ಜು.29ಕ್ಕೆ ಬರುತ್ತೆ Realmeನ ಹೊಸ ಫೋನ್! ArmorShell ಡಿಸೈನ್, 32MP ಕ್ಯಾಮೆರಾ.. ಕೇವಲ ರೂ. 8000.!
ArmorShell ಡಿಸೈನ್, IP54 ರೇಟಿಂಗ್, 32MP ಕ್ಯಾಮೆರಾ.. ಕೇವಲ ರೂ. 8000..! ಬರುತ್ತಿದೆ Realmeನ ಹೊಸ ಗಟ್ಟಿಮುಟ್ಟಾದ ಫೋನ್! ರಿಯಲ್‌ಮಿ ಸಂಸ್ಥೆಯು ಹೊಸದಾಗಿ ರಿಯಲ್‌ಮಿ ನಾರ್ಜೊ ಎನ್61 (Realme Narzo N61) ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಜುಲೈ 29 ರಂದು ಭಾರತದಲ್ಲಿ ತನ್ನ Narzo ಸರಣಿಯ ರಿಯಲ್‌ಮಿ ನಾರ್ಜೊ ಎನ್61 ಫೋನನ್ನು ಲಾಂಚ್ ಮಾಡುವುದಾಗಿ ಕಂಪನಿ ಘೋಷಿಸಿದೆ. ಇದು ಕಂಪನಿಯ ಹೊಸ ಬಜೆಟ್ ಫೋನ್ ಎಂದು ಹೇಳಲಾಗಿದೆ. ಬಿಡುಗಡೆಯ ದಿನಾಂಕದ ಜೊತೆಗೆ ಈ ಫೋನ್‌ನ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.
ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್‌ಮಿ (Realme) ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚು ಬೇಡಿಕೆ ಪಡೆದಿದೆ. ಇತ್ತೀಚೆಗೆ ಕಂಪನಿಯು Realme 13 Pro 5G ಸರಣಿಯ ಭಾರತದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಫೋನ್‌ಗಳು ಭಾರತದಲ್ಲಿ ಜುಲೈ 30 ರಂದು ಲೋಕಾರ್ಪಣೆಗೊಳ್ಳಲಿವೆ. ಆದರೆ, ರಿಯಲ್‌ಮಿ ನಾರ್ಜೊ ಎನ್61 ಫೋನ್ ಒಂದು ದಿನ ಮುಂಚಿತವಾಗಿ ಲಾಂಚ್ ಆಗಲಿದೆ. ಬ್ರಾಂಡ್ ಫೋನಿನ ವಿನ್ಯಾಸ ಮತ್ತು ಅದರ ಪ್ರಮುಖ ವಿಶೇಷತೆಗಳ ವಿವರಗಳನ್ನು ಟೀಸರ್‌ನಲ್ಲಿ ಹಂಚಿಕೊಂಡಿದೆ.

Realme Narzo N61 ಬಿಡುಗಡೆ ದಿನಾಂಕ, ಸಮಯ
Realme Narzo N61 ಫೋನ್‌ನ ಭಾರತೀಯ ಬಿಡುಗಡೆ ದಿನಾಂಕವನ್ನು Realme ದೃಢಪಡಿಸಿದೆ. ಭಾರತದಲ್ಲಿ ಜುಲೈ 29 ರಂದು ಮಧ್ಯಾಹ್ನ 12 ಗಂಟೆಗೆ ಫೋನ್ ಅನಾವರಣಗೊಳ್ಳಲಿದೆ. ಕಂಪನಿಯು ರಿಯಲ್‌ಮಿಯ ಅಧಿಕೃತ ಸೈಟ್ ಮತ್ತು ಅಮೆಜಾನ್‌ನಲ್ಲಿ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಮಾಡಿದೆ. ಫೋನ್‌ನ ಅಧಿಕೃತ ವಿನ್ಯಾಸ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಈ ಸೈಟ್ ಮೂಲಕ ಬಹಿರಂಗಪಡಿಸಲಾಗಿದೆ. ಇದು ಫ್ಲಾಟ್ ಎಡ್ಜ್‌ಗಳು ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.
Realme Narzo N61 ವಿಶೇಷತೆಗಳೇನು?
ಮೈಕ್ರೋಸೈಟ್ ಪ್ರಕಾರ, ಈ ಸ್ಮಾರ್ಟ್‌ಫೋನ್‌ನಲ್ಲಿ ಹಲವಾರು ವಿಶೇಷ ಫೀಚರ್ಸ್‌ಗಳನ್ನು ಅಳವಡಿಸಲಾಗಿದೆ. ಫೋನ್ TUV ರೈನ್‌ಲ್ಯಾಂಡ್ ಹೈ-ವಿಶ್ವಾಸಾರ್ಹತೆ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿಯು ಹೇಳಿದೆ. ಇದು ಸಾಕಷ್ಟು ಗಟ್ಟಿಮುಟ್ಟಾಗಿರುತ್ತದೆ. ಇದಲ್ಲದೆ, ಈ ಫೋನ್ ಆರ್ಮೋರ್ಶೆಲ್ (ArmorShell) ರಕ್ಷಣೆಯೊಂದಿಗೆ ಬರುತ್ತದೆ. Realme Narzo N61 ನಾಲ್ಕು ವರ್ಷಗಳವರೆಗೆ ನವೀಕರಣಗಳನ್ನು ಪಡೆಯುತ್ತದೆ. ಜೊತೆಗೆ, ಧೂಳು ಮತ್ತು ನೀರು ನಿರೋಧಕ IP54 ರೇಟಿಂಗ್‌ನೊಂದಿಗೆ ಬರಲಿದೆ. ಇದು ರೈನ್ ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಸಹ ಹೊಂದಿರುತ್ತದೆ.
Narzo N61 ಆರಂಭಿಕ ಬೆಲೆ 8,499 ರೂ..!
ರಿಯಲ್‌ಮಿ ಹಂಚಿಕೊಂಡಿರುವ ಟೀಸರ್ ಪೋಸ್ಟರ್‌ನಲ್ಲಿ, Realme NARZO N61 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ ಎಂದು ವರದಿಯಾಗಿದೆ. ಈ ಸೆಟಪ್ 32MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಕಂಪನಿಯ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗಿರುತ್ತದೆ. Realme Narzo N61 ಅನ್ನು ಕಂಪನಿಯು 10,000 ರೂ. ಬಜೆಟ್ ಅಡಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದನ್ನು 8,499 ರೂ. ಬೆಲೆಯಲ್ಲಿ ಪರಿಚಯಿಸಬಹುದು. ಆದರೆ, ಈ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
Realme C61 ಫೋನಿನ ಫೀಚರ್ಸ್
Realme Narzo N61 ಫೋನ್ ಜೂನ್‌ನಲ್ಲಿ ಬಿಡುಗಡೆಯಾದ Realme C61ನ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು. ಈ ಫೋನಿನ ಫೀಚರ್ಸ್‌ಗಳನ್ನು ಈ ಕೆಳಗಿನಂತೆ ನೋಡಬಹುದು.
ಡಿಸ್ಪ್ಲೇ: ರಿಯಲ್‌ಮಿ ಸಿ61 ಫೋನ್ 6.74 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600×720 ಪಿಕ್ಸೆಲ್ ರೆಸಲ್ಯೂಶನ್, ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ.
ಪ್ರೊಸೆಸರ್: ಇದು UNISOC T612 ಪ್ರೊಸೆಸರ್ ಹೊಂದಿದೆ.
ಸ್ಟೋರೇಜ್:ಈ ಫೋನ್ 6GB RAM + 128GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ.
ಕ್ಯಾಮೆರಾ: ಇದು 32MP ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಲೆನ್ಸ್ ಲಭ್ಯವಿದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,000mAh ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
ಇತರ ಫೀಚರ್ಸ್: ಇದು IP54 ರೇಟಿಂಗ್ ಅನ್ನು ಹೊಂದಿದೆ. ಇದು ಆರ್ಮರ್‌ಶೆಲ್ ಪ್ರೊಟೆಕ್ಷನ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 4G ಸಂಪರ್ಕದೊಂದಿಗೆ ಬರುತ್ತದೆ.


Click it and Unblock the Notifications








