲೇ Realme GT 8 Pro ಫೋನ್‌ ನಮ್ಮ ಕೈಸೇರಿದೆ. ಈ ಫೋನಿನ ವಿನ್ಯಾಸವು ಸೌಂದರ್ಯ, ಹಿಡಿತ ಮತ್ತು ಪರಿಸರ ಸ್ನೇಹಿತತ್ವದ ಸಂಯೋಜನೆಯಾಗಿದೆ. ಫೋನ್ Diary White ಮತ್ತು Urban Blue ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಲಿದೆ. ವಿಶೇಷವಾಗಿ Urban Blue ಮಾದರಿಯಲ್ಲಿ ಬಳಸಿರುವ Paper-like Leather ಬ್ಯಾಕ್ ಪ್ಯಾನೆಲ್ ಮರುಬಳಕೆ ಮಾಡಿದ ಪ್ಲಾಸ್ಟಿಕ್ ಮತ್ತು ಬಟ್ಟೆಯಿಂದ ತಯಾರಿಸಲಾಗಿದೆ. ಇದರೊಂದಿಗೆ Realme ಸಂಸ್ಥೆ ಪರಿಸರ ಸಂರಕ್ಷಣೆಯತ್ತ ಗಮನ ಹರಿಸಿದೆ. ಫೋನ್‌ನ ಫ್ರೇಮ್ ಮ್ಯಾಟ್ ಮೆಟಲ್‌ನಿಂದ ನಿರ್ಮಿತವಾಗಿದ್ದು, ಮೃದು ತಿರುಗು ಮೂಲೆಗಳು ಮತ್ತು ಸಮತಟ್ಟಾದ ಎಡ್ಜ್‌ಗಳು ದೀರ್ಘಕಾಲದ ಬಳಕೆಯಲ್ಲಿಯೂ ಆರಾಮ ನೀಡುತ್ತವೆ. ಕಂಪನಿ ಪ್ರಕೃತಿಯಲ್ಲಿನ ಹಾನಿಕರ ರಸಾಯನಿಕಗಳನ್ನು ತಪ್ಪಿಸಲು ನೈಸರ್ಗಿಕ ಬಣ್ಣಗಳು ಮತ್ತು ಆರ್ಗಾನಿಕ್ ಸಿಲಿಕಾನ್ ಲೇಪನವನ್ನು ಬಳಸಿದೆ.

Realme GT 8 Pro ನಲ್ಲಿ ಕಸ್ಟಮೈಸ್ ಕ್ಯಾಮೆರಾ ಬಂಪ್..ಯಪ್ಪಾ, ಏನೆಲ್ಲಾ ಮಾಡ್ತಾರೆ?

Snapdragon 8 Elite Gen 5 ಚಿಪ್‌ಸೆಟ್ ಜೊತೆಗೆ ಶಕ್ತಿಯುತ ಪ್ರದರ್ಶನ
ಕಾರ್ಯಕ್ಷಮತೆಯ ದೃಷ್ಟಿಯಿಂದ, Realme GT 8 Pro ಫೋನ್ ನಿಜವಾದ ಪವರ್‌ಹೌಸ್ ಆಗಿದೆ. Snapdragon 8 Elite Gen 5 ಪ್ರೊಸೆಸರ್‌ನಿಂದ ಇದು ಅತ್ಯಂತ ವೇಗದ ಪ್ರದರ್ಶನ ನೀಡುತ್ತದೆ.ಗೇಮಿಂಗ್ ಟೆಸ್ಟ್‌ಗಳಲ್ಲಿ ಇದು BGMIಯಲ್ಲಿ ಸರಾಸರಿ 111 FPS, Call of Duty Mobileನಲ್ಲಿ 120 FPS, ಮತ್ತು Genshin Impactನಲ್ಲಿ ಸರಾಸರಿ 44 FPS ನೀಡಿದೆ. ತಾಪಮಾನ 35°C-45°C ನಡುವೆ ಉಳಿದಿರುವುದರಿಂದ ಫೋನ್ ಬಿಸಿ ಆಗುವುದಿಲ್ಲ.

Realme GT 8 Pro ನಲ್ಲಿ ಕಸ್ಟಮೈಸ್ ಕ್ಯಾಮೆರಾ ಬಂಪ್..ಯಪ್ಪಾ, ಏನೆಲ್ಲಾ ಮಾಡ್ತಾರೆ?

Realme GT 8 Pro: ಮುಖ್ಯ ವೈಶಿಷ್ಟ್ಯಗಳು (ಸಂಕ್ಷಿಪ್ತ)
ಡಿಸ್‌ಪ್ಲೇ: 6.79" LTPO AMOLED, QHD+, 144Hz ರಿಫ್ರೆಶ್ ರೇಟ್
ಪ್ರೊಸೆಸರ್: Snapdragon 8 Elite Gen 5 (3nm)
ಕ್ಯಾಮೆರಾ: 50MP ಮುಖ್ಯ + 50MP ಅಲ್ಟ್ರಾ ವೈಡ್ + 200MP ಪೆರಿಸ್ಕೋಪ್
ಮುಂಭಾಗ ಕ್ಯಾಮೆರಾ: 32MP
ಬ್ಯಾಟರಿ: 7000mAh, 120W ವೇಗದ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್
ಸಾಫ್ಟ್‌ವೇರ್: Android 16 (Realme UI 7), 4 ವರ್ಷಗಳ OS ಅಪ್‌ಗ್ರೇಡ್, 5 ವರ್ಷಗಳ ಭದ್ರತಾ ಪ್ಯಾಚ್‌ಗಳು ಇರಲಿವೆ.

Best Mobiles in India

English summary
The Realme GT 8 Pro smartphone has already attracted attention with its features. But, what is even more noteworthy is the Switchable Camera Bump on the phone.! Yes, usually the camera design of all phones is fixed, but in the GT 8 Pro, users can change the camera bump according to their liking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+