Home
ಮೊಬೈಲ್

ಜನರ ಹೃದಯ ಗೆದ್ದ ಫೋನ್! ಹೊಸ ಅವತಾರದಲ್ಲಿ ಬಿಡುಗಡೆ.. ಬೆಲೆ ನೋಡಿದರೆ ವಾವ್ ಅಂತಿರಾ! ಏನೆಲ್ಲಾ ಅಪ್ಡೇಟ್?

ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್‌ ನೀಡಿದೆ. ಈ 5G ಫೋನ್‌ ಹೊಸ ಅವತಾರದಲ್ಲಿ ಭಾರತಕ್ಕೆ ಎಂಟ್ರಿಕೊಟ್ಟಿದೆ. ಹೌದು, ಕಂಪನಿಯು ಇತ್ತೀಚೆಗೆ ಹೊಸ ರಿಯಲ್‌ಮಿ ನಾರ್ಜೊ 80x 5G (realme Narzo 80x 5G) ಮತ್ತು ರಿಯಲ್‌ಮಿ ನಾರ್ಜೊ 80 ಪ್ರೊ 5G (Realme Narzo 80 Pro 5G) ಅನ್ನು ಬಿಡುಗಡೆ ಮಾಡಿದೆ. ಆದಾಗ್ಯೂ, ಇದೀಗ ಕಂಪನಿಯು ರಿಯಲ್‌ಮಿ ನಾರ್ಜೊ 80 ಪ್ರೊ ಫೋನಿನ ಹೊಸ ಬಣ್ಣದ ರೂಪಾಂತರವನ್ನು ಪರಿಚಯಿಸಿದೆ. ನೀವು ಈ ಫೋನನ್ನು ಹೊಸ ನೈಟ್ರೋ ಆರೆಂಜ್ ಶೇಡ್‌ನಲ್ಲಿ ಖರೀದಿಸಬಹುದು. ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ನೋಡೋಣ ಬನ್ನಿ.

ರಿಯಲ್‌ಮಿ ನಾರ್ಜೊ 80 ಪ್ರೊ ಮೊಬೈಲ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ ಎಂದೇ ಹೇಳಬಹುದು. ಹೊಸ ನೈಟ್ರೋ ಆರೆಂಜ್ ಕಲರ್ (realme NARZO 80 Pro 5G Nitro Orange color variant) ಸ್ಮಾರ್ಟ್‌ಫೋನ್ 8GB RAM ಮತ್ತು 256GB ಸ್ಟೋರೇಜ್ ಮತ್ತು 12GB RAM ಮತ್ತು 256GB ಸ್ಟೋರೇಜ್‌ನಲ್ಲಿ ಬರುತ್ತದೆ. ಇದರ ಬೆಲೆ 19,999 ರೂ.ನಿಂದ ಪ್ರಾರಂಭವಾಗುತ್ತದೆ. ಕಂಪನಿಯು ಈ ಫೋನಿನ ಹೊಸ ಬಣ್ಣ ರೂಪಾಂತರದ ಮೇಲೆ ಬ್ಯಾಂಕ್ ರಿಯಾಯಿತಿ ಮತ್ತು ಆಫರ್ ಘೋಷಿಸಿದೆ. ಈ ಮೊಬೈಲ್‌ನ ವಿಶೇಷತೆಗಳು ಮತ್ತು ಆಫರ್ ತಿಳಿಯಲು ಮುಂದೆ ಓದಿ.

ಜನರ ಹೃದಯ ಗೆದ್ದ ಫೋನ್! ಹೊಸ ಅವತಾರದಲ್ಲಿ ಲಾಂಚ್.. ಬೆಲೆ ನೋಡಿದರೆ ವಾವ್ ಅಂತಿರಾ!

ರಿಯಲ್‌ಮಿ ನಾರ್ಜೊ 80 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಾರ್ಜೊ 80 ಪ್ರೊ 5G ಸ್ಮಾರ್ಟ್‌ಫೋನ್ 6.77 ಇಂಚಿನ ಪೂರ್ಣ HD+ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2392 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 2500Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಇದು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಸಹ ಹೊಂದಿದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಾರ್ಜೊ 80 ಪ್ರೊ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ realme UI 6.0 ಜೊತೆಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 MC2 ಜಿಪಿಯು ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೊ 80 ಪ್ರೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನ್ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಮಿಲಿಟರಿ ದರ್ಜೆಯ ಬಾಳಿಕೆ (MIL-STD 810H), ಧೂಳು ಮತ್ತು ನೀರಿನ ವಿರುದ್ಧ ರಕ್ಷಣಗೆ IP66 + IP68 + IP69 ರೇಟಿಂಗ್ ಹೊಂದಿದೆ. ಜೊತೆಗೆ ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ಒಳಗೊಂಡಿದೆ.

ಜನರ ಹೃದಯ ಗೆದ್ದ ಫೋನ್! ಹೊಸ ಅವತಾರದಲ್ಲಿ ಲಾಂಚ್.. ಬೆಲೆ ನೋಡಿದರೆ ವಾವ್ ಅಂತಿರಾ!

ರಿಯಲ್‌ಮಿ ನಾರ್ಜೊ 80 ಪ್ರೊ 5G ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ ಬೆಲೆ = 19,999 ರೂ.
8GB RAM + 256GB ಸ್ಟೋರೇಜ್ ಬೆಲೆ = 21,499 ರೂ.
12GB RAM + 256GB ಸ್ಟೋರೇಜ್ ಬೆಲೆ = 23,499 ರೂ.

ಇದರ ಬೆಲೆ ನೋಡುವುದಾದರೆ, 8GB RAM + 128GB ಸ್ಟೋರೇಜ್ ರೂಪಾಂತರವು ರೇಸಿಂಗ್ ಗ್ರೀನ್ ಮತ್ತು ಸ್ಪೀಡ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ. ಇದರ ಬೆಲೆ 19,999 ರೂ.ಆಗಿದೆ. ನೀವು 8GB RAM + 256GB ಸ್ಟೋರೇಜ್ ಮಾದರಿಯನ್ನು ನೈಟ್ರೋ ಆರೆಂಜ್, ರೇಸಿಂಗ್ ಗ್ರೀನ್ ಮತ್ತು ಸ್ಪೀಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದು. ಇದು 21,499 ರೂ.ಗೆ ಲಭ್ಯವಿದೆ. ಇದಲ್ಲದೆ, 12GB RAM + 256GB ಸ್ಟೋರೇಜ್ ವೇರಿಯಂಟ್ ನೈಟ್ರೋ ಆರೆಂಜ್ ಮತ್ತು ಸ್ಪೀಡ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ. ಇದು 23,499 ರೂ.ಗಳಿಗೆ ಮಾರಾಟವಾಗುತ್ತಿದೆ

ರಿಯಲ್‌ಮಿ ಫೋನಿನ ಹೊಸ ಬಣ್ಣಗಳ ಮೇಲೆ, 1000 ರೂ.ಗಳ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೆ, 1000 ರೂ.ಗಳ ರಿಯಾಯಿತಿ ಕೂಪನ್ ಸಹ ಲಭ್ಯವಿದೆ. ನೀವು ರಿಯಲ್‌ಮಿಯ ಇ-ಸ್ಟೋರ್‌ನಿಂದ (realme.com) ಈ ಫೋನ್ ಖರೀದಿಸಬಹುದು. ಇದಲ್ಲದೆ, ಅಮೆಜಾನ್ (Amazon) ಮೂಲಕವೂ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಇಲ್ಲಿ ನೀವು ಫೋನ್ ಖರೀದಿ ಮೇಲೆ 2,000 ರೂ.ಗಳ ಕೂಪನ್ ರಿಯಾಯಿತಿಯನ್ನು ಪಡೆಯಬಹುದು. ಡಿಸ್ಕೌಂಟ್‌ನೊಂದಿಗೆ ಫೋನನ್ನು ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

Best Mobiles in India

English summary
realme NARZO 80 Pro 5G Nitro Orange color variant launched in India: Check Price, offers, Specifications and More details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+