Home
ಮೊಬೈಲ್

ಜಸ್ಟ್ 8,000.! ಜು.29ಕ್ಕೆ ಹೊಸ Realme ಫೋನ್ ಲಾಂಚ್: ಕಡಿಮೆ ಬೆಲೆಗೆ ರಾಶಿ ಫೀಚರ್ಸ್!

ರಿಯಲ್‌ಮಿ ಕಂಪನಿಯು ಹೊಸ ರಿಯಲ್‌ಮಿ ನಾರ್ಜೊ ಎನ್‌61 (Realme Narzo N61) ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಜುಲೈ 29 ರಂದು ಭಾರತದಲ್ಲಿ ತನ್ನ Narzo ಸರಣಿಯ ರಿಯಲ್‌ಮಿ ನಾರ್ಜೊ ಎನ್‌61 ಫೋನನ್ನು ಲಾಂಚ್ ಮಾಡುವುದಾಗಿ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಇದು ಕಂಪನಿಯ ಹೊಸ ಬಜೆಟ್ ಫೋನ್ ಆಗಿರಲಿದೆ. ಬಿಡುಗಡೆಯ ದಿನಾಂಕದ ಜೊತೆಗೆ ಈ ಫೋನಿನ ಡಿಸೈನ್ ಬಹಿರಂಗಪಡಿಸಲಾಗಿದೆ. ಇದು ArmorShell ವಿನ್ಯಾಸ, IP54 ರೇಟಿಂಗ್, 32MP ಕ್ಯಾಮೆರಾ ಹೊಂದಿದೆ. ಮುಖ್ಯವಾಗಿ ಕೇವಲ 8000 ರೂ. ಬೆಲೆಯಲ್ಲಿ Realmeನ ಈ ಹೊಸ ಫೋನ್ ಅದ್ದೂರಿಯಾಗಿ ಎಂಟ್ರಿ ಕೊಡಲಿದೆ.

ಹೌದು, ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್‌ಮಿ, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು Realme 13 Pro 5G ಸರಣಿಯ ಭಾರತದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಫೋನ್‌ಗಳು ಭಾರತದಲ್ಲಿ ಜುಲೈ 30 ರಂದು ಬಿಡುಗಡೆಯಾಗಲಿದೆ. ಆದರೆ, ರಿಯಲ್‌ಮಿ ನಾರ್ಜೊ ಎನ್‌61 ಫೋನ್ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ಬ್ರಾಂಡ್ ಫೋನ್‌ನ ವಿನ್ಯಾಸ ಮತ್ತು ಅದರ ಪ್ರಮುಖ ವಿಶೇಷತೆಗಳ ವಿವರಗಳನ್ನು ಟೀಸರ್‌ನಲ್ಲಿ ಹಂಚಿಕೊಂಡಿದೆ.

ಜಸ್ಟ್ 8,000.! ಜು.29ಕ್ಕೆ ಹೊಸ Realme ಫೋನ್ ಲಾಂಚ್: ರಾಶಿ ಫೀಚರ್ಸ!

ರಿಯಲ್‌ಮಿ ನಾರ್ಜೊ ಎನ್‌61 ಭಾರತದಲ್ಲಿ ಬಿಡುಗಡೆ

ರಿಯಲ್‌ಮಿ ನಾರ್ಜೊ ಎನ್‌61 ಫೋನ್‌ನ ಭಾರತೀಯ ಬಿಡುಗಡೆ ದಿನಾಂಕವನ್ನು Realme ದೃಢಪಡಿಸಿದೆ. ಭಾರತದಲ್ಲಿ ಜುಲೈ 29 ರಂದು ಮಧ್ಯಾಹ್ನ 12 ಗಂಟೆಗೆ ಫೋನ್ ಅನಾವರಣಗೊಳ್ಳಲಿದೆ. ಕಂಪನಿಯು ರಿಯಲ್‌ಮಿಯ ಅಧಿಕೃತ ಸೈಟ್ ಮತ್ತು ಅಮೆಜಾನ್‌ನಲ್ಲಿ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಮಾಡಿದೆ. ಫೋನ್‌ನ ಅಧಿಕೃತ ವಿನ್ಯಾಸ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಈ ಸೈಟ್ ಮೂಲಕ ಬಹಿರಂಗಪಡಿಸಲಾಗಿದೆ. ಇದು ಫ್ಲಾಟ್ ಎಡ್ಜ್‌ಗಳು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ.

ರಿಯಲ್‌ಮಿ ನಾರ್ಜೊ ಎನ್‌61 ನಿರೀಕ್ಷಿತ ವಿಶೇಷತೆಗಳು

ಮೈಕ್ರೋಸೈಟ್ ಪ್ರಕಾರ, ಈ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ವಿಶೇಷ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಫೋನ್ TUV ರೈನ್‌ಲ್ಯಾಂಡ್ ಹೈ-ವಿಶ್ವಾಸಾರ್ಹತೆ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿಯು ಹೇಳಿದೆ. ಇದು ಸಾಕಷ್ಟು ಗಟ್ಟಿಮುಟ್ಟಾಗಿರುತ್ತದೆ. ಇದಲ್ಲದೆ, ಈ ಫೋನ್ ಆರ್ಮೋರ್ಶೆಲ್ (ArmorShell) ರಕ್ಷಣೆಯೊಂದಿಗೆ ಬರುತ್ತದೆ. Realme Narzo N61 ನಾಲ್ಕು ವರ್ಷಗಳವರೆಗೆ ನವೀಕರಣಗಳನ್ನು ಪಡೆಯುತ್ತದೆ. ಜೊತೆಗೆ, ಧೂಳು ಮತ್ತು ನೀರು ನಿರೋಧಕ IP54 ರೇಟಿಂಗ್‌ನೊಂದಿಗೆ ಬರಲಿದೆ. ಇದು ರೈನ್ ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ.

ರಿಯಲ್‌ಮಿ ನಾರ್ಜೊ ಎನ್‌61 ಬೆಲೆ ಎಷ್ಟು?

ರಿಯಲ್‌ಮಿ ಹಂಚಿಕೊಂಡಿರುವ ಟೀಸರ್ ಪೋಸ್ಟರ್‌ನಲ್ಲಿ, Realme NARZO N61 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ ಎಂದು ವರದಿಯಾಗಿದೆ. ಈ ಸೆಟಪ್ 32MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಕಂಪನಿಯ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗಿರುತ್ತದೆ. Realme Narzo N61 ಅನ್ನು ಕಂಪನಿಯು 10,000 ರೂ. ಬಜೆಟ್‌ ಅಡಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದನ್ನು 8,499 ರೂ. ಬೆಲೆಯಲ್ಲಿ ಪರಿಚಯಿಸಬಹುದು. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಜಸ್ಟ್ 8,000.! ಜು.29ಕ್ಕೆ ಹೊಸ Realme ಫೋನ್ ಲಾಂಚ್: ರಾಶಿ ಫೀಚರ್ಸ!

Realme C61 ಫೋನಿನ ವಿಶೇಷತೆಗಳೇನು?

ಡಿಸ್ಪ್ಲೇ: ರಿಯಲ್‌ಮಿ ಸಿ61 ಫೋನ್ 6.74 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600×720 ಪಿಕ್ಸೆಲ್ ರೆಸಲ್ಯೂಶನ್, ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ.

ಪ್ರೊಸೆಸರ್: ಇದು UNISOC T612 ಪ್ರೊಸೆಸರ್ ಹೊಂದಿದೆ.

ಸ್ಟೋರೇಜ್: ಈ ಫೋನ್ 6GB RAM + 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ.

ಕ್ಯಾಮೆರಾ: ಇದು 32MP ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಲೆನ್ಸ್ ಲಭ್ಯವಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,000mAh ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.

ಇತರ ಫೀಚರ್ಸ್: ಇದು IP54 ರೇಟಿಂಗ್ ಅನ್ನು ಹೊಂದಿದೆ. ಇದು ಆರ್ಮರ್‌ಶೆಲ್ ಪ್ರೊಟೆಕ್ಷನ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 4G ಸಂಪರ್ಕದೊಂದಿಗೆ ಬರುತ್ತದೆ.

Best Mobiles in India

English summary
Realme Nazo N61 with Armor Shell Protection Launching on 29th July. will feature IP54 rating and ArmorShell Protection: Expected specs, price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+