Home
ಮೊಬೈಲ್

Realme: 7000mAh ಬೃಹತ್ ಬ್ಯಾಟರಿ.. ಬರೋಬ್ಬರಿ 1TB ಸ್ಟೋರೇಜ್‌.. ಯಾವ ಫೋನ್ ಗೊತ್ತಾ?

ವಾವ್..! 7000mAh ಸಾಮರ್ಥ್ಯದ ಬೃಹತ್ ಬ್ಯಾಟರಿ.. ಬರೋಬ್ಬರಿ 1TB ಸ್ಟೋರೇಜ್‌.. ಸ್ಮಾರ್ಟ್‌ಫೋನ್‌ ಪ್ರಿಯರು ಖುಷಿಯಾಗಲು ಇಷ್ಟು ಸಾಕು! ಹೌದು, ರಿಯಲ್‌ಮಿ ಡಿಸೆಂಬರ್ 11 ರಂದು 7000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು ರಿಯಲ್‌ಮಿ ನಿಯೋ 7 (Realme Neo 7) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದೀಗ ಕಂಪನಿಯು, ಹೊಸ ಫೋನಿನ ಲುಕ್ ಸಹ ರಿವೀಲ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ರಿಯಲ್‌ಮಿ ನಿಯೋ 7 ಮೊಬೈಲ್‌ ಇದೇ ಡಿ.11 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ರಿಯಲ್‌ಮಿ ಪ್ರಿಯರು ಈ ಫೋನಿಗಾಗಿ ಕಾಯುತ್ತಿದ್ದಾರೆ. ಇದು ಗೇಮಿಂಗ್ ಪ್ರಿಯರ ಹಾಟ್ ಫೇವರಿಟ್ ಆಗಿರಲಿದೆ. ಈ ಮೊಬೈಲ್‌ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗುತ್ತದೆ. ನೀವು, ಸಬ್‌ಮರೀನ್ ಬ್ಲೂ, ಮೆಟಿಯೊರೈಟ್ ಬ್ಲ್ಯಾಕ್ ಮತ್ತು ಸಿಲ್ವರ್ ಸ್ಟಾರ್‌ಶಿಪ್ ಎಡಿಷನ್ ಬಣ್ಣದಲ್ಲಿ ಖರೀದಿಸಬಹುದು. ಫೋನಿನಲ್ಲಿ ಎರಡು ದೊಡ್ಡ ಕ್ಯಾಮೆರಾ ಲೆನ್ಸ್‌ ಇದೆ. ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಲಭ್ಯವಿದೆ. ಇದು ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ.

Realme: 7000mAh ಬೃಹತ್ ಬ್ಯಾಟರಿ.. ಬರೋಬ್ಬರಿ 1TB ಸ್ಟೋರೇಜ್‌.. ಯಾವ ಫೋನ್?

ರಿಯಲ್‌ಮಿ ನಿಯೋ 7 ಬೆಲೆ ಎಷ್ಟಿರಲಿದೆ?

ಕಂಪನಿಯು ಡಿ.11 ರಂದು ಮಧ್ಯಾಹ್ನ 1.30 (ಸಂಜೆ 4) ಗಂಟೆಗೆ ರಿಯಲ್‌ಮಿ ನಿಯೋ 7 ಫೋನಿನ ಬಿಡುಗಡೆ ಸಮಾರಂಭ ಆಯೋಜಿಸಿದೆ. ನೀವು ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಬಹುದು. ಈ ಸ್ಮಾರ್ಟ್‌ಫೋನ್‌ 29,100 ​​ರೂ. ಆರಂಭಿಕ ಬೆಲೆ ಹೊಂದಿರಲಿದೆ. ಭಾರತದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನಿನ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ ನಿಯೋ 7 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಿಯೋ 7 ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 1,264 x 2,780 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರಿಯಲ್‌ಮಿ ನಿಯೋ 7 ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5 ನೊಂದಿಗೆ ಕೆಲಸ ನಿರ್ವಹಿಸಲಿದೆ. ರಿಯಲ್‌ಮಿ GT ನಿಯೋ 6 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ ಹೊಂದಿದೆ.

ಸ್ಟೋರೇಜ್ ಆಯ್ಕೆ

ಮುಂಬರುವ ರಿಯಲ್‌ಮಿ ನಿಯೋ 7 ಸ್ಮಾರ್ಟ್‌ಫೋನ್ 6GB + 128GB, 8GB + 256GB, 12GB +512GB ಮತ್ತು 16GB RAM + 1TB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 16GB RAM + 1TB ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಿಯೋ 7 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿರಲಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಿಯೋ 7 ಫೋನ್‌ 7000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ರಿಯಲ್‌ಮಿ GT ನಿಯೋ 6 ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಚಾರ್ಜಿಂಗ್ ಸೌಲಭ್ಯ ಹೊಂದಿದೆ. ರಿಯಲ್‌ಮಿ ನಿಯೋ 7 ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ.

Best Mobiles in India

English summary
Realme Neo 7 to launch on 11 December with a massive 7,000mAh battery: Expected specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+