Home
ಮೊಬೈಲ್

ಭಾರತದಲ್ಲಿ Realme GT 8 Pro, Dream Edition ಲಾಂಚ್: ಸಂಪೂರ್ಣ ವಿವರ!

ರಿಯಲ್‌ಮಿ ಕಂಪೆನಿಯ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಾದ Realme GT 8 Pro ಮತ್ತು Realme GT 8 Pro Dream Edition ಸ್ಮಾರ್ಟ್‌ಫೋನ್‌ಗಳು ಇಂದು (20, ಗುರುವಾರ) ದೇಶದ ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ನೀಡಿವೆ. Qualcomm ನ ಹೊಸ 3nm Snapdragon 8 Elite Gen 5 ಪ್ರೊಸೆಸರ್ ಹೊಂದಿರುವ ದೇಶದ ಎರಡನೇ ಸ್ಮಾರ್ಟ್‌ಫೋನ್ ಆಗಿ Realme GT 8 Pro ಸರಣಿಯು (ಮೊದಲನೆಯದು OnePlus 15) ಬಿಡುಗಡೆಯಾಗಿದೆ. ಈ ಸರಣಿಯಲ್ಲಿನ ಮತ್ತೊಂದು ಪ್ರಮುಖ ಅಂಶವಾಗಿ Ricoh ಟ್ಯೂನ್ ಮಾಡಿರುವ ಕ್ಯಾಮೆರಾ ವ್ಯವಸ್ಥೆಯು ಗಮನಸೆಳೆದಿದೆ. ಹಾಗಾದರೆ, ದೇಶದಲ್ಲಿ ಇಂದು ಪರಿಚಯಗೊಂಡಿರುವ Realme GT 8 Pro ಮತ್ತು Realme GT 8 Pro Dream Edition ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

Realme GT 8 Pro ಸರಣಿ: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ ವಿವರಗಳು
ದೇಶದಲ್ಲಿ Realme GT 8 Pro ಫೋನಿನ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ 72,999 ರೂ.ಗಳಿಂದ ಪ್ರಾರಂಭವಾಗಿದೆ. ಇದರ ಟಾಪ್‌ಎಂಡ್ 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ 78,999 ರೂ.ಗಳಾಗಿವೆ. ಮತ್ತೊಂದೆಡೆ, Realme GT 8 Pro Dream ಆವೃತ್ತಿಯ ಬೆಲೆ 79,999 ರೂ. ಆಗಿದೆ. ಈ ಎರಡೂ ಫೋನ್‌ಗಳು ನವೆಂಬರ್ 25 ರಂದು ಫ್ಲಿಪ್‌ಕಾರ್ಟ್ ಮತ್ತು Realme India ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದ್ದು, ನವೆಂಬರ್ 29 ರವರೆಗೆ ಲಭ್ಯವಿರುತ್ತದೆ. ಲಾಂಚ್ ಆಫರ್‌ಗಳಲ್ಲಿ ಉಚಿತ ಡೆಕೊ ಸೆಟ್, ₹5,000 ವರೆಗೆ ಬ್ಯಾಂಕ್ ರಿಯಾಯಿತಿ ಮತ್ತು 6 ತಿಂಗಳವರೆಗೆ EMI ನೀಡಲಾಗಿದೆ. ಇನ್ನು Dream Edition ಗೆ ಬ್ಯಾಂಕ್ ರಿಯಾಯಿತಿ ಲಭ್ಯವಿಲ್ಲ, ಆದರೆ 12 ತಿಂಗಳ EMI ಆಯ್ಕೆ ಇದೆ.

Realme GT 8 Pro ಮತ್ತು Realme GT 8 Pro Dream Edition : ಏನು ವ್ಯತ್ಯಾಸ
Realme GT 8 Pro ಮತ್ತು Realme GT 8 Pro Dream Edition ಫೋನ್‌ಗಳಲ್ಲಿ ವಿನ್ಯಾಸದ ವಿಷಯದಲ್ಲಿ ಮಾತ್ರ ವ್ಯತ್ಯಾಸವಿದೆ. ಸ್ಟಾಂಡರ್ಡ್ Realme GT 8 Pro ಫೋನ್ Diary White ಮತ್ತು Urban Blue ಬಣ್ಣಗಳಲ್ಲಿ ಲಭ್ಯವಿದೆ. ಆದರೆ, Realme GT 8 Pro Dream Edition ಮಾದರಿಯಲ್ಲಿ Aston Martin ಲೋಗೋ ಇರುವ ವಿಶೇಷ ಟೆಕ್ಸ್ಚರ್ಡ್ ಹಿಂಭಾಗ ನೀಡಲಾಗಿದೆ. ಈ ಎರಡೂ ಆವೃತ್ತಿಗಳು ನವೀನ ವಿನಿಮಯ ಮಾಡಬಹುದಾದ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬೆಂಬಲಿಸುತ್ತವೆ, ಇದು ಬಳಕೆದಾರರಿಗೆ ಒದಗಿಸಲಾದ ಉಪಕರಣದೊಂದಿಗೆ ಕ್ಯಾಮೆರಾ ಬಂಪ್‌ನ ಆಕಾರವನ್ನು (ಉದಾ., ವೃತ್ತಾಕಾರದ, ಆಯತಾಕಾರದ) ಭೌತಿಕವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ Realme GT 8 Pro, Dream Edition ಲಾಂಚ್: ಸಂಪೂರ್ಣ ವಿವರ!

Realme GT 8 Pro ಮತ್ತು Realme GT 8 Pro Dream Edition: ಸಂಪೂರ್ಣ ಫೀಚರ್ಸ್
Realme GT 8 Pro ಸರಣಿಯು 6.79-ಇಂಚಿನ QHD+ (1,440x3,136 ಪಿಕ್ಸೆಲ್‌ಗಳು) BOE Q10 ಫ್ಲೆಕ್ಸಿಬಲ್ AMOLED ಡಿಸ್ಪ್ಲೇಯನ್ನು ಹೊಂದಿವೆ. ಇದು 508 ppi ಪಿಕ್ಸೆಲ್ ಸಾಂದ್ರತೆ, 1.07 ಬಿಲಿಯನ್ ಬಣ್ಣಗಳು, 19.6:9 ಆಕಾರ ಅನುಪಾತ ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ. ಜೊತೆಗೆ ಇದರಲ್ಲಿ 144Hz ವರೆಗೆ ರಿಫ್ರೆಶ್ ರೇಟ್, 360Hz ಗರಿಷ್ಠ ಟಚ್ ಸ್ಯಾಂಪ್ಲಿಂಗ್ ರೇಟ್, HDR ಬೆಂಬಲ, 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಮತ್ತು ಹೈ ಬ್ರೈಟ್‌ನೆಸ್ ಮೋಡ್ (HBM) ನಲ್ಲಿ 2,000 ನಿಟ್‌ಗಳ ಗರಿಷ್ಠ ಹೊಳಪಿನ ವೈಶಿಷ್ಟ್ಯಗಳಿವೆ.

ಕಾರ್ಯಕ್ಷಮತೆಗಾಗಿ, Realme GT 8 Pro ಸರಣಿಯಲ್ಲಿ Qualcomm ಕಂಪೆನಿಯ ಇತ್ತೀಚಿನ Snapdragon 8 Elite Gen 5 (3nm) ಚಿಪ್‌ಸೆಟ್ ಅಳವಡಿಸಲಾಗಿದೆ, ಇದು 16GB ವರೆಗೆ LPDDR5X RAM ಮತ್ತು 512GB ವರೆಗೆ UFS 4.1 ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ, ಮತ್ತು ಇದು 4.60GHz ಕ್ಲಾಕ್‌ ಸ್ಪೀಡ್ ವೇಗವನ್ನು ನೀಡುತ್ತದೆ. ಇದರಲ್ಲಿ ಫೋನ್ ಅಡ್ರಿನೊ 840 GPU ಸಹ ಇದೆ. ಉಷ್ಣ ನಿರ್ವಹಣೆಗಾಗಿ, ಈ ಫೋನ್ 7,000sq mm ಶಾಖ ಪ್ರಸರಣ ಪ್ರದೇಶವನ್ನು ಹೊಂದಿರುವ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Realme GT 8 Pro ಸರಣಿಯು Ricoh ಗ್ರೇಡ್ ಟ್ಯೂನಿಂಗ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದೇ ಫೋನ್‌ಗೆ ಪ್ರಮುಖ ಆಕರ್ಷಣೆಯಾಗಿದ್ದು, ಇದರಲ್ಲಿ, 22mm ಫೋಕಲ್ ಲೆಂತ್ ಮತ್ತು OIS ಹೊಂದಿರುವ 50-ಮೆಗಾಪಿಕ್ಸೆಲ್ (f/1.8) ಸೋನಿ IMX906 ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ (f/2.0) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 120x ಡಿಜಿಟಲ್ ಜೂಮ್ ಸಾಮರ್ಥ್ಯಗಳನ್ನು ಹೊಂದಿರುವ 200-ಮೆಗಾಪಿಕ್ಸೆಲ್ (f/2.6) ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿಗಾಗಿ, 32-ಮೆಗಾಪಿಕ್ಸೆಲ್ (f/2.4) ಕ್ಯಾಮೆರಾ ಇದೆ.

ಈ ಕ್ಯಾಮೆರಾ ಸೆಟಪ್ ಬಗ್ಗೆ ನೋಡುವುದಾದರೆ, Realme GT 8 Pro ಸರಣಿಯು ಗೂಗಲ್ ಲೆನ್ಸ್ ಏಕೀಕರಣದೊಂದಿಗೆ ಪನೋರಮಾ, ಸ್ಲೋ-ಮೋಷನ್, ಡ್ಯುಯಲ್-ವ್ಯೂ ವೀಡಿಯೊ ಮತ್ತು ಟೈಮ್-ಲ್ಯಾಪ್ಸ್ ಮಾದರಿಗಳನ್ನು ಸಹ ಒಳಗೊಂಡಿದೆ. ಇದರ ಹಿಂಭಾಗದ ಕ್ಯಾಮೆರಾಗಳು 60fps ವರೆಗೆ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಮೊದಲೇ ಹೇಳಿದಂತೆ, ಇದು ಬದಲಾಯಿಸಬಹುದಾದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಬಳಕೆದಾರರು ಮೂರು ಕ್ಯಾಮೆರಾ ದ್ವೀಪ ವಿನ್ಯಾಸಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಬ್ಯಾಟರಿ ವಿಭಾಗದಲ್ಲಿ, Realme GT 8 Pro ಸರಣಿಯು 120W ವೈರ್ಡ್ ಸೂಪರ್‌ವಿಒಒಸಿ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿದೆ. ಫೋನಿನಲ್ಲಿ ಧೂಳು ಮತ್ತು ನೀರಿನ ರಕ್ಷಣೆಗಾಗಿ IP66 + IP68 + IP69 ರೇಟಿಂಗ್‌ಇದೆ. ಸಂಪರ್ಕಕ್ಕಾಗಿ 5G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್ 6.0, USB ಟೈಪ್-C ಪೋರ್ಟ್, NFC, BeiDou, GPS, GLONASS, ಗೆಲಿಲಿಯೋ, QZSS ಮತ್ತು NavIC ಅನ್ನು ಬೆಂಬಲಿಸುತ್ತದೆ. ಇನ್ನು ಈ ಫೋನ್ ಸುಮಾರು 161.80x76.87x8.20mm ಆಯಾಮಗಳಲ್ಲಿ 214 ಗ್ರಾಂ ವರೆಗೆ ತೂಗುತ್ತದೆ.

ಒಟ್ಟಾರೆ ಸಾರಾಂಶವಾಗಿ, Realme GT 8 Pro ಸರಣಿಯ ಪ್ರೀಮಿಯಂ ವಿಭಾಗದಲ್ಲಿ ಮತ್ತೊಂದು ಬಹುದೊಡ್ಡ ಸ್ಪರ್ಧಿಯಾಗಿ ಬಂದಿದೆ. ಹೊಸ ಚಿಪ್‌ಸೆಟ್, Ricoh ಕ್ಯಾಮೆರಾ ಟ್ಯೂನಿಂಗ್ ಮತ್ತು Dream Edition ನ ವಿಶೇಷ ವಿನ್ಯಾಸವು ಹೈಎಂಡ್ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ಸಾಧ್ಯತೆಯಿದೆ.

Best Mobiles in India

English summary
The Realme GT 8 Pro series is the second smartphone in the country (the first being the OnePlus 8) to feature Qualcomm's new 3nm Snapdragon 8 Elite Gen 5 processor. Another highlight of the series is the Ricoh-tuned camera system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+