Home
ಮೊಬೈಲ್

ಅಬ್ಬರಿಸಲು ಬಂತು ರಗಡ್ ಫೋನ್; 7000mAh ಬ್ಯಾಟರಿ.. 50MP ಸೋನಿ ಕ್ಯಾಮೆರಾ.. ಇಷ್ಟೆನಾ ಬೆಲೆ?

ರಿಯಲ್‌ಮಿ ಸೈಲೆಂಟ್‌ ಆಗಿಯೇ ಹೊಸ 'Neo' ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳು ರಿಯಲ್‌ಮಿ ನಿಯೋ7 SE (realme Neo 7 SE 5G) ಮತ್ತು ರಿಯಲ್‌ಮಿ ನಿಯೋ 7x (realme Neo 7x 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಫೋನ್‌ಗಳು ಸ್ಟೈಲಿಶ್ ಲುಕ್ ಮತ್ತು ಅತ್ಯುತ್ತಮ ಗುಣಮಟ್ಟದ ವಿಶೇಷಣಗಳನ್ನು ಒಳಗೊಂಡಿವೆ. ಈ ಎರಡೂ ರಿಯಲ್‌ಮಿ 5G ಫೋನ್‌ಗಳನ್ನು ದೊಡ್ಡ ಬ್ಯಾಟರಿ ಮತ್ತು ಗೇಮಿಂಗ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ ರಿಯಲ್‌ಮಿ ನಿಯೋ7 SE ಮೊಬೈಲ್ ಗ್ರಾಹಕರ ಪ್ರಿಯರ ಗಮನ ಸೆಳೆದಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರಿಯಲ್‌ಮಿ ನಿಯೋ7 SE ಮೊಬೈಲ್ ನಾಲ್ಕು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನಲ್ಲಿ 50MP ಡ್ಯುಯಲ್ ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8400-MAX ಪ್ರೊಸೆಸರ್‍‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ, 16GB RAM + 512GB ಸ್ಟೋರೇಜ್, 7000mAh ಬಿಗ್ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

realme Neo 7 SE ಲಾಂಚ್; 7000mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ರಿಯಲ್‌ಮಿ ನಿಯೋ7 SE ಮೊಬೈಲ್ IP69 + IP68 + IP66 ರೇಟಿಂಗ್ ಪಡೆದಿದೆ. ಇದನ್ನು ಕಂಪನಿಯು ಪೂರ್ಣ 'ಜಲನಿರೋಧಕ' ಎಂದು ಕರೆದಿದೆ. ಈ ಫೋನ್ ಸ್ಕೈ ಕಮ್ಯುನಿಕೇಷನ್ ಸಿಸ್ಟಮ್ 2.0 ತಂತ್ರಜ್ಞಾನವನ್ನು ಹೊಂದಿದೆ. ಯಾವುದೇ ನೆಟ್‌ವರ್ಕ್ ಇಲ್ಲದೆ ಸ್ಯಾಟಲೈಟ್‌ಗೆ (ಉಪಗ್ರಹ) ಸಂಪರ್ಕಿಸಬಹುದು. ಗೇಮಿಂಗ್‌ಗಾಗಿ ಏರ್‌ಫ್ಲೋ ಕೋಲ್ಡ್ ಫ್ರಂಟ್ ಕೂಲಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ರಿಯಲ್‌ಮಿ ನಿಯೋ7 SE ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಿಯೋ7 SE 5G ಫೋನ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು 8T LTPO ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಹೊಂದಿದೆ. ಈ ಫೋನ್ ಅಂಡರ್ ಸ್ಕ್ರೀನ್ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಿಯೋ7 SE ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8400 ಮ್ಯಾಕ್ಸ್ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 15 ಓಎಸ್‌ ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಈ ಮೊಬೈಲ್, ಮಾಲಿ G720 ಜಿಪಿಯು ಹೊಂದಿದೆ.

ಸ್ಟೋರೇಜ್ ಆಯ್ಕೆ

ರಿಯಲ್‌ಮಿ ನಿಯೋ7 SE ಮೊಬೈಲ್ 8GB, 12GB ಮತ್ತು 16GB RAM ಸೇರಿದಂತೆ ಮೂರು RAM ರೂಪಾಂತರಗಳಲ್ಲಿ ಬರುತ್ತದೆ. ಈ ಮೊಬೈಲ್ 12GB ಡೈನಾಮಿಕ್ RAM ವಿಸ್ತರಣಾ ತಂತ್ರಜ್ಞಾನ ಹೊಂದಿದೆ. ನೀವು ಭೌತಿಕ RAM ಜೊತೆಗೆ 28GB RAM (16GB+12GB) ವರೆಗೆ ಬಳಸಬಹುದು.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಿಯೋ7 SE 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ ಮತ್ತು OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಿಯೋ7 SE ಸ್ಮಾರ್ಟ್‌ಫೋನ್ 7000mAh ದೊಡ್ಡ ಬ್ಯಾಟರಿ ಹೊಂದಿದೆ. 5 ವರ್ಷಗಳ ಕಾಲ ಬಳಸಿದರೂ ಈ ಬ್ಯಾಟರಿ ಬಾಳಿಕೆ ಶೇ.80 ಕ್ಕಿಂತ ಕಡಿಮೆಯಾಗುವುದಿಲ್ಲ. ಈ ದೊಡ್ಡ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು 23 ನಿಮಿಷಗಳಲ್ಲಿ ಫೋನನ್ನು 0 ರಿಂದ ಶೆ.50 ರಷ್ಟು ಚಾರ್ಜ್ ಮಾಡಬಹುದು.

ರಿಯಲ್‌ಮಿ ನಿಯೋ7 SE ಬೆಲೆ

ರಿಯಲ್‌ಮಿ ನಿಯೋ7 SE ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವು 21,590 ರೂ.ಗೆ ಬಿಡುಗಡೆಯಾಗಿದೆ. 12GB RAM + 256GB ಸ್ಟೋರೇಜ್ ಆಯ್ಕೆ ಬೆಲೆ 22,890 ರೂ. ಆಗಿದೆ. 12GB RAM + 512GB ಸ್ಟೋರೇಜ್ ಮಾದರಿಯನ್ನು 26,490 ರೂ.ಗೆ ಪರಿಚಯಿಸಲಾಗಿದೆ. ಹಾಗೆಯೇ 16GB RAM + 512GB ಸ್ಟೋರೇಜ್ ರೂಪಾಂತರವನ್ನು 29,990 ರೂ.ಗೆ ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್ ನೀಲಿ, ಬಿಳಿ ಮತ್ತು ಬೂದು ಬಣ್ಣಗಳಲ್ಲಿ ಬರುತ್ತದೆ. ಪ್ರಸ್ತುತ, ಈ ಮೊಬೈಲ್ ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೂ ಬರಲಿದೆ.

Best Mobiles in India

English summary
Realme Neo 7 SE With MediaTek Dimensity 8400-Max SoC and 7,000mAh Battery Launched: Price, Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+