Home
ಮೊಬೈಲ್

ಶೀಘ್ರದಲ್ಲೇ Realme Narzo 70 Turbo 5G ಲಾಂಚ್; ಬಜೆಟ್ ಬೆಲೆ.. ವಿಶೇಷತೆ ನೋಡಿ

ರಿಯಲ್‌ಮಿ ತನ್ನ ಗ್ರಾಹಕರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ. ಶೀಘ್ರದಲ್ಲೇ ತನ್ನ ಪ್ರಮುಖ Narzo ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಸ್ವತಃ ಕಂಪನಿಯೇ ದೃಢಪಡಿಸಿದೆ. ಹೌದು, ರಿಯಲ್‌ಮಿ (Realme) ಕಂಪನಿಯು ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಬಿಡುಗಡೆಯನ್ನು ಘೋಷಿಸಿದೆ. ಈ ಹೊಸ ಫೋನ್ ಆಕರ್ಷಕ ಮೋಟಾರ್ ಸ್ಪೋರ್ಟ್ ವಿನ್ಯಾಸದೊಂದಿಗೆ ಬರುತ್ತದೆ. ವಿನ್ಯಾಸದ ಹೊರತಾಗಿ, ಈ ಫೋನ್ ಯುವಕರಿಗೆ ಟರ್ಬೊ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ 7.6 mm ತೆಳುವಾದ ನಯವಾದ ಪ್ರೊಫೈಲ್‌ನೊಂದಿಗೆ, ನಯವಾದ ಮತ್ತು ಸ್ಲಿಮ್ ಲುಕ್‌ನೊಂದಿಗೆ ಬರುತ್ತದೆ. ಗೇಮಿಂಗ್ ತಂತ್ರಜ್ಞಾನದೊಂದಿಗೆ ಬರುತ್ತಿರುವ ರಿಯಲ್‌ಮಿ ನಾರ್ಜೊ 70 ಟರ್ಬೊ 5G ವಿನ್ಯಾಸ ಮತ್ತು 5G ಕಾರ್ಯಕ್ಷಮತೆಯ ವಿಷಯದಲ್ಲಿ ಉತ್ತಮವಾಗಿದೆ ಎಂದು ಕಂಪನಿಯು ದೃಢಪಡಿಸಿದೆ. ಕಂಪನಿಯು ಇನ್ನೂ ಮೊಬೈಲ್‌ನ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿಲ್ಲ. ಆದರೆ, ಮುಂಬರುವ ಕೆಲವು ದಿನಗಳಲ್ಲಿ ಇದು ಲಾಂಚ್ ಆಗಬಹುದು ಎಂದು ಹೇಳಲಾಗುತ್ತಿದೆ.

ಶೀಘ್ರದಲ್ಲೇ Realme Narzo 70 Turbo 5G ಲಾಂಚ್; ಬಜೆಟ್ ಬೆಲೆ.. ವಿಶೇಷತೆ ನೋಡಿ

ಈ ಹೊಸ ಫೋನ್ ಗೇಮಿಂಗ್ ಅತ್ಯುತ್ತಮ ಆಯ್ಕೆ

ಮುಂಬರುವ ರಿಯಲ್‌ಮಿ ಫೋನನ್ನು ಟೀಸರ್‌ನಲ್ಲಿ ಹಳದಿ ಬಣ್ಣದ ಆಯ್ಕೆಯಲ್ಲಿ ತೋರಿಸಿರುವುದನ್ನು ನೋಡಬಹುದು. ರಿಯಲ್‌ಮಿ ಬ್ರ್ಯಾಂಡಿಂಗ್‌ನೊಂದಿಗೆ ಬಾಗಿದ ಚದರ ಕ್ಯಾಮೆರಾ ಮಾಡ್ಯೂಲ್ ಅನ್ನು ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಕಾಣಬಹುದು. ಇದು ಎಲ್ಇಡಿ ಫ್ಲ್ಯಾಷ್ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಒಟ್ಟಾರೆಯಾಗಿ, ಈ ಹೊಸ ಮೊಬೈಲ್ ವೇಗ ಮತ್ತು ಗೇಮಿಂಗ್ ಕಾರ್ಯಕ್ಷಮತೆಗೆ ಅತ್ಯುತ್ತಮವಾಗಿದೆ ಎಂದು ಹೇಳಲಾಗುತ್ತಿದೆ

ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು

  • 6GB RAM ಮತ್ತು 128GB ಸ್ಟೋರೇಜ್
  • 8GB RAM ಮತ್ತು 128GB ಸ್ಟೋರೇಜ್
  • 8GB RAM ಮತ್ತು 256GB ಸ್ಟೋರೇಜ್
  • 12GB RAM ಮತ್ತು 256GB ಸ್ಟೋರೇಜ್

ವರದಿಯ ಪ್ರಕಾರ, ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್‌ ಮಾದರಿ ಸಂಖ್ಯೆ RMX5003 ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಈ ಹಿಂದೆ ಸೋರಿಕೆಯಾದ ವರದಿಗಳ ಪ್ರಕಾರ, ಈ ಫೋನ್‌ ಅನ್ನು ನಾಲ್ಕು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್‌ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ನೀವು ನೇರಳೆ, ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಸಲು ಸಾಧ್ಯವಾಗಲಿದೆ.

ಈ ಸುದ್ದಿ ಓದಿದ್ದೀರಾ?: OnePlus: ಬರ್ತಿವೆ 2 ರಗಡ್ ಫೋನ್; ಫೀಚರ್ಸ್‌ ಲೀಕ್.. ಯಾವಾಗ ರಿಲೀಸ್?

50MP ಮುಖ್ಯ ಕ್ಯಾಮೆರಾ, 8MP ಸೆಲ್ಫಿ ಶೂಟರ್

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ F/1.9 ಅಪರ್ಚರ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಬೆಂಬಲದೊಂದಿಗೆ 12.6 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಇದು 4,096 x 3,072 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ. ಕಂಪನಿಯು ಈ ಫೋನನ್ನು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಪರಿಚಯಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

FV-5 ಪ್ರಕಾರ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, EIS ಮತ್ತು f/2.5 ಅಪರ್ಚರ್ ಹೊಂದಿರುವ 4 ಮೆಗಾಪಿಕ್ಸೆಲ್ ಲೆನ್ಸ್ ಅನ್ನು ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಮುಂಭಾಗದಲ್ಲಿ ಅಳವಡಿಸಲಾಗುತ್ತದೆ. ಇನ್ನೂ, ಲಾಂಚ್ ಸಮಯದಲ್ಲಿ ಫೋನ್‌ನಲ್ಲಿ 8MP ಕ್ಯಾಮೆರಾವನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ಫೋನಿನ ಬ್ಯಾಟರಿ ಮತ್ತು ಇನ್ನಿತರ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Realme Narzo 70 Turbo 5G launching soon in India; Know Expected Specs and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+