Realme Narzo 80 Lite 4G ಫೋನ್ ಬಿಡುಗಡೆ: ಕೊಡುಗೆಯ ಬೆಲೆ 6,599 ರೂ. ಮಾತ್ರ!
ರಿಯಲ್‌ಮಿ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ Realme Narzo 80 Lite 4G ಅನ್ನು ಭಾರತದಲ್ಲಿಂದು (23, ಜುಲೈ) ಬಿಡುಗಡೆ ಮಾಡಿದೆ. ದೇಶದಲ್ಲಿ ಕಳೆದ ತಿಂಗಳು ಬಿಡುಗಡೆಯಾದ Narzo 80 Lite 5G ಸ್ಮಾರ್ಟ್‌ಫೋನಿನ 4G ಆವೃತ್ತಿಯಾಗಿ ಈ ಫೋನ್ ಬಿಡುಗಡೆಯಾಗಿದ್ದು, ಕೈಗೆಟುಕುವ ದರದಲ್ಲಿ ಮಿಲಿಟರಿ-ದರ್ಜೆಯ ಆಘಾತ ನಿರೋಧಕತೆ, 6.74-ಇಂಚಿನ HD+ ಡಿಸ್‌ಪ್ಲೇ, 6,300mAh ಬ್ಯಾಟರಿ ಮತ್ತು ಯುನಿಸಾಕ್ T7250 SoC ಪ್ರೊಸೆಸರ್ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಈ ಫೋನಿನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Realme Narzo 80 Lite 4G : ವೈಶಿಷ್ಟ್ಯಗಳು
ಹೊಸ Realme Narzo 80 Lite 4G ಫೋನ್ 6.74-ಇಂಚಿನ HD+ (720 x 1,600 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ನೀಡುತ್ತದೆ. ಈ ಡಿಸ್‌ಪ್ಲೇಯು 563 nits ಗರಿಷ್ಠ ಹೊಳಪನ್ನು ಹೊಂದಿದ್ದು, 90.4% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಜೊತೆಗೆ ಇದು 83.5% NTSC ಬಣ್ಣದ ಗ್ಯಾಮಟ್ ಕವರೇಜ್ ನೀಡುತ್ತದೆ ಎಂದು ರಿಯಲ್‌ಮಿ ತಿಳಿಸಿದೆ.
ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ ಆಕ್ಟಾ-ಕೋರ್ ಯುನಿಸಾಕ್ T7250 SoC ಪ್ರೊಸೆಸರ್ ಮತ್ತು ಮಾಲಿ G57 MP1 GPU ಗಳಿವೆ. ಇವುಗಳನ್ನು 6GB RAM ವರೆಗೆ ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. RAM ಅನ್ನು ವಾಸ್ತವಿಕವಾಗಿ 16GB ವರೆಗೆ ವಿಸ್ತರಿಸಬಹುದಾದ ಅವಕಾಶವವೂ ಇದೆ. ಸಾಫ್ಟ್‌ವೇರ್ ವಿಭಾಗದಲ್ಲಿ ಈ ಫೋನ್ Android 15 ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗಲ್ಲಿ, ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ f/2.2 ಅಪರ್ಚರ್ ಹೊಂದಿರುವ 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ (OV13B10 ಸಂವೇದಕ) ಮತ್ತು ಅನಿರ್ದಿಷ್ಟ ದ್ವಿತೀಯ ಸಂವೇದಕಗಳು ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ SC520CS ಸೆನ್ಸರ್ ಮತ್ತು f/2.2 ಅಪರ್ಚರ್ ಹೊಂದಿರುವ 5-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಮಡಿದೆ.

ಬ್ಯಾಟರಿ ವಿಭಾಗದಲ್ಲಿ, ಈ ಸ್ಮಾಫೋನ್ 15W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಶಕ್ತಿಯುತ 6,300mAh ಬ್ಯಾಟರಿಯನ್ನು ಹೊಂದಿದೆ. ಇದು 5W ವೈರ್ಡ್ ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯವನ್ನೂ ಒಳಗೊಂಡಿದೆ. ಒಂದೇ ಚಾರ್ಜ್‌ನಲ್ಲಿ 20.7 ಗಂಟೆಗಳ YouTube ಪ್ಲೇಬ್ಯಾಕ್ ಮತ್ತು 19 ಗಂಟೆಗಳವರೆಗೆ Instagram ಬಳಕೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನುಳಿದಂತೆ, 4G, ಬ್ಲೂಟೂತ್ 5.2, Wi-Fi 5, GPS ಮತ್ತು USB ಟೈಪ್-C ಪೋರ್ಟ್ ಸಂಪರ್ಕ ಆಯ್ಕೆಗಳು. IP54-ರೇಟೆಡ್ ಧೂಳು ಮತ್ತು ನೀರಿನ ಪ್ರತಿರೋಧ, ಮಿಲಿಟರಿ-ದರ್ಜೆಯ ಆಘಾತ ನಿರೋಧಕತೆಯೊಂದಿಗೆ ಆರ್ಮರ್‌ಶೆಲ್ ರಕ್ಷಣೆಯಂತಹ ವೈಶಿಷ್ಟ್ಯಗಳಿವೆ. ಜೊತೆಗೆ ರಿಯಲ್‌ಮಿ ಈ ಫೋನ್‌ನಲ್ಲಿ AI ಬೂಸ್ಟ್, AI ಕಾಲ್ ನಾಯ್ಸ್ ರಿಡಕ್ಷನ್ 2.0 ಮತ್ತು ಸ್ಮಾರ್ಟ್ ಟಚ್‌ನಂತಹ ಹಲವಾರು AI-ಚಾಲಿತ ವೈಶಿಷ್ಟ್ಯಗಳನ್ನು ಸಹ ಸೇರಿಸಿದೆ.
Realme Narzo 80 Lite 4G : ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme Narzo 80 Lite 4G ಫೋನಿನ ಬೆಲೆ 4GB RAM + 64GB ಸ್ಟೋರೇಜ್ ಮಾದರಿಗೆ ₹7,299 ರಿಂದ ಪ್ರಾರಂಭವಾಗುತ್ತದೆ. 6GB RAM + 128GB ಸ್ಟೋರೇಜ್ ಮಾದರಿ ₹8,299 ಬೆಲೆಯನ್ನು ಹೊಂದಿದೆ. ಆರಂಭಿಕ ಕೊಡುಗೆಯಾಗಿ, ಖರೀದಿದಾರರು ₹1,000 ವೋಚರ್ ಮತ್ತು ₹700 ರಿಯಾಯಿತಿಯನ್ನು ಪಡೆಯಬಹುದು, ಇದರಿಂದ ಪರಿಣಾಮಕಾರಿ ಬೆಲೆ 4GB ಮಾದರಿಗೆ ₹6,599 ಮತ್ತು 6GB ಮಾದರಿಗೆ ₹7,599 ಆಗುತ್ತದೆ.
ಇನ್ನು ಈ Realme Narzo 80 Lite 4G ಫೋನ್ ಅಬ್ಸಿಡಿಯನ್ ಕಪ್ಪು ಮತ್ತು ಬೀಚ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಜುಲೈ 28 ರಂದು ಮಧ್ಯಾಹ್ನ 12 ಗಂಟೆಗೆ ಗೆ ಫ್ಲ್ಯಾಶ್ ಸೇಲ್ ಮೂಲಕ ಇದು ಖರೀದಿಗೆ ಲಭ್ಯವಿರುತ್ತದೆ, ಆದರೆ ಮೊದಲ ಮಾರಾಟ ಜುಲೈ 31 ರಂದು ಮಧ್ಯಾಹ್ನ 12 ಗಂಟೆಗೆ ಯಿಂದ ಪ್ರಾರಂಭವಾಗುತ್ತದೆ.


Click it and Unblock the Notifications








