ಭಾರತಕ್ಕೆ ಮುಂದಿನ ವಾರ Realme Narzo 90 5G ಸರಣಿ ಎಂಟ್ರಿ: ಬೆಲೆ ಮಾಹಿತಿ ಲೀಕ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Realme ಭಾರತದಲ್ಲಿ ತನ್ನ ಹೊಸ ತಲೆಮಾರಿನ Narzo 90 5G ಸ್ಮಾರ್ಟ್‌ಫೋನ್ ಸರಣಿಯನ್ನು ಮುಂದಿನ ವಾರ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸರಣಿಯಲ್ಲಿ Realme Narzo 90 5G ಮತ್ತು Realme Narzo 90x 5G ಎಂಬ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗುತ್ತಿದೆ. ಈ ಅಧಿಕೃತ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ, ಈ ಫೋನ್‌ಗಳ ನಿರೀಕ್ಷಿತ ಬೆಲೆ ಲೀಕ್ ಆಗಿದೆ. ಮತ್ತು ಈ ಸರಣಿಯ ಬ್ಯಾಟರಿ ಸಾಮರ್ಥ್ಯ ಮತ್ತು ಬಣ್ಣ ಆಯ್ಕೆಗಳು ಈಗಾಗಲೇ ಬಹಿರಂಗವಾಗಿದ್ದು, ದೇಶದ ಟೆಕ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ!
ಹೌದು, ಟೆಕ್ ಬ್ಲಾಗರ್ ಪ್ಯಾರಾಸ್ ಗುಗ್ಲಾನಿ (@passionategeekz), X ನಲ್ಲಿ, ಭಾರತದಲ್ಲಿ ಮುಂಬರುವ ಎರಡೂ Realme Narzo ಸರಣಿಯ ಫೋನ್‌ಗಳ ಬೆಲೆಗಳನ್ನು ಹಂಚಿಕೊಂಡಿದ್ದಾರೆ. ಇವರ ಪ್ರಕಾರ, ಭಾರತದಲ್ಲಿ Narzo 90x 5G ಸುಮಾರು ರೂ.14,999 ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅದೇ ವೇಳೆ, Realme Narzo 90 5G ಅನ್ನು ರೂ.17,999 ಆರಂಭಿಕ ದರದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಈ ದರಗಳು ಪ್ರಾರಂಭಿಕ ಬ್ಯಾಂಕ್ ಆಫರ್‌ಗಳು ಮತ್ತು ಲಾಂಚ್ ಡಿಸ್ಕೌಂಟ್‌ಗಳನ್ನು ಒಳಗೊಂಡಿರಬಹುದು.
Realme Narzo 90 5G ಮತ್ತು Narzo 90x 5G ಫೋನ್‌ಗಳ ಅಂತಿಮ ಬೆಲೆಗಳು ರಿಯಲ್‌ಮಿ ಅಧಿಕೃತವಾಗಿ ಘೋಷಿಸಿದ ಬಳಿಕವೇ ಸ್ಪಷ್ಟವಾಗಲಿವೆ. ಆದರೆ, ಈ ಹಿಂದಿನ ತಲೆಮಾರಿನ Narzo ಸರಣಿಯೊಂದಿಗೆ ಹೋಲಿಸಿದರೆ, Narzo 90x 5G ಸ್ವಲ್ಪ ಬೆಲೆ ಏರಿಕೆಯನ್ನು ಕಾಣಬಹುದು. Narzo 80x 5G ಅನ್ನು ಭಾರತದಲ್ಲಿ ರೂ. 13,999 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗಾದರೆ, ಅಂತಿಮ ಬೆಲೆಗಳು ರೂ. 14,999 ಇದ್ದರೆ ಆಶ್ಚರ್ಯವೇನಿಲ್ಲ. ಹಾಗೆಯೇ, Narzo 90 5G ಬೆಲೆಯು ಕಳೆದ ವರ್ಷಕ್ಕೆ ಸಮನಾಗಿರುವ ಸಾಧ್ಯತೆ ಕೂಡ ಇದೆ.

Realme Narzo 90 5G ಸರಣಿ: ಬಣ್ಣ ಆಯ್ಕೆಗಳು ಅಧಿಕೃತ!
Realme ತನ್ನ Amazon ಮೈಕ್ರೋಸೈಟ್ ಅನ್ನು ಅಪ್‌ಡೇಟ್ ಮಾಡಿದೆ, ಈ ಮೂಲಕ ಹೊಸ Narzo 90 ಸರಣಿಯ ಬಣ್ಣ ಆಯ್ಕೆಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಪಟ್ಟಿಯಲ್ಲಿ ಕಂಡುಬಂದಿರುವಂತೆ, Narzo 90 5G ಅನ್ನು Victory Gold ಮತ್ತು Carbon Black ಬಣ್ಣಗಳಲ್ಲಿ ನೀಡಲಾಗುತ್ತದೆ. Narzo 90x 5G ಮಾದರಿ Nitro Blue ಮತ್ತು Flash Blue ಶೇಡ್‌ಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಎರಡೂ ಫೋನ್‌ಗಳು Amazon ಮತ್ತು Realme India ಆನ್‌ಲೈನ್ ಸ್ಟೋರ್ ಮೂಲಕ ಮಾರಾಟವಾಗಲಿವೆ.
ವಿನ್ಯಾಸದ ದೃಷ್ಟಿಯಿಂದ, Narzo 90 5G ಕೇವಲ 7.79 ಮಿಮೀ ದಪ್ಪ ಹೊಂದಿದ್ದು, ಸುಮಾರು 181 ಗ್ರಾಂ ತೂಕ ಇರುತ್ತದೆ ಎಂದು ಟೀಸ್ ಮಾಡಲಾಗಿದೆ. ದೊಡ್ಡ ಬ್ಯಾಟರಿಯಿದ್ದರೂ ಸಹ, ಸ್ಲಿಮ್ ಮತ್ತು ಲೈಟ್ ಫೀಲನ್ನು ನೀಡುವ ಫೋನ್ ಆಗಿರಲಿದೆ ಎಂಬುದು ವಿಶೇಷ. Narzo 90 ಸರಣಿಯ ಪ್ರಮುಖ ಹೈಲೈಟ್ ಎಂದರೆ 7,000mAh Titan ಬ್ಯಾಟರಿ. ಎರಡೂ ಮಾದರಿಗಳು 60W ಫಾಸ್ಟ್ ಚಾರ್ಜಿಂಗ್ ಹೊಂದಿರುತ್ತವೆ. ವಿಶೇಷವಾಗಿ Narzo 90 5G ನಲ್ಲಿ ಬೈಪಾಸ್ ಚಾರ್ಜಿಂಗ್ ಮತ್ತು ವೈರ್ಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇರಲಿದೆ, ಇದು ಗೇಮಿಂಗ್ ಮತ್ತು ಹೆವಿ ಯೂಸೇಜ್ ಬಳಕೆದಾರರಿಗೆ ಉಪಯುಕ್ತವಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, Narzo 90 ಸರಣಿಯ ಫೋನ್‌ಗಳು 50MP ಪ್ರೈಮರಿ ರಿಯರ್ ಕ್ಯಾಮೆರಾ ಹೊಂದಿರುತ್ತವೆ. ಜೊತೆಗೆ, Narzo 90 5G ಗೆ IP66, IP68 ಮತ್ತು IP69 ರೇಟಿಂಗ್‌ಗಳು ದೊರಕಿರುವುದರಿಂದ, ಧೂಳು ಮತ್ತು ನೀರಿನಿಂದ ಹೆಚ್ಚಿನ ರಕ್ಷಣೆ ಸಿಗಲಿದೆ. ಕೊನೆಯದಾಗಿ, Realme Narzo 90 ಸರಣಿಯು ಇದೇ ಡಿಸೆಂಬರ್ 16 ರಂದು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ದೊಡ್ಡ ಬ್ಯಾಟರಿ, ವೇಗದ ಚಾರ್ಜಿಂಗ್, 5G ಕನೆಕ್ಟಿವಿಟಿ ಮತ್ತು ಆಕರ್ಷಕ ಬೆಲೆಯೊಂದಿಗೆ, ಈ ಫೋನ್‌ಗಳು ಮಿಡ್-ರೇಂಜ್ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಭಾರಿ ಸ್ಪರ್ಧೆ ನೀಡುವ ಸಾಧ್ಯತೆ ಇದೆ.


Click it and Unblock the Notifications








