Home
ಮೊಬೈಲ್

ನಾರ್ಜೋ N65 5G ಮೊಬೈಲ್ ಬಿಡುಗಡೆಗೆ ಮುಂದಾದ Realme; ಬಿಡುಗಡೆ ದಿನಾಂಕ ಯಾವಾಗ..?

ಮೇ 22ರಂದು ರಿಯಲ್‌ಮಿ GT 6T ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಬಳಿಕ ಶೀಘ್ರದಲ್ಲೇ ನಾರ್ಜೋ (Narzo) ಸರಣಿಯ ಹೊಸ ಮೊಬೈಲ್‌ ಅನ್ನು ಭಾರತದಲ್ಲಿ ಲಾಂಚ್ ಮಾಡಲಾಗುವುದು ಎಂದು ರಿಯಲ್‌ಮಿ ಸಂಸ್ಥೆ ದೃಢಪಡಿಸಿದೆ.

Narzo N65 5G ಹೆಸರಿನಲ್ಲಿ ಕರೆಯಲ್ಪಡುವ ಸ್ಮಾರ್ಟ್‌ಫೋನ್ ವಾಚ್‌ನಂತಹ ದುಂಡಾದ ಕ್ಯಾಮೆರಾ ರಚನೆ ಹೊಂದಿರುವ ಮೊಬೈಲ್ ಇದಾಗಿದ್ದು, ಈ ಆಕಾರವನ್ನು ನಾವು ಈ ಹಿಂದಿನ ಅನೇಕ ರಿಯಲ್‌ಮಿ ಫೋನ್‌ಗಳಲ್ಲಿ ನೋಡಿದ್ದೇವೆ.

ನಾರ್ಜೋ N65 5G ಮೊಬೈಲ್ ಬಿಡುಗಡೆಗೆ ಮುಂದಾದ Realme

ರಿಯಲ್‌ಮಿ ನಾರ್ಜೋ ಎನ್‌65 5G (Realme Narzo N65 5G) ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಸ್ಮಾರ್ಟ್‌ಫೋನ್‌ನ ಬಿಡುಗಡೆಯ ದಿನಾಂಕ ಪ್ರಕಟಿಸಿದೆ ಮತ್ತು ಅದರ ಕೆಲವು ಪ್ರಮುಖ ಫೀಚರ್ಸ್‌ ಹಾಗೂ ಹ್ಯಾಂಡ್‌ಸೆಟ್‌ನ ವಿನ್ಯಾಸವನ್ನು ಸಹ ಬಹಿರಂಗಪಡಿಸಿದೆ.

ಇದು ದೊಡ್ಡಗಾತ್ರದ ವೃತ್ತಾಕಾರದ ಬ್ಯಾಕ್ ಕ್ಯಾಮೆರಾ ಹೊಂದಿರುವ ಆಕಾರದಲ್ಲಿ ಬಿಡುಗಡೆಯಾಗಲಿದೆ. ಈ ಮೊದಲು ಏಪ್ರಿಲ್ 2023ರಲ್ಲಿ ಮೀಡಿಯಾ ಟೆಕ್ ಹೆಲಿಯೊ G88 ಚಿಪ್‌ಸೆಟ್ ಮತ್ತು 64-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ದೇಶದಲ್ಲಿ ಲಾಂಚ್‌ ಆಗಿರುವ ರಿಯಲ್‌ಮಿ ನಾರ್ಜೋ ಎನ್55 (Realme Narzo N55) ಯಶಸ್ಸಿಗೆ ಈ ಮೊಬೈಲ್ ಸಹಕಾರಿಯಾಗಿರಲಿದೆ ಎಂದು ಸಂಸ್ಥೆ ತಿಳಿಸಿದೆ.

ಮುಂಬರುವ ರಿಯಲ್‌ಮಿ ಫೋನ್ TSMCಯ 6nm ಪ್ರಕ್ರಿಯೆ ಆಧಾರದಲ್ಲಿ ಮೀಡಿಯಾಟೆಕ್ (MediaTek) ಡೈಮೆನ್ಸಿಟಿ 6300 5G ಚಿಪ್‌ಸೆಟ್‌ನಿಂದ ಕಾರ್ಯ ನಿರ್ವಹಿಸಲಿದೆ. ಫೋನ್ ಅನ್ನು ಧೂಳಿನಿಂದ ರಕ್ಷಿಸಲು IP54 ರೇಟಿಂಗ್ ಅಳವಡಿಸಲಾಗಿದ್ದು, ಇದು ಫೋನ್‌ಗೆ ನೀರು ಬಿದ್ದಾಗ ಅಥವಾ ಲಘು ಮಳೆಯಾದ ಸಂದರ್ಭದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಿರಲಿದೆ, ಸಂಪೂರ್ಣ ನೀರಿನಲ್ಲಿ ಮುಳುಗಿಸುವಂತಿಲ್ಲ ಎಂದು ಸಂಸ್ಥೆ ತಿಳಿಸಿದೆ.

ರಿಯಲ್‌ಮಿ ನಾರ್ಜೋ ಎನ್‌65 5G ಬಿಡುಗಡೆ ದಿನಾಂಕ ಮತ್ತು ಪ್ರಮುಖ ಫೀಚರ್ಸ್‌ಗಳು: ಈ ಮೊಬೈಲ್ ಭಾರತದಲ್ಲಿ ಮೇ 28ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ ಎಂದು ರಿಯಲ್‌ಮಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ.

ಧೂಳು, ಸ್ಪ್ಲಾಶ್‌ಗೆ ಮತ್ತು ಮಳೆ ನೀರಿನಿಂದ ರಕ್ಷಣೆ ಪಡೆಯಲು IP54 ರೇಟಿಂಗ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಪ್ರಕಟಣೆಯಲ್ಲಿ ನೀಡಿರುವ ಅಮೇಜಾನ್ ಇಮೇಜ್ ಗಮನಿಸಿದರೆ, ಈ ಮೊಬೈಲ್ ಅಮೇಜಾನ್ ಇ-ಕಾಮರ್ಸ್ ತಾಣದಲ್ಲಿ ಸಿಗುವುದನ್ನು ಸಂಸ್ಥೆ ದೃಢೀಕರಿಸಿದೆ.

ರಿಯಲ್‌ಮಿ ಕಳೆದ ತಿಂಗಳು ತನ್ನ C65 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈ ಮೊಬೈಲ್‌ನ ಆಕಾರದಲ್ಲಿ ರಿಯಲ್‌ಮಿ ನಾರ್ಜೋ ಎನ್‌65 5G ಇರಲಿದೆ ಮತ್ತು ಸೇಮ್ ಚಿಪ್‌ಸೆಟ್ ಮತ್ತು IP54 ರೇಟಿಂಗ್ ಅನ್ನು ಹೊಂದಿದೆ. C65 5G ಮೊಬೈಲ್ 6.67 ಇಂಚಿನ HD+ ಡಿಸ್‌ಪ್ಲೇ ಜೊತೆಗೆ 89.97 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ರೇಶ್ಯೂ, 120Hz ರಿಫ್ರೆಶ್ ರೇಟ್ ಹಾಗೂ 625 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಜೊತೆಗೆ 8GB RAM ಮತ್ತು 256GB ವರೆಗಿನ ಆಂತರಿಕ ಸ್ಟೋರೆಜ್ ಸಾಮರ್ಥ್ಯ ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ ಹೆಚ್ಚುವರಿ ಸ್ಟೋರೇಜ್ ಪಡೆಯಲು ಅವಕಾಶ ನೀಡಿದೆ.

ರಿಯಲ್‌ಮಿ ನಾರ್ಜೋ ಎನ್‌65 5G ವಿನ್ಯಾಸ: ಈ ಮೊಬೈಲ್‌ನ ಹಿಂಭಾಗದ ಪ್ಯಾನೆಲ್‌ ಎರಡು ದೊಡ್ಡ ಗಾತ್ರದ ವೃತ್ತಾಕಾರ ಕ್ಯಾಮೆರಾಗಳನ್ನು ಹೊಂದಿದ್ದು, ಎರಡು ಸೆನ್ಸಾರ್ ಕ್ಯಾಮೆರಾಗಳು ಮತ್ತು ಎಲ್ಇಡಿ ಫ್ಲ್ಯಾಷ್ ಘಟಕವನ್ನು ಹೊಂದಿದೆ. ಗ್ಲೋಸಿ ಫಿನಿಶ್‌ನೊಂದಿಗೆ ಗೋಲ್ಡನ್ ಕಲರ್ ಆಯ್ಕೆಯಲ್ಲಿ ಫೋನ್ ಕಂಡು ಬಂದಿದೆ. ಹ್ಯಾಂಡ್‌ಸೆಟ್‌ನ ಬಲ ಅಂಚಿನಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಇರುವಂತೆ ಕಾಣುತ್ತದೆ.

Best Mobiles in India

English summary
Realme Narzo N65 5G will be launched in India next week. The company has announced the launch date of the smartphone and also revealed some of its key features and the design of the handset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+