ಡಿ.11ಕ್ಕೆ Realme Neo7 ಲಾಂಚ್; 6500mAh ಬ್ಯಾಟರಿ.. 32MP ಸೆಲ್ಫಿ ಕ್ಯಾಮೆರಾ.. ಬೆಲೆ ಎಷ್ಟು ಗೊತ್ತಾ?
ರಿಯಲ್‌ಮಿ ಮತ್ತೊಂದು ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು, ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಹೌದು, ರಿಯಲ್‌ಮಿ ನಿಯೋ 7 (Realme Neo7) ಫೋನ್ ಡಿಸೆಂಬರ್ 11 ರಂದು ಲೋಕಾರ್ಪಣೆಯಾಗಲಿದೆ. ಇದನ್ನು 30,000 ರೂ.ಗಳ ಬಜೆಟ್‌ನಲ್ಲಿ ಪರಿಚಯಿಸಲಾಗುತ್ತದೆ. ಈಗಾಗಲೇ, ಮುಂಬರುವ ಫೋನಿನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಇದು 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಬನ್ನಿ, ಈ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯೋಣ.
ರಿಯಲ್‌ಮಿ ನಿಯೋ 7 ಫೋನ್ ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ಲಸ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು 32 ಮೆಗಾಪಿಕ್ಸೆಲ್ ಸೋನಿ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಹಾಗೆಯೇ 6.78 ಇಂಚಿನ 1.5K ಡಿಸ್ಪ್ಲೇ ಲಭ್ಯವಿರಲಿದೆ. ಈ ಫೋನ್ 12GB RAM + 256GB ಸ್ಟೋರೇಜ್ ಹೊಂದಿರಲಿದೆ. ಜೊತೆಗೆ IP69 ರೇಟಿಂಗ್, 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ರಿಯಲ್‌ಮಿ ನಿಯೋ 7 ಬಿಡುಗಡೆ ವಿವರ
ರಿಯಲ್‌ಮಿ ನಿಯೋ 7 ಮೊದಲು ಚೀನಾದಲ್ಲಿ ಡಿಸೆಂಬರ್ 11 ರಂದು ಬಿಡುಗಡೆಯಾಗಲಿದೆ. ಫೋನಿನ ಲಾಂಚ್ ಈವೆಂಟ್ ಸಂಜೆ 4 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30 ಗಂಟೆಗೆ) ನಡೆಯಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮ್ ಆಗಲಿದೆ. ಕಂಪನಿಯು ನೂತನ ಫೋನಿನ ವಿನ್ಯಾಸ ಮತ್ತು ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಈ ಫೋನಿನ ಬೆಲೆ ತಿಳಿಲು ಮುಂದೆ ಓದಿ.
ರಿಯಲ್‌ಮಿ ನಿಯೋ 7 ಫೋನಿನ ಬೆಲೆ
ಕಂಪನಿಯು ರಿಯಲ್‌ಮಿ ನಿಯೋ 7 ಫೋನಿನ ಬಿಡುಗಡೆ ದಿನಾಂಕದ ಜೊತೆಗೆ, ಬೆಲೆ ಶ್ರೇಣಿಯನ್ನು ಬಹಿರಂಗಪಡಿಸಿದೆ. ಅದರಂತೆ ಈ ಫೋನಿನ ಬೆಲೆ 29,130 ರೂ. (CNY 2499) ಆಗಿದೆ. ಭಾರತದಲ್ಲಿ ಇದೇ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಬೆಲೆ ವಿಭಾಗದಲ್ಲಿ ರಿಯಲ್‌ಮಿ ನಿಯೋ 7 ಮೊಬೈಲ್ ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋನ್ ಆಗಿದೆ.
ರಿಯಲ್‌ಮಿ ನಿಯೋ 7 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ ನಿಯೋ 7 ಮೊಬೈಲ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿರಲಿದೆ. ರಿಯಲ್‌ಮಿ GT ನಿಯೋ 6 ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ರಿಯಲ್‌ಮಿ ನಿಯೋ 7 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಪ್ರೊಸೆಸರ್ ಹೊಂದಿರಲಿದೆ. ರಿಯಲ್‌ಮಿ GT ನಿಯೋ 6 ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5 ನೊಂದಿಗೆ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ರಿಯಲ್‌ಮಿ ನಿಯೋ 7 ಫೋನ್ 12GB RAM + 256GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 16GB RAM ಮತ್ತು 1TB ಸ್ಟೋರೇಜ್ ಹೊಂದಿದೆ.
ಕ್ಯಾಮೆರಾ ಸೆಟಪ್
ಕಂಪನಿಯು ರಿಯಲ್‌ಮಿ ನಿಯೋ 7 ಫೋನಿನ ಕ್ಯಾಮೆರಾ ಸೆಟಪ್ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ರಿಯಲ್‌ಮಿ GT ನಿಯೋ 6 ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ ನಿಯೋ 7 ಮೊಬೈಲ್ 6500mAh ಸಾಮರ್ಥ್ಯಕ್ಕಿಂತ ಹೆಚ್ಚಿನ ಬ್ಯಾಟರಿಯನ್ನು ಹೊಂದಿರುತ್ತದೆ. ಇದು 7000mAh ಬ್ಯಾಟರಿ ಆಗಿರಬಹುದು. ರಿಯಲ್‌ಮಿ GT ನಿಯೋ 6 ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.


Click it and Unblock the Notifications








