Home
ಮೊಬೈಲ್

ಸಸ್ತಾ ಬೆಲೆಗೆ Realme 5G ಫೋನ್‌! ಬರೋಬ್ಬರಿ 10,200 ಅಗ್ಗ.. ಯಾವ ಫೋನ್‌?

ಹಬ್ಬ, ಯಾವುದಾದರೂ ಸೀಸನ್‌ಗಳು ಬಂದ್ರೆ ಸಾಕು ಇ ಕಾಮರ್ಸ್ ಶಾಪಿಂಗ್ ಸೈಟ್‌ಗಳು ಗ್ರಾಹಕರಿಗಾಗಿ ಬಂಪರ್ ಆಫರ್‌ಗಳನ್ನು ಘೋಷಿಸುತ್ತದೆ. ಗ್ರಾಹಕರು ಕೂಡ ಈ ಆಫರ್‌ಗಳಿಗಾಗಿ ಕಾತರದಿಂದ ಕಾಯುತ್ತಾರೆ. ಅದರಂತೆ, ಇದೀಗ ಪ್ರಸಿದ್ಧ ಬ್ರಾಂಡ್‌ ಆಗಿರುವ ರಿಯಲ್‌ಮಿಯ 5G ಫೋನಿನ ಮೇಲೆ ಬಂಪರ್ ರಿಯಾಯಿತಿ ಲಭ್ಯವಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊಬೈಲ್ ಅನ್ನು ಬರೋಬ್ಬರಿ 10,200 ರೂ.ಗಳ ಡಿಸ್ಕೌಂಟ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಅದು ಯಾವ ಫೋನ್? ಯಾವೆಲ್ಲಾ ಆಫರ್‌ ಲಭ್ಯವಿದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್‌ಮಿಯ 'GT' ಸರಣಿಯ ಫೋನ್ ಖರೀದಿಸಲು ಇದು ಉತ್ತಮ ಅವಕಾಶವಾಗಿದೆ. ಕಂಪನಿಯು ರಿಯಲ್‌ಮಿ GT ನಿಯೋ 3T (realme GT Neo 3T) ಫೋನಿನ ಬೆಲೆ ಇಳಿಕೆ ಮಾಡಿದೆ. ಇದನ್ನು 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಫೋನಿನಲ್ಲಿ ರಿಯಾಯಿತಿಗಳೊಂದಿಗೆ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್‌ ಆಫರ್‌ ಮತ್ತು ಇಎಂಐ ಆಯ್ಕೆ ಸಹ ಲಭ್ಯವಿದೆ. ಇದರೊಂದಿಗೆ ನೀವು, ಈ ಫೋನನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಇದು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 4.3 ರೇಟಿಂಗ್ ಪಡೆದಿದೆ.

Realme GT Neo 3T ಬೆಲೆ ಇಳಿಕೆ; ಬರೋಬ್ಬರಿ 10,200 ಕಡಿಮೆ..  ಖರೀದಿ ಎಲ್ಲಿ?

ರಿಯಲ್‌ಮಿ GT ನಿಯೋ 3T ಬೆಲೆ ಮತ್ತು ಆಫರ್‌ಗಳು

ಕಂಪನಿಯು ರಿಯಲ್‌ಮಿ GT ನಿಯೋ 3T ಅನ್ನು ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಪ್ರಸ್ತುತ, 8GB RAM + 256GB ಸ್ಟೋರೇಜ್‌ ರೂಪಾಂತರದ ಮೇಲೆ 10,200 ರೂ.ಗಳ ರಿಯಾಯಿತಿ ಲಭ್ಯವಿದೆ. ಈ ಡಿಸ್ಕೌಂಟ್‌ ನಂತರ, ಫೋನನ್ನು ಕೇವಲ 23,799 ರೂ.ಗೆ ಖರೀದಿಸಬಹುದು. ಇದನ್ನು 33,999 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.

8GB + 128GB ಸ್ಟೋರೇಜ್‌ ರೂಪಾಂತರದ ಮೇಲೆ 9,600 ರೂ.ಗಳ ಡಿಸ್ಕೌಂಟ್ ಲಭ್ಯವಿದೆ. ರಿಯಾಯಿತಿ ನಂತರ, ಫೋನನ್ನು 23,399 ರೂ.ಗೆ ಕೊಳ್ಳಬಹುದು. ಇದನ್ನು 31,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇನ್ನೂ, 6GB + 128GB ಸ್ಟೋರೇಜ್‌ ರೂಪಾಂತರದ ಮೇಲೆ 9,000 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಡಿಸ್ಕೌಂಟ್‌ನೊಂದಿಗೆ ಫೋನ್ 20,999 ರೂ.ಗೆ ಮಾರಾಟವಾಗುತ್ತಿದೆ. ಇದನ್ನು 29,999 ರೂ.ಗೆ ಬಿಡುಗಡೆ ಮಾಡಲಾಗಿತ್ತು.

12,950 ರೂ.ಗಳ ಆಫರ್‌ ಕೂಡ ಸಿಗುತ್ತೆ!

ನೀವು, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಶೇ.5 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯಬಹುದು. ಕಂಪನಿಯು 24 ತಿಂಗಳವರೆಗೆ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ 12,950 ರೂ.ಗಳ ವರೆಗೆ ಎಕ್ಸ್‌ಚೇಂಜ್‌ ಆಫರ್‌ ಕೂಡ ಲಭ್ಯವಿದೆ. ನೀವು, ಡ್ಯಾಶ್ ಹಳದಿ, ಡ್ರಿಫ್ಟಿಂಗ್ ವೈಟ್ ಮತ್ತು ಶೇಡ್ ಬ್ಲಾಕ್‌ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು. ಈ ಎಲ್ಲಾ ಆಫರ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪಡೆಯಿರಿ.

ರಿಯಲ್‌ಮಿ GT ನಿಯೋ 3T ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ GT ನಿಯೋ 3T ಮೊಬೈಲ್ 6.62 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ E4 ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರಿಯಲ್‌ಮಿ GT ನಿಯೋ 3T ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಗ್ರಾಫಿಕ್ಸ್‌ಗಾಗಿ ಅಡ್ರಿನೊ 650 ಜಿಪಿಯು ಅನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 256GB ವರೆಗೆ ಸ್ಟೋರೇಜ್‌ ಹೊಂದಿದೆ. ಡೈನಾಮಿಕ್ RAM ಬೆಂಬಲದೊಂದಿಗೆ RAM ಅನ್ನು 16GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ರಿಯಲ್‌ಮಿ GT ನಿಯೋ 3T ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ರಿಯಲ್‌ಮಿ 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು 80W ವೇಗದ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ GT ನಿಯೋ 3T ಮೊಬೈಲ್ ಡಾಲ್ಬಿ ಅಟ್ಮಾಸ್, ಹೈ ರೆಸ್ ಆಡಿಯೋ, ವಿಸಿ ಕೂಲಿಂಗ್ ಮತ್ತು ಭದ್ರತೆಗಾಗಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ ಫೈ 6, ಬ್ಲೂಟೂತ್ 5.2, ಜಿಪಿಎಸ್‌, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
realme GT Neo 3T Available With Rs10,200 discount on Flipkart: know offers, availability, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+