Realme: ಕೇವಲ 14,999 ರೂ.ಗೆ ಹೊಸ ಫೋನ್: ನಿರೀಕ್ಷೆಗೂ ಮೀರಿದ ಫೀಚರ್ಸ್!
ರಿಯಲ್ ಮಿ ನಾರ್ಜೋ 70x 5G ಸ್ಮಾರ್ಟ್‌ಫೋನ್ (Narzo 70x 5G) ಅನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಈ ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾತ್ರ ಅನಾವರಣಗೊಂಡಿತ್ತು. ಇದೀಗ, ಈ ಹ್ಯಾಂಡ್‌ಸೆಟ್‌ನ ಹೊಸ 8GB RAM ರೂಪಾಂತರವನ್ನು ರಿಲೀಸ್ ಮಾಡಲಾಗಿದೆ. ರಿಯಲ್ ಮಿ ಕಂಪನಿಯು ಹೆಚ್ಚಿನ RAM ಮತ್ತು ಅದೇ ಸ್ಟೋರೇಜ್‌ನೊಂದಿಗೆ ಬಜೆಟ್ ಬೆಲೆಯಲ್ಲಿ ಹೊಸ ರೂಪಾಂತರವನ್ನು ಘೋಷಿಸಿದೆ. ಅಗ್ಗದ ಬೆಲೆಯಲ್ಲಿ 5G ಮೊಬೈಲ್ ಹುಡುಕುತ್ತಿರುವ ಗ್ರಾಹಕರಿಗೆ Realme NARZO 70x 5G ಪರ್ಫೆಕ್ಟ್ ಆಯ್ಕೆಯಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Realme NARZO 70x 5G ಸ್ಮಾರ್ಟ್‌ಫೋನ್ ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಮೀಡಿಯಾಟೆಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದರ ಜೊತೆಗೆ IP54-ರೇಟೆಡ್ ಅನ್ನೂ ಸಹ ಪಡೆದಿದೆ. ಈ ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್‌ನಲ್ಲಿ ಅನಾವರಣ ಮಾಡಲಾಗಿತ್ತು. ಇದೀಗ, 8GB RAM ಸ್ಟೋರೇಜ್ ವೇರಿಯಂಟ್ ಅನ್ನು ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ Realme NARZO 70x 5Gನ ಬೆಲೆ ಮತ್ತು ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.

Realme NARZO 70x 5G: 8GB/128GB ಬೆಲೆ ಎಷ್ಟು?
Realme NARZO 70x ನ 8GB/128GB ಸ್ಟೋರೇಜ್ ವೇರಿಯಂಟ್ 14,999 ರೂ. ಬೆಲೆಯೊಂದಿಗೆ ಬರುತ್ತದೆ. ಬ್ರ್ಯಾಂಡ್ ಹೊಸ ವೇರಿಯಂಟ್‌ಗಾಗಿ 2,000 ರೂ. ಕೂಪನ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಕೂಪನ್ ಬಳಸಿದರೆ ನೀವು 12,999 ರೂ.ಗೆ ಖರೀದಿಸಬಹುದು. ಇದಲ್ಲದೆ, ಫೋನ್‌ನ ಮೂಲ 4GB/128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 11,999 ರೂ. ಆಗಿದ್ದರೆ, 6GB/128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 13,499 ರೂ. ಇದೆ.
ಇನ್ನೂ Realme Narzo 70x 5G ಲಭ್ಯತೆ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ ಅನ್ನು ಐಸ್ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹೊಸ ರೂಪಾಂತರವು ಪ್ರಸ್ತುತ ಬ್ರ್ಯಾಂಡ್‌ನ ಅಧಿಕೃತ ಸೈಟ್ ಮತ್ತು Amazon ನಲ್ಲಿ ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ ನಾರ್ಜೋ 70x 5G ಫೀಚರ್ಸ್
Realme Narzo 70x 5G ಫೋನ್ 6.72 ಇಂಚಿನ ಫುಲ್ ಹೆಚ್‌ಡಿಪ್ಲಸ್ (1,080x2,400 ಪಿಕ್ಸೆಲ್) ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ, 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಅನುಭವವನ್ನು ನೀಡಲಿದೆ. ಇದು ಆರ್ಮ್ ಮಾಲಿ-ಜಿ 57 ಜಿಪಿಯು ಬಲದೊಂದಿಗೆ 8GB RAM ಸ್ಟೋರೇಜ್ ಆಯ್ಕೆ ಪಡೆದಿದೆ. ಇದರಲ್ಲೂ ಸಹ ಡೈನಾಮಿಕ್ RAM ಫೀಚರ್ಸ್ ಆಯ್ಕೆ ನೀಡಲಾಗಿದೆ.
ರಿಯಲ್‌ಮಿ ನಾರ್ಜೋ 70x 5G ಕ್ಯಾಮೆರಾ ಸೆಟಪ್
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಶೂಟರ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಕ್ಯಾಮೆರಾ ಹೊಂದಿದೆ. ಹಾಗೂ ಈ ಫೋನ್ ಬ್ಯಾಟರಿ ಎಚ್ಚರಿಕೆಗಳು ಮತ್ತು ಚಾರ್ಜಿಂಗ್ ಸ್ಟೇಟಸ್ ಅನ್ನು ತೋರಿಸುವ ಮಿನಿ ಕ್ಯಾಪ್ಸುಲ್ 2.0 ಫೀಚರ್ಸ್ ಅನ್ನು ಪಡೆದಿದೆ.
ಕೈಗೆಟುಕುವ ಬೆಲೆಯಲ್ಲಿ ಸಿಗುವ 5G ಮೊಬೈಲ್
ಇನ್ನೂ, Realme Narzo 70x 5G ಮೊಬೈಲ್‌ನ ಕನೆಕ್ಟಿವಿಟಿ ಆಯ್ಕೆಗಳು ಮತ್ತು ಆಡಿಯೋ ಫೀಚರ್ಸ್ ವಿಭಾಗದಲ್ಲಿ ರಿಯಲ್‌ಮಿ ನಾರ್ಜೋ 70 5G ಅನ್ನೇ ಹೋಲಲಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು IP54-ರೇಟೆಡ್ ಬಿಲ್ಡ್ ಅನ್ನು ಸಹ ಹೊಂದಿದೆ. 45W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಈ ಫೋನ್ ಪಡೆದುಕೊಂಡಿದೆ. ಕೈಗೆಟುಕುವ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ Realme NARZO 70x 5G ಬೆಸ್ಟ್ ಆಯ್ಕೆಯಾಗಿದೆ.


Click it and Unblock the Notifications








