ಭಾರತದಲ್ಲಿ Realme Narzo 80x ಖರೀದಿಗೆ ಲಭ್ಯ; 12,000ಕ್ಕಿಂತ ಕಡಿಮೆಗೆ ಸೇಲ್.. ಆಫರ್, ವಿಶೇಷತೆಗಳೇನು?
ರಿಯಲ್‌ಮಿ ಇತ್ತೀಚೆಗೆ ತನ್ನ ನಾರ್ಜೊ 80 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ರಿಯಲ್‌ಮಿ ನಾರ್ಜೊ 80x 5G (realme Narzo 80x 5G) ಮತ್ತು ರಿಯಲ್‌ಮಿ ನಾರ್ಜೊ 80 ಪ್ರೊ 5G (Realme Narzo 80 Pro 5G) ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಅಂದಹಾಗೆ, ಈ ಮೊಬೈಲ್‌ಗಳು ಭಾರತದಲ್ಲಿ ಮಾರಾಟವನ್ನು ಪ್ರಾರಂಭಿಸಿವೆ. ಈ ಪೈಕಿ ರಿಯಲ್‌ಮಿ ನಾರ್ಜೊ 80x ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು. ನೀವು 2,000 ರೂ.ಗಳ ರಿಯಾಯಿತಿಯೊಂದಿಗೆ ಅತ್ಯಾಕರ್ಷಕ ಬ್ಯಾಂಕ್ ಆಫರ್ ಸಹ ಪಡೆಯಬಹುದು.
ರಿಯಲ್‌ಮಿ ನಾರ್ಜೊ 80x 5G ಮೊಬೈಲ್ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದೆ. ಇದು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.72 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 6GB RAM + 128GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಆಫರ್ ಮತ್ತು ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

ರಿಯಲ್‌ಮಿ ನಾರ್ಜೊ 80x 5G ಬೆಲೆ
ರಿಯಲ್‌ಮಿ ನಾರ್ಜೊ 80x 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು 13,999 ರೂ.ಗೆ ಮಾರಾಟವಾಗುತ್ತಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ಬೆಲೆ 14,999 ರೂ. ಆಗಿದೆ. ಕಂಪನಿಯು 500 ರೂ. ಬ್ಯಾಂಕ್ ಆಫರ್ ಮತ್ತು 1,500 ರೂ. ಕೂಪನ್ ರಿಯಾಯಿತಿ ನೀಡುತ್ತಿದೆ. ನೀವು ಇದನ್ನು ಕೇವಲ 11,999 ರೂ.ಗೆ ಖರೀದಿಸಬಹುದು. 128GB ಸ್ಟೋರೇಜ್ ವೇರಿಯಂಟ್ ಆಫರ್‌ಗಳೊಂದಿಗೆ ಕೇವಲ 12,999 ರೂ.ಗೆ ಲಭ್ಯವಿದೆ. ಇದು ರಿಯಲ್‌ಮಿ ಅಧಿಕೃತ ವೆಬ್‌ಸೈಟ್ (realme.com) ಮತ್ತು ಅಮೆಜಾನ್ (Amazon) ಮೂಲಕ ಮಾರಾಟವಾಗುತ್ತಿದೆ.
ರಿಯಲ್‌ಮಿ ನಾರ್ಜೊ 80x 5G ವೈಶಿಷ್ಟ್ಯಗಳು
ರಿಯಲ್‌ಮಿ ನಾರ್ಜೊ 80x 5G ಮೊಬೈಲ್ 6.72 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 950 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ realme UI 6.0 ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 6GB RAM ಮತ್ತು 8GB RAM ಹೊಂದಿದೆ. ಹಾಗೆಯೇ 128GB ಸ್ಟೋರೇಜ್ ಮತ್ತು 128GB ಸ್ಟೋರೇಜ್ ಲಭ್ಯವಿದೆ.

ರಿಯಲ್‌ಮಿ ನಾರ್ಜೊ 80x 5G ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ ಎರಡನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸರ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಈ 5G ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ರಿಯಲ್‌ಮಿ ನಾರ್ಜೊ 80x 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP69 ರೇಟಿಂಗ್ ಹೊಂದಿದೆ. ಇದರೊಂದಿಗೆ, ಮಿಲಿಟರಿ ದರ್ಜೆಯ ಆಘಾತ ನಿರೋಧಕತೆ ಮತ್ತು 200% ಸೂಪರ್ ವಾಲ್ಯೂಮ್ ಮೋಡ್ ವೈಶಿಷ್ಟ್ಯ ಸಹ ಲಭ್ಯವಿದೆ.


Click it and Unblock the Notifications








