Home
ಮೊಬೈಲ್

ಇಂದು ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರ್ತಿದೆ Realme Narzo N61 ಫೋನ್‌: ಬೆಲೆಯು ಕಡಿಮೆ!

Realme Narzo N61 India Launch: ಕಾಯುವಿಕೆ ಮುಗಿಯಿತು..! ಇಂದು ಹೊಸ ರಿಯಲ್‌ಮಿ ಫೋನ್ ಭಾರತಕ್ಕೆ ಎಂಟ್ರಿ ಕೊಡಲಿದೆ. ಹೌದು, ಪ್ರಸಿದ್ಧ ಮೊಬೈಲ್ ತಯಾರಕ ಸಂಸ್ಥೆ ರಿಯಲ್‌ಮಿ, ಬಜೆಟ್‌ ಬೆಲೆಯ ಫೋನ್‌ಗಳ ಮೂಲಕ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚೆಗೆ, ಕಂಪನಿಯು Realme 13 Pro 5G ಸರಣಿಯ ಭಾರತದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಫೋನ್‌ಗಳು ಭಾರತದಲ್ಲಿ ಜುಲೈ 30 ರಂದು (ನಾಳೆ) ಬಿಡುಗಡೆಯಾಗಲಿದೆ. ಆದರೆ, ಇದಕ್ಕೂ ಮೊದಲೇ ರಿಯಲ್‌ಮಿ ನಾರ್ಜೊ N61 (Realme Narzo N61) ಫೋನ್ ಒಂದು ದಿನ ಮುಂಚಿತವಾಗಿಯೇ ಬಿಡುಗಡೆಯಾಗಲಿದೆ. ಇದು ಕಂಪನಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ.

ಹೌದು, ರಿಯಲ್‌ಮಿ ಕಂಪನಿಯು ನೂತನ ರಿಯಲ್‌ಮಿ ನಾರ್ಜೊ N61 ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು (ಜುಲೈ 29) ಭಾರತದಲ್ಲಿ ತನ್ನ Narzo ಸರಣಿಯ ರಿಯಲ್‌ಮಿ ನಾರ್ಜೊ N61 ಫೋನನ್ನು ಅಧಿಕೃತವಾಗಿ ಲಾಂಚ್ ಆಗಲಿದೆ. ಈಗಾಗಲೇ ಈ ಫೋನ್‌ನ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. ಇದು ArmorShell ಡಿಸೈನ್, IP54 ರೇಟಿಂಗ್, 32MP ಕ್ಯಾಮೆರಾ ಹೊಂದಿದೆ. ಮುಖ್ಯವಾಗಿ ಕೇವಲ 8000 ರೂ. ಬೆಲೆಯಲ್ಲಿ ಈ Realmeನ ಹೊಸ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಇಂದು ಅಬ್ಬರಿಸಲು ಬರ್ತಿದೆ Realme Narzo N61 ಫೋನ್‌: ಬೆಲೆಯು ಕಡಿಮೆ!

ರಿಯಲ್‌ಮಿ ನಾರ್ಜೊ N61 ಬಿಡುಗಡೆ ಸಮಯ

ರಿಯಲ್‌ಮಿ ನಾರ್ಜೊ N61 ಫೋನ್‌ ಭಾರತದಲ್ಲಿ ಇಂದು (ಜುಲೈ 29) ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಕಂಪನಿಯು ರಿಯಲ್‌ಮಿಯ ಅಧಿಕೃತ ಸೈಟ್ ಮತ್ತು ಅಮೆಜಾನ್‌ನಲ್ಲಿ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಮಾಡಿದೆ. ಫೋನ್‌ನ ಅಧಿಕೃತ ವಿನ್ಯಾಸ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಈ ಸೈಟ್ ಮೂಲಕ ಬಹಿರಂಗಪಡಿಸಲಾಗಿದೆ. ಇದು ಫ್ಲಾಟ್ ಎಡ್ಜ್‌ಗಳು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ.

ಭಾರತದಲ್ಲಿ ಈ ಹೊಸ ಫೋನಿನ ಬೆಲೆ ಎಷ್ಟು?

ಇದು ಕಂಪನಿಯ ಪ್ರವೇಶ (ಅಗ್ಗದ) ಮಟ್ಟದ ಸ್ಮಾರ್ಟ್‌ಫೋನ್ ಆಗಿರುತ್ತದೆ. Realme Narzo N61 ಅನ್ನು ಕಂಪನಿಯು 10,000 ರೂ.ಗಳ ಒಳಗಿನ ಬಜೆಟ್‌ ಅಡಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದನ್ನು 8,499 ರೂ. ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಈ ಹೊಸ ಫೋನಿನಲ್ಲಿ ಹೊಸದೇನಿದೆ?

ಮೈಕ್ರೋಸೈಟ್ ಪ್ರಕಾರ, ಈ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ. ಫೋನ್ TUV ರೈನ್‌ಲ್ಯಾಂಡ್ ಹೈ-ವಿಶ್ವಾಸಾರ್ಹತೆ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿಯು ತಿಳಿಸಿದೆ. ಇದು ಸಾಕಷ್ಟು ಗಟ್ಟಿಮುಟ್ಟಾಗಿರುತ್ತದೆ. ಇದಲ್ಲದೆ, ಈ ಫೋನ್ ಆರ್ಮೋರ್ಶೆಲ್ (ArmorShell) ರಕ್ಷಣೆಯೊಂದಿಗೆ ಬರುತ್ತದೆ. Realme Narzo N61 ನಾಲ್ಕು ವರ್ಷಗಳವರೆಗೆ ನವೀಕರಣಗಳನ್ನು ಪಡೆಯುತ್ತದೆ. ಜೊತೆಗೆ, ಧೂಳು ಮತ್ತು ನೀರು ನಿರೋಧಕ IP54 ರೇಟಿಂಗ್‌ನೊಂದಿಗೆ ಬರಲಿದೆ. ಇದು ರೈನ್ ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ.

ಇಂದು ಅಬ್ಬರಿಸಲು ಬರ್ತಿದೆ Realme Narzo N61 ಫೋನ್‌: ಬೆಲೆಯು ಕಡಿಮೆ!

Realme N61 ಫೋನಿನ ಫೀಚರ್ಸ್‌

ಡಿಸ್ಪ್ಲೇ: ರಿಯಲ್‌ಮಿ N61 ಫೋನ್ 6.74 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿರಲಿದೆ. ಇದು 1600×720 ಪಿಕ್ಸೆಲ್ ರೆಸಲ್ಯೂಶನ್, ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು 90Hz ರಿಫ್ರೆಶ್ ದರವನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಪ್ರೊಸೆಸರ್: ಇದು UNISOC T612 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 6GB RAM + 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಕ್ಯಾಮೆರಾ ಸೆಟಪ್: ರಿಯಲ್‌ಮಿ ಹಂಚಿಕೊಂಡಿರುವ ಟೀಸರ್ ಪೋಸ್ಟರ್‌ನಲ್ಲಿ, Realme NARZO N61 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ ಎಂದು ವರದಿಯಾಗಿದೆ. ಇದು 32MP ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಲೆನ್ಸ್ ಲಭ್ಯವಿರುವ ನಿರೀಕ್ಷೆಯಿದೆ.

ಬ್ಯಾಟರಿ ಬ್ಯಾಕಪ್: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ. ಇದು IP54 ರೇಟಿಂಗ್ ಪಡೆದಿದೆ. ಆರ್ಮರ್‌ಶೆಲ್ ಪ್ರೊಟೆಕ್ಷನ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಲಿದೆ.

Best Mobiles in India

English summary
Realme Nazo N61 with Armor Shell Protection Launching on 29th July. will feature IP54 rating and ArmorShell Protection: Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+