Home
ಮೊಬೈಲ್

4 ದಿನ ಮಾತ್ರ! Realmeಯ ಈ ಫೋನ್ ಜಸ್ಟ್‌ 7,999 ರೂ.; ಆಫರ್ ಮಿಸ್ ಮಾಡಿಕೊಳ್ಳಬೇಡಿ

ರಿಯಲ್‌ಮಿ ಕಂಪನಿ ಇತ್ತೀಚೆಗೆ ತನ್ನ Realme Narzo ಸರಣಿಯಲ್ಲಿ ಮತ್ತೊಂದು ಹೊಸ Realme Narzo N63 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಕೈಗೆಟುಕುವ ಬೆಲೆ, ಡಿಸೈನ್‌ ಹಾಗೂ ಅದ್ಭುತ ಫೀಚರ್ಸ್‌ಗಳಿಂದ ಗಮನ ಸೆಳೆದಿತ್ತು. ಇದು UniSoC T612 ಪ್ರೊಸೆಸರ್, 90Hz ಡಿಸ್ಪ್ಲೇಯೊಂದಿಗೆ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾದಂತಹ ಫೀಚರ್‌ಗಳನ್ನು ಹೊಂದಿದೆ. ಇದೀಗ ಈ ಮೊಬೈಲ್‌ ತನ್ನ ಮೊದಲ ಮಾರಾಟವನ್ನು ನಿಲ್ಲಿಸುತ್ತಿದೆ. ಇದೇ ಜೂನ್ 14ರಂದು ಈ ಸ್ಮಾರ್ಟ್‌ಫೋನ್‌ನ ಮಾರಾಟ ಹಾಗೂ ಡಿಸ್ಕೌಂಟ್‌ ಆಫರ್ ಕೊನೆಗೊಳ್ಳಲಿ. ನೀವು ರಿಯಲ್‌ಮಿ ಪ್ರಿಯರಾಗಿದ್ದರೆ, 4 ದಿನಗಳೊಳಗೆ ಈ ಮೊಬೈಲ್ ಖರೀದಿಸಬಹುದಾಗಿದೆ.

ಹೌದು, ಚೀನಾ ಮೂಲದ ರಿಯಲ್‌ಮಿ ಕಂಪನಿ Realme Narzo N63 ಅನ್ನು 8,499 ರೂ. ಮತ್ತು 8,999 ರೂ.ಗಳೊಂದಿಗೆ ಲಾಂಚ್ ಮಾಡಿತ್ತು. ಬಳಿಕ ಡಿಸ್ಕೌಂಟ್‌ ನೀಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಬಜೆಟ್ ಫ್ರೆಂಡ್ಲಿ Realme Narzo N63 ಫೋನ್‌ ಅನ್ನು ಅನೇಕರು ಖರೀದಿಸಿದ್ದಾರೆ. ಈ ಮಧ್ಯೆಯೇ ರಿಯಲ್‌ಮಿ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಪ್ರಕಟಿಸಿದೆ. ಕೇವಲ 4 ದಿನ ಮಾತ್ರ ಈ ಫೋನ್ ಖರೀದಿಗೆ ಲಭ್ಯವಿರಲಿದೆ.

4 ದಿನ ಮಾತ್ರ! Realmeಯ ಈ ಫೋನ್ ಜಸ್ಟ್‌ 7,999 ರೂ.; ಆಫರ್ ಮಿಸ್ ಮಾಡಿಕೊಳ್ಳಬೇಡಿ

ಮುಖ್ಯಾಂಶಗಳು

1. Realme Narzo N63 ಸ್ಮಾರ್ಟ್‌ಫೋನ್‌ ಮಾರಾಟ ಹಾಗೂ ಡಿಸ್ಕೌಂಟ್‌ ಜೂನ್ 14ರಂದು ಅಂತ್ಯ.

2. ಇದು Realme Narzo ಸರಣಿಯಲ್ಲಿ ಬಿಡುಗಡೆಯಾಗಿರುವ ಮತ್ತೊಂದು ಹೊಸ ಸ್ಮಾರ್ಟ್‌ಫೋನ್.

3. ಈ ಸ್ಮಾರ್ಟ್‌ಫೋನ್ 90Hz ಡಿಸ್ಪ್ಲೇಯೊಂದಿಗೆ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾದಂತಹ ಫೀಚರ್ಗಳನ್ನು ಹೊಂದಿದೆ.

4. Realme Narzo N63 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 8,499 ರೂ. ಆಗಿದೆ.

ರಿಯಲ್‌ಮಿ NARZO N63 ಫೀಚರ್‌ಗಳು

Realme Naz N63 ಮೊಬೈಲ್‌ UniSoC T612 ಪ್ರೊಸೆಸರ್ ಹೊಂದಿದೆ. IP54 ರೇಟಿಂಗ್‌ ಮತ್ತು ಗ್ರಾಫಿಕ್ಸ್‌ಗಾಗಿ ಹೆಡ್‌ಸೆಟ್ Mali G57 GPU ಅನ್ನು ಹೊಂದಿದೆ. ಏರ್ ಗೆಸ್ಚರ್ಸ್, ಮಿನಿ ಕ್ಯಾಪ್ಸುಲ್ 2.0 ಡೈನಾಮಿಕ್ ಬಟನ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಮೊಬೈಲ್ 6.74 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್ ದರ 90Hz ಮತ್ತು ಗರಿಷ್ಠ ಬ್ರೈಟ್‌ನೆಸ್ 560 nits ಆಗಿದೆ. ರೈನ್‌ವಾಟರ್ ಸ್ಮಾರ್ಟ್ ಟಚ್ ಮತ್ತು ವಾಟರ್‌ಡ್ರಾಪ್ ನಾಚ್ ಫೋನ್‌ನ ಡಿಸ್ಪ್ಲೇಯಲ್ಲಿ ಲಭ್ಯವಿದೆ.

ರಿಯಲ್‌ಮಿ NARZO N63 ಕ್ಯಾಮೆರಾ ಸೆಟಪ್

ಈ ಸ್ಮಾರ್ಟ್‌ಫೋನ್ 4GB RAM ನೊಂದಿಗೆ ಬರುತ್ತದೆ. ಫೋನ್‌ನಲ್ಲಿರುವ ಹೆಚ್ಚುವರಿಯಾಗಿ 4GB ವರೆಗೆ RAM ಅನ್ನು ವಿಸ್ತರಿಸಬಹುದು. ಈ ಫೋನ್ 64GB ಮತ್ತು 128GB ಇಂಟರ್‌ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಶೂಟರ್ ಮತ್ತು ವಿಡಿಯೋ ಕರೆಗಾಗಿ ಹ್ಯಾಂಡ್‌ಸೆಟ್ 8MP ಮೆಗಾಪಿಕ್ಸೆಲ್ ಮುಂಭಾಗದ ಸೆನ್ಸರ್ ಅನ್ನು ಹೊಂದಿದೆ. Realme NARZO N63 ಫೋನ್ 45W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿ ಬ್ಯಾಕಪ್ ಹೊಂದಿದೆ.

Realme NARZO N63 ಬೆಲೆ ಮತ್ತು ಆಫರ್‌ಗಳು

Realme NAZ N63 ಮೊಬೈಲ್‌ ಬೆಲೆ ಬಗ್ಗೆ ಹೇಳುವುದಾದರೆ, 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 7,999 ರೂ.ಇದೆ. 4GB RAM ಮತ್ತು 128GB ಸ್ಟೋರೇಜ್ ರೂಪಾಂತದ ದರ 8,499 ರೂ. ಇದೆ. ಈ ಮೊಬೈಲ್ ಖರೀದಿ ಮೇಲೆ ಕೊಡುಗೆಯ ಭಾಗವಾಗಿ ಕಂಪನಿಯು, 500 ರೂ. ಡಿಸ್ಕೌಂಟ್‌, ಕೂಪನ್ ಮೂಲಕ Naaz N63 ಖರೀದಿಯ ಮೇಲೆ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಸಹ ನೀಡಲಾಗುತ್ತದೆ.

ಇನ್ನೂ, ರಿಯಲ್‌ಮಿ ಕಂಪನಿಯು ಫೋನ್ ಖರೀದಿಸುವ ಗ್ರಾಹಕರಿಗೆ 899 ರೂಪಾಯಿ ಮೌಲ್ಯದ Realmne Buds Wireless 2 Neo ಹೆಡ್‌ಸೆಟ್ ಅನ್ನು ಉಚಿತವಾಗಿ ನೀಡುತ್ತಿದೆ. ಈ ಫೋನ್‌ನ ಮಾರಾಟವು ಅಮೆಜಾನ್ ಇಂಡಿಯಾ ಮತ್ತು Realme ಇ-ಸ್ಟೋರ್‌ನಲ್ಲಿ ಲಭ್ಯವಿದೆ. ಈ ಮೊಬೈಲ್‌ನ ಫಸ್ಟ್‌ ಸೇಲ್‌ ಅನ್ನು ಜೂನ್ 14ರಂದು ಕೊನೆಗೊಳ್ಳಲಿದೆ. ಈ ಸ್ಮಾರ್ಟ್‌ಫೋನ್‌ ನಿಮಗೆ ಇಷ್ಟವಾದಲ್ಲಿ 4 ದಿನಗಳೊಳಗೆ ಖರೀದಿಸಬಹುದಾಗಿದೆ.

4 ದಿನ ಮಾತ್ರ! Realmeಯ ಈ ಫೋನ್ ಜಸ್ಟ್‌ 7,999 ರೂ.; ಆಫರ್ ಮಿಸ್ ಮಾಡಿಕೊಳ್ಳಬೇಡಿ

Realme NARZO N63 ಇತರೆ ಫೀಚರ್ಸ್‌ಗಳು

  • ಮೊಬೈಲ್‌ನ ತೂಕ: 189 ಗ್ರಾಂ
  • ಸ್ಮಾರ್ಟ್‌ಫೋನ್ ದಪ್ಪ: 7.74 ಮಿಮೀ
  • ಡಿಸ್‌ಪ್ಲೇ: 6.74-ಇಂಚಿನ LCD ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, 560nits ಗರಿಷ್ಠ ಬ್ರೈಟ್‌ನೆಸ್, ಮಳೆನೀರು ಸ್ಮಾರ್ಟ್ ಟಚ್, ವಾಟರ್‌ಡ್ರಾಪ್ ನಾಚ್
  • ಪ್ರೊಸೆಸರ್: UniSoC T612 ಪ್ರೊಸೆಸರ್, ಮಾಲಿ G57 GPU
  • ಮೆಮೊರಿ: 4GB RAM, 4GB ಡೈನಾಮಿಕ್ RAM
  • ಸ್ಟೋರೇಜ್: 64GB/ 128GB ಆಂತರಿಕ ಸಂಗ್ರಹಣೆ
  • ಕ್ಯಾಮೆರಾ: 50MP ಪ್ರಾಥಮಿಕ ಕ್ಯಾಮೆರಾ ಮತ್ತು LED ಫ್ಲ್ಯಾಷ್
  • ಫ್ರಂಟ್ ಕ್ಯಾಮೆರಾ: 8MP ಶೂಟರ್
  • ಬ್ಯಾಟರಿ: 5,000mAh, ವೀಡಿಯೊ ಪ್ಲೇಬ್ಯಾಕ್ 17.4 ಗಂಟೆಗಳ
  • ಚಾರ್ಜಿಂಗ್: 45W SuperVOOC ಚಾರ್ಜಿಂಗ್
  • ಸೆಕ್ಯುರಿಟಿ: ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್
  • ಆಡಿಯೋ: ಅಲ್ಟ್ರಾಬೂಮ್ ಸ್ಪೀಕರ್
Best Mobiles in India

English summary
Realme NARZO N63 First Sale Ends 14th June. The Realme NARZO N63 is a budget segment smartphone and appears to be a rebranded Realme C63.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+