Home
ಮೊಬೈಲ್

Realme GT 8 ಸರಣಿ ಬಿಡುಗಡೆ: ಹೊಸ ಪೀಳಿಗೆಯ ಫ್ಲಾಗ್‌ಶಿಪ್ ಫೋನ್‌ಗಳನ್ನು ನೋಡಿ!

ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ತನ್ನ ಹೊಸ ಫ್ಲಾಗ್‌ಶಿಪ್ 'Realme GT 8' ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಇಂದು ಅಧಿಕೃತವಾಗಿ ಪರಿಚಯಿಸಿದೆ. ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಹಲವು ದಿನಗಳಿಂದ ವದಂತಿಗಳಿಂದಲೇ ಸುದ್ದಿಯಾಗಿದ್ದ ಈ ಸರಣಿಯಲ್ಲಿ Realme GT 8 ಮತ್ತು Realme GT 8 Pro ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದು, ಈ ಎರಡೂ ಸ್ಮಾರ್ಟ್‌ಪೋನ್‌ಗಳು ಶಕ್ತಿಶಾಲಿ Qualcomm Snapdragon 8 Elite Gen 5 ಪ್ರೊಸೆಸರ್ ಹೊಂದಿವೆ. ಜೊತೆಗೆ 7,000mAh ಬ್ಯಾಟರಿ, R1 X ಗ್ರಾಫಿಕ್ಸ್ ಸೇರಿಂದತೆ ಹಲವಾರು ಹೈ-ಎಂಡ್ ಫೀಚರ್ಸ್ ಗಳೊಂದಿಗೆ ಬಂದಿವೆ. ಹಾಗಾದರೆ, ಹೊಸ Realme GT 8 ಮತ್ತು Realme GT 8 Pro ಎರಡು ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೊಣ ಬನ್ನಿ.

Realme GT 8 Pro: ಪ್ರಮುಖ ವೈಶಿಷ್ಟ್ಯಗಳು
Realme GT 8 Pro ಮಾದರಿಯು Qualcomm Snapdragon 8 Elite Gen 5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಚಿಪ್‌ R1 X ಗ್ರಾಫಿಕ್ಸ್ ಪ್ರೊಸೆಸರ್ ಹೊಂದಿದ್ದು, ಇದು ಗೇಮಿಂಗ್ ಮತ್ತು ಹೈ-ಎಂಡ್ ಗ್ರಾಫಿಕ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್‌ 6.79 ಇಂಚಿನ 2K AMOLED ((1,440x3,136 ಪಿಕ್ಸೆಲ್‌ಗಳು) ಫ್ಲೆಕ್ಸಿಬಲ್ ಡಿಸ್‌ಪ್ಲೇ ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 7,000 ನಿಟ್ ಪೀಕ್ ಬ್ರೈಟ್ನೆಸ್ ನೀಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಮಾದರಿಯು 200MP ಟೆಲಿಫೋಟೋ ಕ್ಯಾಮೆರಾ, 50MP ಪ್ರೈಮರಿ Ricoh GR ಲೆನ್ಸ್ ಹಾಗೂ 50MP ಅಲ್ಟ್ರಾ-ವೈಡ್ ಲೆನ್ಸ್ ಒಳಗೊಂಡಿದೆ. ಇದು 120x ಡಿಜಿಟಲ್ ಜೂಮ್ ಹಾಗೂ 8K ವಿಡಿಯೋ ರೆಕಾರ್ಡಿಂಗ್‌ಗೂ ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ವಿಭಾಗದಲ್ಲಿ, ಫೋನ್‌ನಲ್ಲಿ 7,000mAh ಸಾಮರ್ಥ್ಯದ ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಇದೆ. ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆಯನ್ನು ನೀಡುವ ಭರವಸೆಯ IP69, IP68, IP66 ರೇಟಿಂಗ್‌ಗಳೊಂದಿಗೆ ಬರುತ್ತದೆ. ಭದ್ರತೆಗಾಗಿ, ಫೋನ್‌ನಲ್ಲಿ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಅನ್‌ಲಾಕ್ ಸೌಲಭ್ಯವೂ ಇದೆ.

Realme GT 8 ಸರಣಿ ಬಿಡುಗಡೆ: ಹೊಸ ಪೀಳಿಗೆಯ ಫ್ಲಾಗ್‌ಶಿಪ್ ಫೋನ್‌ಗಳನ್ನು ನೋಡಿ!

ಸ್ಟ್ಯಾಂಡರ್ಡ್ Realme GT 8: ಪ್ರಮುಖ ವೈಶಿಷ್ಟ್ಯಗಳು
ಸ್ಟ್ಯಾಂಡರ್ಡ್ GT 8 ಮಾದರಿಯು ಕೂಡ ಅದೇ Snapdragon 8 Elite Gen 5 ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಆದರೆ ಇದರಲ್ಲಿ UFS 4.0 ಸ್ಟೋರೇಜ್ ನೀಡಲಾಗಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, ಸ್ಟ್ಯಾಂಡರ್ಡ್ ಮತ್ತು ಪ್ರೊ ಎರಡೂ ಮಾದರಿಗಳು ಒಂದೇ ರೀತಿಯ ವಿಶೇಷಣಗಳೊಂದಿಗೆ ಒಂದೇ ರೀತಿಯ ಡಿಸ್ಪ್ಲೇಗಳನ್ನು ಹೊಂದಿವೆ.

ಕ್ಯಾಮೆರಾ ವಿಭಾಗದಲ್ಲಿ, ಇದು 50MP ಪ್ರೈಮರಿ ಲೆನ್ಸ್, 8MP ಅಲ್ಟ್ರಾ-ವೈಡ್ ಮತ್ತು 50MP ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ ಸ್ವಲ್ಪ ಕಡಿಮೆ ಸಾಮರ್ಥ್ಯದ 16MP ಫ್ರಂಟ್ ಕ್ಯಾಮೆರಾ ಇದೆ.

ಈ ಫೋನ್ ಕೂಡ 7,000mAh ಬ್ಯಾಟರಿ ಹೊಂದಿದೆ. ಆದರೆ, ಇದು 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಎರಡೂ ಫೋನ್‌ಗಳು ಹಂಚಿಕೊಂಡಿವೆ.

'Realme GT 8' ಸರಣಿ: ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ Realme GT 8 Pro ಮಾದರಿಯ ಪ್ರಾರಂಭಿಕ ಬೆಲೆ CNY 3,999 (ಸುಮಾರು ₹50,000) ಆಗಿದ್ದು, ಉನ್ನತ ಮಾದರಿಗಳು ₹64,000 ವರೆಗೆ ಹೋಗುತ್ತವೆ. ಸ್ಟ್ಯಾಂಡರ್ಡ್ GT 8 ಮಾದರಿಯ ಬೆಲೆ ₹36,000 ರಿಂದ ₹51,000 ನಡುವೆಯಿದೆ. ಈ ಎರಡೂ ಫೋನ್‌ಗಳು ಬ್ಲೂ, ವೈಟ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿವೆ. ಒಟ್ಟಾರೆಯಾಗಿ, Realme GT 8 ಸರಣಿ ಶಕ್ತಿಶಾಲಿ ಪ್ರದರ್ಶನ, ಅತ್ಯುತ್ತಮ ಡಿಸ್‌ಪ್ಲೇ ಮತ್ತು ದೀರ್ಘಕಾಲ ಬಾಳುವ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಭಾರತದಲ್ಲಿ Realme GT 8 ಸರಣಿ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಇದು ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ Xiaomi, iQOO ಮತ್ತು OnePlus ಫೋನ್‌ಗಳಿಗೆ ಗಟ್ಟಿಯಾದ ಸ್ಪರ್ಧೆ ನೀಡುವ ಸಾಧ್ಯತೆ ಇದೆ. Realme ಕಂಪನಿಯು ಈ ಹೊಸ ಸರಣಿಯನ್ನು "ಪರ್ಫಾರ್ಮೆನ್ಸ್ ಮತ್ತು ವಿನ್ಯಾಸದ ಹೊಸ ಮಟ್ಟ" ಎಂದು ವರ್ಣಿಸಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme GT 8 and the Realme GT 8 Pro. They both come packed with the amazing Qualcomm Snapdragon 8 Elite Gen 5 processor, making them super powerful! Realme GT 8 and the Realme GT 8 Pro. They both come packed with the amazing Qualcomm Snapdragon 8 Elite Gen 5 processor, making them super powerful!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+