Home
ಮೊಬೈಲ್

ಹೊಸ Realme Narzo 80 Pro ಲಾಂಚ್; 26GB RAM.. 6000mAh ಬ್ಯಾಟರಿ.. ಕಡಿಮೆ ಬೆಲೆ, ರಿಯಾಯಿತಿ ಎಷ್ಟು?

ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಇಂದು ಎರಡು ಹೊಸ ರಿಯಲ್‌ಮಿ 5G ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಹೌದು, ಬಹುನಿರೀಕ್ಷಿತ ರಿಯಲ್‌ಮಿ ನಾರ್ಜೊ 80x 5G (realme Narzo 80x 5G) ಮತ್ತು ರಿಯಲ್‌ಮಿ ನಾರ್ಜೊ 80 ಪ್ರೊ 5G (Realme Narzo 80 Pro 5G) ಮೊಬೈಲ್‌ಗಳು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಂಪನಿಯು ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 'ನಾರ್ಜೊ' ಸರಣಿಯನ್ನು ವಿಸ್ತರಿಸಿದೆ. ಈ ಪೈಕಿ ರಿಯಲ್‌ಮಿ ನಾರ್ಜೊ 80 ಪ್ರೊ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ.

ರಿಯಲ್‌ಮಿ ನಾರ್ಜೊ 80X ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ. ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನನ್ನು ಮಿಡ್ ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ನಾರ್ಜೊ 80 ಪ್ರೊ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 80W ಅಲ್ಟ್ರಾ ಚಾರ್ಜಿಂಗ್ ಮತ್ತು 12GB RAM + 256GB ಸ್ಟೋರೇಜ್ ಒಳಗೊಂಡಿದೆ.

ಹೊಸ Realme Narzo 80 Pro ಲಾಂಚ್; 26GB RAM, ಬಿಗ್ ಬ್ಯಾಟರಿ.. ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೊ 80 ಪ್ರೊ 5G ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ ಬೆಲೆ = 19,999 ರೂ.
8GB RAM + 256GB ಸ್ಟೋರೇಜ್ ಬೆಲೆ = 21,499 ರೂ.
12GB RAM + 256GB ಸ್ಟೋರೇಜ್ ಬೆಲೆ = 23,499 ರೂ.

ರಿಯಲ್‌ಮಿ ನಾರ್ಜೊ 80 ಪ್ರೊ 5G ಮೊಬೈಲ್ ಭಾರತದಲ್ಲಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ಮೂಲ ಮಾದರಿಯ ಬೆಲೆ 19,999 ರೂ. ಆಗಿದೆ. ನೀವು 2,000 ರೂ. ತ್ವರಿತ ಕೂಪನ್ ರಿಯಾಯಿತಿಯೊಂದಿಗೆ, ಇದನ್ನು ಕೇವಲ 17,999 ರೂ.ಗೆ ಖರೀದಿಸಬಹುದು. ಇನ್ನು 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 21,499 ರೂ. ಆಗಿದೆ. ಆಫರ್ ಬಳಿಕ ಇದು 19,499 ರೂ.ಗೆ ಲಭ್ಯವಿದೆ.

ಈ ಫೋನಿನ 12GB + 256GB ಸ್ಟೋರೇಜ್ ರೂಪಾಂತರವು 23,499 ರೂ. ಬೆಲೆ ಹೊಂದಿದೆ. ನೀವು 2,000 ರೂ.ಗಳ ಕೂಪನ್ ರಿಯಾಯಿತಿಯ ಬಳಿಕ, ಕೇವಲ 21,499 ರೂ.ಗೆ ಕೊಳ್ಳಬಹುದು. ಇಂದು (ಏಪ್ರಿಲ್ 9) ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ ಈ ಫೋನಿನ ಆರಂಭಿಕ ಮಾರಾಟವು ನಡೆಯಲಿದೆ. ಬಳಿಕ, ಸೀಮಿತ ಅವಧಿಯ ಮಾರಾಟವು ಏಪ್ರಿಲ್ 11 ರಂದು ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ. ನೀವು ರಿಯಲ್‌ಮಿ ಅಧಿಕೃತ ವೆಬ್‌ಸೈಟ್ (realme.com) ಮತ್ತು ಅಮೆಜಾನ್ (Amazon) ಮೂಲಕ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.

ಹೊಸ Realme Narzo 80 Pro ಲಾಂಚ್; 26GB RAM, ಬಿಗ್ ಬ್ಯಾಟರಿ.. ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೊ 80 ಪ್ರೊ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಾರ್ಜೊ 80 ಪ್ರೊ 5G ಸ್ಮಾರ್ಟ್‌ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಈ ಸ್ಕ್ರೀನ್ 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ರಿಯಲ್‌ಮಿ 5G ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಲಭ್ಯವಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಉತ್ತಮ ಕಾರ್ಯಕ್ಷಮತೆ ಮತ್ತು ವಿದ್ಯುತ್ ದಕ್ಷತೆಯನ್ನು ಒದಗಿಸುತ್ತದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ realme UI 6.0 ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 MC2 ಜಿಪಿಯು ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೊ 80 ಪ್ರೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.

Best Mobiles in India

English summary
Realme Narzo 80 Pro 5G with MediaTek Dimensity 7400 launched in India: price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+