Home
ಮೊಬೈಲ್

Realme Narzo 90 ಸರಣಿ ಬಿಡುಗಡೆ: 60W, 7,000mAh ಬ್ಯಾಟರಿ, ಬೆಲೆ ₹13,999 ರಿಂದ!

ಕಳೆದ ಕೆಲವು ದಿನಗಳಿಂದ ವದಂತಿಯ ಸುದ್ದಿಗಳಿಂದಲೇ ಹೆಚ್ಚು ನಿರೀಕ್ಷೆ ಮೂಡಿಸಿದ್ದ Realme Narzo 90 ಸರಣಿಯು ಇಂದು ಭಾರತದ ಮೊಬೈಲ್ ಮಾರುಕಟ್ಟೆಗೆ (16, ಡಿಸೆಂಬರ್) ಭರ್ಜರಿಯಾಗಿ ಎಂಟ್ರಿ ನೀಡಿದೆ. ಮಾರುಕಟ್ಟೆಯ ನಿರೀಕ್ಷೆಯಂತೆಯೇ, ಈ ಹೊಸ ಲೈನ್‌ಅಪ್‌ನಲ್ಲಿ Realme Narzo 90 5G ಮತ್ತು Realme Narzo 90x 5G ಎಂಬ ಎರಡು ಮಾದರಿಗಳು ಪರಿಚಯಗೊಂಡಿದ್ದು, ಇವುಗಳಲ್ಲಿ ದೊಡ್ಡ 7,000mAh ಬ್ಯಾಟರಿ, 60W ಫಾಸ್ಟ್ ಚಾರ್ಜಿಂಗ್, IP66+IP68+IP69 ರೇಟಿಂಗ್‌ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ತರಲಾಗಿದೆ. ಇನ್ನು ಈ ಸರಣಿಯ ಬೇಸ್ ಮಾದರಿ Realme Narzo 90x 5G ಫೋನ್ ಬೆಲೆ ಕೇವಲ 13,999 ರೂ.ಗಳಾಗಿವೆ. ಹಾಗಾದರೆ, ಹೊಸ Realme Narzo 90 ಸರಣಿ ಫೋನ್‌ಗಳು ಹೇಗಿವೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Realme Narzo 90 ಸರಣಿ: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme Narzo 90x 5G ಫೋನಿನ ಮೂಲ 6GB RAM + 128GB ಸ್ಟೋರೇಜ್ ಮಾದರಿಗೆ 13,999 ರೂ. ಮತ್ತು ಟಾಪ್-ಆಫ್-ಲೈನ್ 8GB RAM + 128GB ಸ್ಟೋರೇಜ್ ಮಾದರಿಗೆ 15,499 ರೂ. ನಿಗದಿಪಡಿಸಲಾಗಿದೆ. ಇತ್ತ ಸ್ವಲ್ಪ ಹೆಚ್ಚು ಶಕ್ತಿಶಾಲಿ Realme Narzo 90 5G ಬೆಲೆ ದೇಶದ ರೂ. 16,999 ರಿಂದ ಪ್ರಾರಂಭವಾಗುತ್ತದೆ, ಇದರ ಮೂಲ ರೂಪಾಂತರವು 6GB RAM + 128GB ಸ್ಟೋರೇಜ್ ಹೊಂದಿದ್ದರೆ, ಇದರ 8GB RAM + 128GB ಸ್ಟೋರೇಜ್ ಮಾದರಿಯ ಟಾಪ್-ಎಂಡ್ ಆಯ್ಕೆಯ ಬೆಲೆ 18,499 ರೂ. ಗಳಾಗಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇದೇ ಡಿಸೆಂಬರ್ 24 ರಿಂದ ಅಮೆಜಾನ್ ಹಾಗೂ ರಿಯಲ್‌ಮಿ ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿವೆ.

Realme Narzo 90 ಸರಣಿ: ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ ವಿಭಾಗದಲ್ಲಿ, Realme Narzo 90 ಫೀನ್ನ್ 6.57-ಇಂಚಿನ AMOLED ಪೂರ್ಣ-HD+ (1,080x2,372 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದ್ದು, 120Hz ವರೆಗೆ ರಿಫ್ರೆಶ್ ರೇಟ್, 240Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್, 1,400 nits ವರೆಗೆ ಗರಿಷ್ಠ ಹೊಳಪು ಮತ್ತು 397 ppi ಪಿಕ್ಸೆಲ್ ಸಾಂದ್ರ ಹೊಂದಿದೆ. ಪರದೆಯು 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್, 1.07 ಬಿಲಿಯನ್ ಬಣ್ಣಗಳು ಮತ್ತು 100 ಪ್ರತಿಶತ sRGB ಅನ್ನು ಬೆಂಬಲಿಸುತ್ತದೆ. ಇತ್ತ Realme Narzo 90x 5G ಸ್ವಲ್ಪ ದೊಡ್ಡದಾದ 6.80-ಇಂಚಿನ (720x1,570 ಪಿಕ್ಸೆಲ್‌ಗಳು) LCD ಸ್ಕ್ರೀನ್ ಅನ್ನು 144Hz ರಿಫ್ರೆಶ್ ದರ, 1,200 nits ವರೆಗೆ ಗರಿಷ್ಠ ಹೊಳಪು ಮತ್ತು 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಹೊಂದಿದೆ.

Realme Narzo 90 ಸರಣಿ ಬಿಡುಗಡೆ: 60W, 7,000mAh ಬ್ಯಾಟರಿ, ಬೆಲೆ ₹13,999 ರಿಂದ

ಕಾರ್ಯಕ್ಷಮತೆಗಾಗಿ, Realme Narzo 90 5G ಫೋನ್ ಆಕ್ಟಾ ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಮ್ಯಾಕ್ಸ್ ಚಿಪ್‌ಸೆಟ್ ಹೊಂದಿದೆ, ಜೊತೆಗೆ ಮಾಲಿ G57 MC2 GPU, 8GB ವರೆಗೆ LPDDR4x RAM ಮತ್ತು 128GB ವರೆಗೆ UFS 2.2 ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ. ಮತ್ತೊಂದೆಡೆ, Realme Narzo 90x 5G ಫೋನ್ ಆಕ್ಟಾ ಕೋರ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ನಿಂದ ಚಾಲಿತವಾಗಿದ್ದು, 2.4GHz ಗರಿಷ್ಠ ಕ್ಲಾಕ್ ಸ್ಪೀಡ್ ನೀಡುತ್ತದೆ ಮತ್ತು ಸ್ಟ್ಯಾಂಡರ್ಡ್ ಮಾದರಿಯಂತೆಯೇ ಅದೇ GPU, RAM ಮತ್ತು ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಈ ಎರಡೂ ಪೋನ್‌ಗಳು Android 15-ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತವೆ.

ಫೋಟೋಗ್ರಫಿ ವಿಭಾಗದಲ್ಲಿ, , Realme Narzo 90 5G ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದರಲ್ಲಿ 50-ಮೆಗಾಪಿಕ್ಸೆಲ್ (f/1.8) ಪ್ರಾಥಮಿಕ ಶೂಟರ್ ಮತ್ತು 2-ಮೆಗಾಪಿಕ್ಸೆಲ್ (f/2.4) ಏಕವರ್ಣದ ಸಂವೇದಕವಿದೆ. ಆದಾಗ್ಯೂ, Narzo 90x 5G 50-ಮೆಗಾಪಿಕ್ಸೆಲ್ ಸೋನಿ IMX852 ಮುಖ್ಯ ಹಿಂಭಾಗದ ಕ್ಯಾಮೆರಾವನ್ನು ಪಡೆಯುತ್ತದೆ.Narzo 90 5G ಮಾದರಿಯು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದರೆ, Narzo 90x 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಎರಡೂ ಹ್ಯಾಂಡ್‌ಸೆಟ್‌ಗಳು ಬಳಕೆದಾರರಿಗೆ 30fps ನಲ್ಲಿ 1080p ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ.

ಬ್ಯಾಟರಿ ವಿಭಾಗದಲ್ಲಿ, ಈ ಸರಣಿಯ ಎರಡೂ ಫೋನ್‌ಗಳು 60W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಟೈಟಾನ್ ಬ್ಯಾಟರಿಗಳನ್ನು ಹೊಂದಿದೆ.. ಸ್ಟ್ಯಾಂಡರ್ಡ್ ಮಾದರಿಯು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP66 + IP68 + IP69 ರೇಟಿಂಗ್‌ ಹೊಂದಿದೆ ಮತ್ತು Narzo 90x 5G IP65 ಧೂಳು ಮತ್ತು ನೀರಿನ ರೇಟಿಂಗ್‌ ಹೊಂದಿದೆ.ಸಂಪರ್ಕಕ್ಕಾಗಿ ಎರಡೂ ಸಾಧನಗಳು ಬ್ಲೂಟೂತ್ 5.3, ಡ್ಯುಯಲ್-ಬ್ಯಾಂಡ್ ವೈ-ಫೈ, ಬೀಡೌ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಕ್ಯೂಝಡ್‌ಎಸ್‌ಎಸ್ ಅನ್ನು ಬೆಂಬಲಿಸುತ್ತವೆ. 90x 5G 166.07x77.93x8.28mm ಅಳತೆ, ಸುಮಾರು 212g ತೂಗುತ್ತದೆ. ಮತ್ತೊಂದೆಡೆ, 90 5G 158.36x75.19x7.79mm ಅಳತೆ ಮತ್ತು 183g ತೂಗುತ್ತದೆ. ಒಟ್ಟಾರೆಯಾಗಿ, ಕಡಿಮೆ ಬೆಲೆಯಲ್ಲಿ ದೊಡ್ಡ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು 5G ಫೀಚರ್‌ಗಳನ್ನು ಹುಡುಕುತ್ತಿರುವ ಭಾರತೀಯ ಗ್ರಾಹಕರಿಗೆ ಈ ಫೋನ್‌ಗಳು ಗಮನಾರ್ಹ ಆಯ್ಕೆಯಾಗಿವೆ.

Best Mobiles in India

English summary
The Realme Narzo 90 series has officially launched in India with two models — Narzo 90 5G and Narzo 90x 5G — offering a massive 7,000mAh battery, 60W fast charging, and IP66/IP68/IP69 durability, starting at an affordable price of ₹13,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+