Realme Narzo 90 Series 5G ಟೀಸರ್ ಔಟ್: ಭಾರತದಲ್ಲಿ ಬಿಡುಗಡೆಗೆ ಸಜ್ಜು!
Realme ಈ ವರ್ಷದ ಆರಂಭದಲ್ಲಿ ತನ್ನ ಜನಪ್ರಿಯ Narzo ಸರಣಿಯಲ್ಲಿ Narzo 80 5G ಸರಣಿ ಫೋನ್‌ಗಳನ್ನು ಪರಿಚಯಿಸಿತ್ತು. ಈಗ, ಇದರ ಮುಂದಿನ ತಲೆಮಾರಿನ Realme Narzo 90 5G ಸರಣಿ ಫೋನ್‌ಗಳು ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗಿದೆ.! ದೇಶದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾದ ಅಮೆಜಾನ್ ಹಂಚಿಕೊಂಡಿರುವ ಹೊಸ ಟೀಸರ್, ಈ ಸರಣಿಯು ಶೀಘ್ರದಲ್ಲೇ ಲಾಂಚ್ ಆಗಲಿರುವುದನ್ನು ದೃಢಪಡಿಸಿದೆ. ಇದರಿಂದ Narzo ಸರಣಿಯ ಹೊಸ ಅಪ್‌ಗ್ರೇಡ್‌ಗಳ ಬಗ್ಗೆ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಮತ್ತೆ ಕುತೂಹಲ ಮೂಡಿದೆ.
ಅಮೆಜಾನ್‌ನಲ್ಲಿ ಮೈಕ್ರೋಸೈಟ್ ಲೈವ್: ಎರಡು ಹೊಸ ಮಾದರಿಗೆ ಅಧಿಕೃತ ಸೂಚನೆ
ಅಮೆಜಾನ್ ಈಗಾಗಲೇ Realme Narzo 90 5G ಸರಣಿಗೆ ಮೀಸಲಾದ ಮೈಕ್ರೋಸೈಟ್ ಅನ್ನು ಸಕ್ರಿಯಗೊಳಿಸಿದೆ. ಈ ಮೈಕ್ರೋಸೈಟ್ Realme Narzo 90 5G ಸರಣಿಯು Amazon Special ಆಗಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಇದರರ್ಥ, ಲಾಂಚ್ ಆದ ನಂತರ ಫೋನ್‌ಗಳು ಅಮೆಜಾನ್‌ನಲ್ಲಿ ಮಾತ್ರ ಲಭ್ಯವಾಗಲಿವೆ. ಟೀಸರ್‌ನಲ್ಲಿ ಕಾಣುವ ಕಾಮಿಕ್-ಸ್ಟೈಲ್ ಚಿತ್ರಗಳು, ಎರಡು ವಿಭಿನ್ನ ಫೋನ್‌ಗಳು ಇರುವುದನ್ನು ದೃಢಪಡಿಸುತ್ತವೆ, ಇದು Narzo ಸರಣಿಯಲ್ಲಿ ಹೊಸ ಆಯ್ಕೆಗಳನ್ನು ನೀಡಲಿದೆ.
ವೈಶಿಷ್ಟ್ಯಪೂರ್ಣ ಡಿಸೈನ್: Narzo 90 Pro 5G ಮತ್ತು Narzo 90x 5G ಇರಬಹುದೇ?
ಟೀಸರ್‌ನಲ್ಲಿ ಕಾಣುವ ಮೊದಲ ಫೋನ್‌ನ ಕ್ಯಾಮೆರಾ ವಿಭಾಗ iPhone 16 Pro Max ವಿನ್ಯಾಸವನ್ನು ಹೋಲುತ್ತದೆ. ಇದು ಹಿಂದಿನ Narzo 80 Pro 5G ಮಾದರಿಯ ಶೈಲಿಗೂ ಹೊಂದಿಕೊಳ್ಳುತ್ತದೆ. ಇದರಿಂದ, ಇದು Realme Narzo 90 Pro 5G ಆಗಿರುವ ಸಾಧ್ಯತೆ ಹೆಚ್ಚು. ಇನ್ನೊಂದು ಮಾದರಿಯಲ್ಲಿ ಚೌಕಾಕಾರದ ಕ್ಯಾಮೆರಾ ಮೋಡ್ಯೂಲ್ ಹಾಗೂ ಲಂಬವಾಗಿ ಅಳವಡಿಸಿದ ಲೆನ್ಸ್‌ಗಳಿವೆ. ಇದು Narzo 80x 5G ವಿನ್ಯಾಸದ ಮುಂದುವರಿಕೆ ಎನ್ನಬಹುದು, ಮತ್ತು ಈ ಫೋನ್ Realme Narzo 90x 5G ಆಗಿರಬಹುದು ಎಂಬ ನಿರೀಕ್ಷೆ ಹೆಚ್ಚುತ್ತಿದೆ.ಇವು ಎರಡೂ ಮಾದರಿಗಳು ಇತ್ತೀಚಿನ ರಿಯಲ್‌ಮಿ ವಿನ್ಯಾಸ ಭಾಷೆಯನ್ನು ಅನುಸರಿಸುತ್ತಿದ್ದು, ಫ್ಲಾಟ್ ಫ್ರೇಮ್, ಮೃದುವಾದ ತುದಿಗಳು ಮತ್ತು ಯುವ ಬಳಕೆದಾರರನ್ನು ಆಕರ್ಷಿಸುವ ಆಧುನಿಕ ಲುಕ್ ಅನ್ನು ಹೊಂದಿವೆ.

ಸ್ಪೆಕ್ಸ್ ಇನ್ನೂ ರಹಸ್ಯ, ಆದರೆ ಟೀಸರ್ ಸೂಚಿಸುವ ಅಪ್‌ಗ್ರೇಡ್‌ಗಳು ಗಮನಾರ್ಹ
ಅಮೆಜಾನ್ ಮೈಕ್ರೋಸೈಟ್‌ನಲ್ಲಿ ಕಾಣುವ ಕೀವರ್ಡ್‌ಗಳು ಈ ಸರಣಿಯಲ್ಲಿ ಯಾವ ರೀತಿಯ ಸುಧಾರಣೆಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಸೂಚಿಸುತ್ತವೆ. "Supercharged" ಮತ್ತು "Power Maxed" ಎಂಬ ಪದಗಳು ದೊಡ್ಡ ಬ್ಯಾಟರಿ, ಶಕ್ತಿಶಾಲಿ ಚಾರ್ಜಿಂಗ್ ಮತ್ತು ಉತ್ತಮ ಪ್ರೊಸೆಸರ್‌ಗಳ ಸೂಚಕವಾಗಿವೆ. "Snap Sharp" ಎಂಬ ಬ್ರಾಂಡಿಂಗ್ ಉತ್ತಮ ಕ್ಯಾಮೆರಾ ಸಾಮರ್ಥ್ಯದ ಸುಳಿವು ನೀಡುತ್ತದೆ. "Glow Maxed" ಎಂಬ ಪದವು ಹೆಚ್ಚು ಬ್ರೈಟ್‌ನೆಸ್ ಹೊಂದಿದ ಡಿಸ್ಪ್ಲೇ ಬಳಕೆಯ ಸೂಚನೆ ನೀಡಿದೆ. ಈ ಸೂಚನೆಗಳನ್ನು ಗಮನಿಸಿದಾಗ, ನಾರ್ಜೋ 90 ಸರಣಿ ಕಾರ್ಯಕ್ಷಮತೆ, ಬ್ಯಾಟರಿ ಮತ್ತು ಫೋಟೋಗ್ರಫಿ ವಿಭಾಗದಲ್ಲಿ ಮಹತ್ವದ ಸುಧಾರಣೆಗಳನ್ನು ತರಲಿದೆ ಎಂಬ ನಿರೀಕ್ಷೆ ಮೂಡುತ್ತದೆ.
ಡಿಸೆಂಬರ್ 9: ಹೆಚ್ಚಿನ ಮಾಹಿತಿ ಬಹಿರಂಗವಾಗುವ ದಿನ
ಟೀಸರ್ ಅಂತ್ಯದಲ್ಲಿ "Gear Up for December 9" ಎಂದು ಹೇಳಲಾಗಿದೆ. ಇದು ರಿಯಲ್‌ಮಿ ಡಿಸೆಂಬರ್ 9 ರಂದು Realme Narzo 90 5G ಸರಣಿಕುರಿತು ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಬೆಲೆ, ಸಂಪೂರ್ಣ ಸ್ಪೆಕ್ಸ್ ಮತ್ತು ಲಭ್ಯತೆ ಕುರಿತು ಸ್ಪಷ್ಟತೆ ಬರಲಿದೆ. ಗಮನಿಸುವುದಾದರೆ, ಕಳೆದ ಜೂನ್‌ನಲ್ಲಿ Narzo 80 ಸರಣಿಯ ಕೊನೆಯ ಸಾಧನವಾಗಿ Narzo 80 Lite 5G ಫೋನ್ ಬಿಡುಗಡೆಯಾಗಿತ್ತು. ಇದರ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮಾದರಿಗೆ ₹10,499 ರೂ. ಬೆಲೆ ನಿಗದಿಪಡಿಸಲಾಗಿತ್ತು. ಮತ್ತು ಇದರ 6GB RAM ಮತ್ತು 128GB ಸ್ಟೋರೇಜ್ ಮಾದರಿಯು ₹11,499 ರೂ. ಬೆಲೆಯನ್ನು ಹೊಂದಿತ್ತು. ಆದಾಗ್ಯೂ, ಬಿಡುಗಡೆ ಕೊಡುಗೆಯಾಗಿ ರಿಯಲ್‌ಮಿ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಿದ್ದರಿಂದ 4GB + 128GB ರೂಪಾಂತರವು ₹500 ರಿಯಾಯಿತಿಯೊಂದಿಗೆ ₹9,999 ರೂ.ಗೆ. ಅದೇ ರೀತಿ, 6GB + 128GB ರೂಪಾಂತರವು ₹700 ರಿಯಾಯಿತಿಯೊಂದಿಗೆ ₹10,799 ರೂ.ಗೆ ದೊರೆತಿದ್ದವು.


Click it and Unblock the Notifications








