Home
ಮೊಬೈಲ್

Realme: ರಿಯಲ್‌ಮಿ ಗತ್ತು! 7200mAh ಬ್ಯಾಟರಿ.. 1TB ಸ್ಟೋರೇಜ್.. ಯಾವ ಫೋನ್? ಬೆಲೆಯೂ ಕಡಿಮೆಯೇ?

ರಿಯಲ್‌ಮಿ ಕೊನೆಗೂ ತನ್ನ ಬಹುನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಪ್ರೀಮಿಯಂ ವಿನ್ಯಾಸ, ಶಕ್ತಿಯುತ ಪ್ರೊಸೆಸರ್ ಮತ್ತು ಪವರ್ ಫುಲ್ ಬ್ಯಾಟರಿಯೊಂದಿಗೆ ಸಂಪೂರ್ಣ ಕಾರ್ಯಕ್ಷಮತೆಯ ಪ್ಯಾಕೇಜ್ ಆಗಿದೆ. ಹೌದು, ಬಹುನಿರೀಕ್ಷಿತ ರಿಯಲ್‌ಮಿ GT 7 (Realme GT 7) ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಗೇಮಿಂಗ್‌ ಪ್ರಿಯರ ನೆಚ್ಚಿನ ಫೋನ್ ಆಗಿದೆ. ಇದರಲ್ಲಿ 13 ಜನಪ್ರಿಯ ಗೇಮಿಂಗ್‌ಗಳಲ್ಲಿ 144 ಫ್ರೇಮ್ ಮೋಡ್ ಅನ್ನು ಸಪೋರ್ಟ್ ಮಾಡುತ್ತದೆ. ಈ ನೂತನ ರಿಯಲ್‌ಮಿ GT 7 ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಿಯಲ್‌ಮಿ GT 7 ಫೋನಿನ ದೊಡ್ಡ ವಿಶೇಷತೆ ಎಂದರೆ, ಇದರ ಬ್ಯಾಟರಿ ಬ್ಯಾಕಪ್. ಹೌದು, ಈ ಮೊಬೈಲ್ 7200mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9400+ ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದೆ. ಇದು 6.8 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಈ ರಿಯಲ್‌ಮಿ GT 7 ಫೋನನ್ನು ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಐದು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ.

Realme: 7200mAh ಬ್ಯಾಟರಿ.. 1TB ಸ್ಟೋರೇಜ್.. ಯಾವ ಫೋನ್? ಕಡಿಮೆ ಬೆಲೆ?

ರಿಯಲ್‌ಮಿ GT 7 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ GT 7 ಸ್ಮಾರ್ಟ್‌ಫೋನ್ 6.78 ಇಂಚಿನ 1.5K OLED ಡಿಸ್ಪ್ಲೇ ಹೊಂದಿದೆ. ಇದು 2800 × 1280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 6500 (1800 ನಿಟ್ಸ್‌ ಜಾಗತಿಕ ಬ್ರೈಟ್‌ನೆಸ್) ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್‌ ಕೇವಲ 1.3 ಎಂಎಂ ಅತಿ ಕಿರಿದಾದ ಬೆಜೆಲ್‌ಗಳನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ GT 7 ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 9400+ ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಇದು ಇಮ್ಮಾರ್ಟಲಿಸ್ G925 ಜಿಪಿಯು ಮತ್ತು ರಿಯಲ್‌ಮಿಯ GT ಪರ್ಫಾರ್ಮೆನ್ಸ್ ಎಂಜಿನ್ 2.0 ಅನ್ನು ಸಹ ಒಳಗೊಂಡಿದೆ. ಗೇಮಿಂಗ್‌ಗಾಗಿ, ಈ ಫೋನ್ ಗ್ರ್ಯಾಫೀನ್ ಐಸ್ ಸೆನ್ಸಿಂಗ್ ಡಬಲ್ ಲೇಯರ್ ಕೂಲಿಂಗ್ ಹೊಂದಿದೆ. ಇದರೊಂದಿಗೆ 7700mm² VC ಕೂಲಿಂಗ್ ಪ್ಲೇಟ್ ಸಹ ಇದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ GT 7 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಒಳಗೊಂಡಿದೆ. ಈ ಕ್ಯಾಮೆರಾಗಳು 4K 60fps ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ GT 7 ಸ್ಮಾರ್ಟ್‌ಫೋನ್ 7200mAh ಸಾಮರ್ಥ್ಯ ಟೈಟಾನ್ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಇದು 100W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಈ ಬ್ಯಾಟರಿ ಕೇವಲ 19 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ GT 7 ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಹೊಂದಿದೆ. ಹಾಗೆಯೇ ಹೈ ರೆಸ್ ಆಡಿಯೊ ಹೊಂದಿರುವ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಒಳಗೊಂಡಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Realme: 7200mAh ಬ್ಯಾಟರಿ.. 1TB ಸ್ಟೋರೇಜ್.. ಯಾವ ಫೋನ್? ಕಡಿಮೆ ಬೆಲೆ?

ರಿಯಲ್‌ಮಿ GT 7 ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ GT 7 ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವನ್ನು 30,375 ರೂ.ಗೆ ಬಿಡುಗಡೆ ಮಾಡಲಾಗಿದೆ. 12GB RAM + 512GB ಸ್ಟೋರೇಜ್ ವೇರಿಯಂಟ್ ಬೆಲೆ 35,045 ರೂ. ಆಗಿದೆ. ಹಾಗೆಯೇ 16GB RAM + 256GB ಸ್ಟೋರೇಜ್ ಆಯ್ಕೆಯನ್ನು 33,875 ರೂ.ಗೆ ಮಾರಾಟ ಮಾಡಲಾಗುತ್ತದೆ. 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ 38,550 ರೂ. ಆಗಿದೆ.

ರಿಯಲ್‌ಮಿ GT ಫೋನಿನ ಟಾಪ್ ವೇರಿಯಂಟ್ 16GB RAM + 1TB ಸ್ಟೋರೇಜ್ ಅನ್ನು 44,390 ರೂ.ಗೆ ಲಾಂಚ್ ಮಾಡಲಾಗಿದೆ. ಈ ಮೊಬೈಲ್ ನೀಲಿ, ಬಿಳಿ ಮತ್ತು ಕಪ್ಪು ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ. ಈ ಫೋನ್‌ ಏಪ್ರಿಲ್ 29 ರಿಂದ ಚೀನಾದಲ್ಲಿ ತನ್ನ ಮಾರಾಟ ಪ್ರಾರಂಭವಾಗಲಿದೆ. ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ರಿಯಲ್‌ಮಿ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

Best Mobiles in India

English summary
realme GT7 with 7200mAh battery launched in china: When will launched in India?: check out price, Specifications And more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+