Home
ಮೊಬೈಲ್

Realme: ಹೊಸ 5G ಫೋನ್ ಬಂದಿದೆ.. 50MP ಕ್ಯಾಮೆರಾ.. 256GB ಮೆಮೊರಿ; ಯಾವುದು?

ರಿಯಲ್‌ಮಿ ಪ್ರಿಯರಿಗೆ ಸರ್ಪ್ರೈಸ್ ಗಿಫ್ಟ್ ಇದೆ. ಸದ್ದಿಲ್ಲದೇ ಹೊಸ ಫೋನ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಹೌದು, ರಿಯಲ್‌ಮಿ ಕಂಪನಿಯು ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ವಿಶೇಷವಾಗಿ ಗೇಮಿಂಗ್ ಪ್ರಿಯರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋನ್ 2,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿಯು ಘೋಷಿಸಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನನ್ನು ರಿಯಲ್‌ಮಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಇದು MediaTek Dimensity 7300 Energy ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನಿನಲ್ಲಿ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇ ಇದೆ. ಜೊತೆಗೆ, ಡೈನಾಮಿಕ್ ತಂತ್ರಜ್ಞಾನದೊಂದಿಗೆ 26GB RAM, ನೀರು ಮತ್ತು ಧೂಳು ನಿರೋಧಕ IP65 ರೇಟಿಂಗ್, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಹೊಸ ಫೋನ್ ಹೊಂದಿದೆ.

Realme: ಹೊಸ 5G ಫೋನ್ ಬಂದಿದೆ.. 50MP ಕ್ಯಾಮೆರಾ.. 256GB ಮೆಮೊರಿ; ಯಾವುದು?

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಬೆಲೆ ಮತ್ತು ಲಭ್ಯತೆ

ಕಂಪನಿಯು ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನನ್ನು ಮೂರು ಸ್ಟೋರೇಜ್‌ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ 6GB + 128GB ಸ್ಟೋರೇಜ್ ಬೆಲೆ 16,999 ರೂ. ಇದೆ. 8GB + 128GB ಸ್ಟೋರೇಜ್ ಬೆಲೆ 17,999 ರೂ.ಗೆ ಆಗಿದೆ. ಮತ್ತು ಇದರ ಟಾಪ್ ಮಾಡೆಲ್ 12GB + 256GB ಸ್ಟೋರೇಜ್ ಬೆಲೆ 20,999 ರೂ. ಇದೆ. ಇದು ಟರ್ಬೊ ಹಳದಿ, ಟರ್ಬೊ ಪರ್ಪಲ್, ಟರ್ಬೊ ಗ್ರೀನ್‌ ಬಣ್ಣಗಳಲ್ಲಿ ಬರುತ್ತದೆ.

ಕಂಪನಿಯು ಈ ಮೊಬೈಲ್‌ ಖರೀದಿ ಮೇಲೆ 2,000 ರೂಪಾಯಿಗಳ ತ್ವರಿತ ಕೂಪನ್ ರಿಯಾಯಿತಿಯನ್ನು ನೀಡುತ್ತಿದೆ. ಈ ಡಿಸ್ಕೌಂಟ್‌ನೊಂದಿಗೆ ಮೂಲ ಮಾದರಿಯು 14,999 ರೂ.ಗೆ ಲಭ್ಯವಿರಲಿದೆ. ಮಧ್ಯಮ ಮಾದರಿ 15,999 ರೂ. ಮತ್ತು ಉನ್ನತ ಮಾದರಿಯನ್ನು 18,999 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಪೋನ್ ಸೆಪ್ಟೆಂಬರ್ 16 ರಂದು ಮಧ್ಯಾಹ್ನ 12 ಗಂಟೆಗೆ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೇಜಾನ್, realme.com ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಪ್ರಾರಂಭಿಸುತ್ತದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್‌ 6.67 ಇಂಚಿನ Samsung E4 OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರ, 92.65% ಸ್ಕ್ರೀನ್-ಟು-ಬಾಡಿ ಅನುಪಾತ, 6,000,000:1 ಕಾಂಟ್ರಾಸ್ಟ್ ಅನುಪಾತ ಮತ್ತು 16.7 ಮಿಲಿಯನ್ ಬಣ್ಣಗಳೊಂದಿಗೆ ಬರುತ್ತದೆ. ಡಿಸ್ಪ್ಲೇಯು 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 106% NTSC ಬಣ್ಣದ ಹರವು, 600 ನಿಟ್ಸ್‌ ಸರಾಸರಿ, 1200 ನಿಟ್ಸ್‌ ವರೆಗಿನ ಹೆಚ್ಚಿನ ಬ್ರೈಟ್‌ನೆಸ್‌ ಮತ್ತು AG DT Star 2 ಗಾಜಿನ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G 4nm ಚಿಪ್‌ಸೆಟ್ ಹೊಂದಿದೆ. ಆಕ್ಟಾ-ಕೋರ್, 2.5GHz ವರೆಗೆ ವೇಗವನ್ನು ಹೊಂದಿದೆ. ಇದು Android 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸ್ಟೇನ್ಲೆಸ್ ಸ್ಟೀಲ್ ಆವಿ ತಂಪಾಗಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಫೋನ್ Turbo AnTuTu ಬೆಂಚ್‌ಮಾರ್ಕ್ ಸ್ಕೋರ್ 750,000 ಪಡೆದಿದೆ. ಅಲ್ಲದೆ, ಈ ಫೋನ್ ಅತ್ಯುತ್ತಮ ಗೇಮಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅನೇಕ ಗೇಮ್‌ಗಳಲ್ಲಿ 90FPS ಕಾರ್ಯಕ್ಷಮತೆಯನ್ನು ನೀಡುತ್ತದೆ.

ಕ್ಯಾಮೆರಾ: ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ F1.8 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿರುತ್ತದೆ. ಇದು 2 ಮೆಗಾಪಿಕ್ಸೆಲ್ f/2.4 ಅಪರ್ಚರ್ ಲೆನ್ಸ್‌ನ ಬೆಂಬಲವನ್ನು ಪಡೆಯುತ್ತದೆ. ಜೊತೆಗೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಹೊಸ ರಿಯಲ್‌ಮಿ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45 ವ್ಯಾಟ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ ಬೆಂಬಲ ಹೊಂದಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.

ಇತರೆ ವೈಶಿಷ್ಟ್ಯಗಳು: ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ Wi-Fi 6, ಬ್ಲೂಟೂತ್ 5.4, ನೀರು ನಿರೋಧಕ IP65 ರೇಟಿಂಗ್, ಮಳೆ ನೀರಿನ ಟಚ್ ವೈಶಿಷ್ಟ್ಯ, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ಫ್ಲ್ಯಾಷ್ ಕ್ಯಾಪ್ಸುಲ್, ರೀಡಿಂಗ್ ಮೋಡ್ ಮತ್ತು ಇನ್ನಿತರ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme Narzo 70 Turbo 5G launched with MediaTek Dimensity 7300: know price and availability
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+