Home
ಮೊಬೈಲ್

Realme Narzo 80 Lite 5G ಲಾಂಚ್: 9,999 ರೂ.ಗೆ 6,000mAh ಬ್ಯಾಟರಿ ಫೋನ್!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಬಜೆಟ್ ಬೆಲೆಯ Realme Narzo 80 Lite 5G ಫೋನ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ರಿಯಲ್‌ಮಿ ಆಯೋಜಿಸಿದ್ದ ಸಮಾರಂಭದಲ್ಲಿ ಪರಿಚಯಿಸಲಾದ ಈ ಹೊಸ ಸ್ಮಾರ್ಟ್‌ಫೋನ್ ಕೈಗೆಟುಕುವ ಬೆಲೆ ಮತ್ತು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಕೇವಲ ₹9,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಬೆಲೆಯಲ್ಲಿ 5G ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದೆ. ಹಾಗಾದರೆ, ಹೊಸ Realme Narzo 80 Lite 5G ಫೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Realme Narzo 80 Lite 5G: ಬೆಲೆ ಮತ್ತು ಬಣ್ಣ ಆಯ್ಕೆಗಳು
ಭಾರತದಲ್ಲಿ ಈಗ Realme Narzo 80 Lite 5G ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮಾದರಿಗೆ ₹10,499 ರೂ. ಬೆಲೆ ನಿಗದಿಪಡಿಸಲಾಗಿದ್ದು, 6GB RAM ಮತ್ತು 128GB ಸ್ಟೋರೇಜ್ ಮಾದರಿಯು ₹11,499 ರೂ. ಬೆಲೆಯನ್ನು ಹೊಂದಿದೆ. ಆದಾಗ್ಯೂ, ಬಿಡುಗಡೆ ಕೊಡುಗೆಯಾಗಿ ರಿಯಲ್‌ಮಿ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಇದರಿಂದ 4GB + 128GB ರೂಪಾಂತರವು ₹500 ರಿಯಾಯಿತಿಯೊಂದಿಗೆ ₹9,999 ರೂ.ಗೆ ಲಭ್ಯವಿದೆ. ಅದೇ ರೀತಿ, 6GB + 128GB ರೂಪಾಂತರವು ₹700 ರಿಯಾಯಿತಿಯೊಂದಿಗೆ ₹10,799 ರೂ.ಗೆ ಸಿಗಲಿದೆ ಗ್ರಾಹಕರು ಇದೇ ಜೂನ್ 23 ರಿಂದ ಅಮೆಜಾನ್ ಮೂಲಕ, ಕ್ರಿಸ್ಟಲ್ ಪರ್ಪಲ್ ಮತ್ತು ಓನಿಕ್ಸ್ ಬ್ಲಾಕ್ ಎಂಬ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.

Realme Narzo 80 Lite 5G: ಪ್ರಮುಖ ವೈಶಿಷ್ಟ್ಯಗಳು
ನೂತನ Realme Narzo 80 Lite 5G ಸ್ಮಾರ್ಟ್‌ಫೋನ್ 6.56-ಇಂಚಿನ LCD ಡಿಸ್ಪ್ಲೇ ಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ದರ ಮತ್ತು 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮಟ್ಟವನ್ನು ಒದಗಿಸುತ್ತದೆ. ಕಾರ್ಯಕ್ಷಮತೆಗಾಗಿ, ಈ ಫೋನ್ MediaTek Dimensity 6300 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 6GB ವರೆಗೆ RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ, ಬಹುಕಾರ್ಯ ಮತ್ತು ಡೇಟಾ ಸಂಗ್ರಹಣೆಗೆ ಸಾಕಷ್ಟು ಸ್ಥಳಾವಕಾಶ ಒದಗಿಸುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಫೋನ್ Android 15-ಆಧಾರಿತ Realme UI 6.0 ಸ್ಕಿನ್ ನೊಂದಿಗೆ ಬರುತ್ತದೆ ಮತ್ತು Google Gemini ಏಕೀಕರಣವನ್ನು ನೀಡುತ್ತದೆ, ಇದು ಬಳಕೆದಾರರಿಗೆ ಸುಧಾರಿತ AI ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

Realme Narzo 80 Lite 5G ಲಾಂಚ್: 9,999 ರೂ.ಗೆ 6,000mAh ಬ್ಯಾಟರಿ ಫೋನ್!

ಕ್ಯಾಮರಾ ವಿಭಾಗದಲ್ಲಿ, ಈ Realme Narzo 80 Lite 5G ಫೋನ್ ಆಯತಾಕಾರದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಇದು ಆಟೋಫೋಕಸ್ ಬೆಂಬಲದೊಂದಿಗೆ 32-ಮೆಗಾಪಿಕ್ಸೆಲ್ GC32E2 ಪ್ರಾಥಮಿಕ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮರಾ ಸೆಟಪ್ ಮಾತ್ರೆ ಆಕಾರದ LED ಫ್ಲ್ಯಾಷ್ ಘಟಕವನ್ನು ಹೊಂದಿದ್ದು, AI ಕ್ಲಿಯರ್ ಫೇಸ್‌ನಂತಹ AI- ಬೆಂಬಲಿತ ಇಮೇಜಿಂಗ್ ಮತ್ತು ಎಡಿಟಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬ್ಯಾಟರಿ ವಿಭಾಗದಲ್ಲಿ, ದೀರ್ಘಕಾಲದ ಬಳಕೆಗೆ ಸೂಕ್ತವಾದ ಶಕ್ತಿಶಾಲಿ 6,000mAh ಬ್ಯಾಟರಿ ಹೊಂದಿರುವ ಈ Realme Narzo 80 Lite 5G ಫೋನ್ 15W ವೈರ್ಡ್ ಮತ್ತು 5W ರಿವರ್ಸ್ ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಸಂಪರ್ಕಕ್ಕಾಗಿ, ಹ್ಯಾಂಡ್‌ಸೆಟ್ ಡ್ಯುಯಲ್ 5G ಸಿಮ್ ಸಂಪರ್ಕವನ್ನು ಬೆಂಬಲಿಸುತ್ತದೆ.

ಈ ಫೋನ್‌ನ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಬಾಳಿಕೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಮಿಲಿಟರಿ ದರ್ಜೆಯ MIL-STD-810H ಆಘಾತ ನಿರೋಧಕ ಪ್ರಮಾಣೀಕರಣ ವನ್ನು ಹೊಂದಿದೆ, ಇದು ದೈನಂದಿನ ಬಳಕೆಯಲ್ಲಿ ಹೆಚ್ಚಿನ ಬಾಳಿಕೆಯನ್ನು ಖಚಿತಪಡಿಸುತ್ತದೆ. 7.94mm ದಪ್ಪವಾದ ಈ ಫೋನ್ 197g ತೂಗುತ್ತದೆ. ಈ ಹೊಸ ಮಾದರಿಯು ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾದ Realme Narzo 80x ಮತ್ತು Narzo 80 Pro ರೂಪಾಂತರಗಳ ಸರಣಿಗೆ ಸೇರ್ಪಡೆಯಾದ್ದು, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆ, ಕ್ಯಾಮರಾ ಸಾಮರ್ಥ್ಯ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಬಾಳಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಈ Realme Narzo 80 Lite 5G ಫೋನ್ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ.

Best Mobiles in India

English summary
Realme Narzo 80 Lite 5G was launched in India on Monday, featuring a MediaTek Dimensity 6300 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+