Home
ಮೊಬೈಲ್

ಅಗ್ಗದ ಬೆಲೆಯಲ್ಲಿ Realme Narzo N63 ಬಿಡುಗಡೆ: ಬೆಲೆ ಜಸ್ಟ್‌ 8,499 ರೂ.! ಏನೆಲ್ಲಾ ಫೀಚರ್‌ಗಳಿವೆ ಗೊತ್ತಾ?

ಪ್ರತಿದಿನವೂ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಸಾಲಿನಲ್ಲಿ ಚೀನಾ ಕಂಪನಿಯ ಫೋನ್‌ಗಳ ಸಂಖ್ಯೆ ಹೆಚ್ಚು. ಇದೀಗ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ರಿಯಲ್‌ಮಿಯ ಮತ್ತೊಂದು ಮೊಬೈಲ್ ಗ್ರ್ಯಾಂಡ್ ಎಂಟ್ರಿ ನೀಡಿದೆ. Realme Narzo N63 ಸ್ಮಾರ್ಟ್‌ಫೋನ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದು ಚೀನಾ ಕಂಪನಿಯ ಮೊದಲ ಎನ್‌ ಸೀರಿಸ್ ಫೋನ್ ಆಗಿದ್ದು, Leather Blue ಮತ್ತು Twilight Purple ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಏನೆಲ್ಲಾ ವಿಶೇಷತೆಗಳಿವೆ? ಎಂಬ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ.

Realme Narzo N63 ಅಗ್ಗದ ಸ್ಮಾರ್ಟ್‌ಫೋನ್‌ ಕೆಟಗರಿಯಲ್ಲಿ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ 7,999 ರೂ. ಆಗಿದೆ. ಅಲ್ಲದೇ, ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಕೂಪನ್‌ ಬಳಸಿ ಪಡೆದಿದ್ದೇ ಆದಲ್ಲಿ 500 ರೂಪಾಯಿ ಡಿಸ್ಕೌಂಟ್‌ ಪಡೆಯಬಹುದು. ಈ Realme Narzo N63 ಫೋನ್‌ ಇ-ಕಾಮರ್ಸ್ ವೆಬ್‌ಸೈಟ್ Amazon ಮತ್ತು Realmeನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಮೊಬೈಲ್‌ನ ಮೊದಲ ಮಾರಾಟವು ಇದೇ ಜೂನ್ 10 ರಿಂದ ಆರಂಭವಾಗಲಿದೆ.

Realme Narzo N63 ಫೋನ್ ಬಿಡುಗಡೆ: ಬೆಲೆ ಜಸ್ಟ್‌ 8,499 ರೂ.!

ಮುಖ್ಯಾಂಶಗಳು

  • Realme ಮತ್ತೊಂದು NARZO ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ
  • Realme NARZO N63 ಜೂನ್ 10 ರಿಂದ ಖರೀದಿಗೆ ಲಭ್ಯವಿರುತ್ತದೆ.
  • ಈ ಮೊಬೈಲ್‌ 90Hz ಡಿಸ್ಪ್ಲೇ, 50MP ಕ್ಯಾಮೆರಾ, IP54 ರೇಟಿಂಗ್ ಹೊಂದಿದೆ.
  • ಭಾರತದಲ್ಲಿ Realme NARZO N63 ಬೆಲೆ 8,499 ರೂಪಾಯಿ.

Realme NARZO N63 ಫೀಚರ್ಸ್‌ಗಳೇನು?

Realme NARZO N63 ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ IP54 ರೇಟಿಂಗ್ ಅನ್ನು ಹೊಂದಿದೆ. ಇದು ಧೂಳು ಮತ್ತು ನೀರು-ನಿರೋಧಕವಾಗಿದೆ. ಸ್ಮಾರ್ಟ್‌ಫೋನ್ 48 ತಿಂಗಳ ನಿರರ್ಗಳತೆ ಮತ್ತು TUV ರೈನ್ಲ್ಯಾಂಡ್ ಸುರಕ್ಷಿತ ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಏರ್ ಗೆಸ್ಚರ್‌ಗಳು, ಮಿನಿ ಕ್ಯಾಪ್ಸುಲ್ 2.0, ಡೈನಾಮಿಕ್ ಬಟನ್ ಒಳಗೊಂಡಿದೆ ಮತ್ತು ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸಂಪೂರ್ಣ ಫೀಚರ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿ.

  • ಮೊಬೈಲ್‌ನ ತೂಕ: 189 ಗ್ರಾಂ
  • ಮೊಬೈಲ್‌ನ ದಪ್ಪ: 7.74 ಮಿಮೀ
  • ಡಿಸ್‌ಪ್ಲೇ: 6.74-ಇಂಚಿನ LCD ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್, 560nits ಗರಿಷ್ಠ ಹೊಳಪು, ಮಳೆನೀರು ಸ್ಮಾರ್ಟ್ ಟಚ್, ವಾಟರ್‌ಡ್ರಾಪ್ ನಾಚ್
  • ಪ್ರೊಸೆಸರ್: UniSoC T612 ಪ್ರೊಸೆಸರ್, ಮಾಲಿ G57 GPU
  • ಮೆಮೊರಿ: 4GB RAM, 4GB ಡೈನಾಮಿಕ್ RAM
  • ಸ್ಟೋರೇಜ್: 64GB/ 128GB ಆಂತರಿಕ ಸಂಗ್ರಹಣೆ
  • ಕ್ಯಾಮೆರಾ: 50MP ಪ್ರಾಥಮಿಕ ಕ್ಯಾಮೆರಾ ಮತ್ತು LED ಫ್ಲ್ಯಾಷ್
  • ಫ್ರಂಟ್ ಕ್ಯಾಮೆರಾ: 8MP ಶೂಟರ್
  • ಬ್ಯಾಟರಿ: 5,000mAh, ವೀಡಿಯೊ ಪ್ಲೇಬ್ಯಾಕ್ 17.4 ಗಂಟೆಗಳ
  • ಚಾರ್ಜಿಂಗ್: 45W SuperVOOC ಚಾರ್ಜಿಂಗ್
  • ಸೆಕ್ಯುರಿಟಿ : ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್
  • ಆಡಿಯೋ: ಅಲ್ಟ್ರಾಬೂಮ್ ಸ್ಪೀಕರ್

ಇತರೆ ಫೀಚರ್ಸ್: IP54 ಧೂಳು ಮತ್ತು ನೀರು ನಿರೋಧಕ, TUV ರೈನ್‌ಲ್ಯಾಂಡ್ ಸುರಕ್ಷಿತ ವೇಗದ ಚಾರ್ಜಿಂಗ್ ಸಿಸ್ಟಮ್ ಪ್ರಮಾಣೀಕರಣ, 48-ತಿಂಗಳ ಫ್ಲೂಯೆನ್ಸಿ ಪ್ರಮಾಣೀಕರಣ, ಏರ್ ಗೆಸ್ಚರ್‌ಗಳು, ಮಿನಿ ಕ್ಯಾಪ್ಸುಲ್ 2.0, ಡೈನಾಮಿಕ್ ಬಟನ್, ಗೇಮ್ ಸ್ಪೇಸ್.

Realme NARZO N63 ಬೆಲೆ ಎಷ್ಟು?

ಭಾರತದಲ್ಲಿ Realme NARZO N63 ಸ್ಮಾರ್ಟ್‌ಫೋನ್ ಬೆಲೆ 8,499 ರೂ.ನಿಂದ ಆರಂಭವಾಗಲಿದೆ. 4GB + 64GB ಇಂರ್ಟನಲ್ ಸ್ಟೋರೇಜ್ ಇರುವ ಫೋನ್‌ನ ಬೆಲೆ 8,499 ರೂಪಾಯಿ. ಇನ್ನು, 4GB + 128GB ಸ್ಟೋರೇಜ್ ಇಂರ್ಟನಲ್ ಸ್ಟೋರೇಜ್ ಇರುವ ಫೋನ್‌ನ ಬೆಲೆ 8,999 ರೂ. ಗಳಿಗೆ ಲಭ್ಯವಾಗಲಿದೆ. ಈ ಮೊಬೈಲ್ ಜೂನ್ 10 ರಿಂದ ಪ್ರತ್ಯೇಕವಾಗಿ Amazon ಮತ್ತು Realme eStore ಮೂಲಕ ಮಾರಾಟವಾಗಲಿದೆ.

Best Mobiles in India

English summary
Realme has launched yet another NARZO series smartphone. the Realme NARZO N63 in the Indian market. The Realme NARZO N63 is a budget segment smartphone and appears to be a rebranded Realme C63.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+