Realme Neo 7x ಬಿಡುಗಡೆ: ಹೊಸ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಸ್ಮಾರ್ಟ್‌ಫೋನ್!
ರಿಯಲ್‌ಮಿ ಕಂಪೆನಿಯು ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'Realme Neo 7x' ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ನಿರೀಕ್ಷೆಯಂತೆಯೇ ಈ ಹೊಸ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಹೊಸ ಸ್ನಾಪ್‌ಡ್ರಾಗನ್ 6 Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಜೊತೆಗೆ 6.67-ಇಂಚಿನ AMOLED ಡಿಸ್ಪ್ಲೇ, 12GB RAM ಮತ್ತು 512GB ವರೆಗೆ ಸಂಗ್ರಹಣಾ ಸಾಮರ್ಥ್ಯ ಹಾಗೂ 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ನೂತನ Realme Neo 7x ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ವೈಶಿಷ್ಟ್ಯಗಳು ಯಾವುವು ಮತ್ತು ಇದರ ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Realme Neo 7x ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ನೂತನ Realme Neo 7x ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್, 1,500Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್, 2,000 nits ವರೆಗೆ ಬ್ರೈಟ್‌ನೆಸ್ ಮತ್ತು ProXDR ಬೆಂಬಲದೊಂದಿಗೆ 6.67-ಇಂಚಿನ ಪೂರ್ಣ HD+ (1,080x2,400 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 12GB ವರೆಗೆ RAM ಮತ್ತು 512GB ವರೆಗೆ ಆನ್‌ಬೋರ್ಡ್ ಮೆಮೊರಿಯೊಂದಿಗೆ ಜೋಡಿಸಲಾದ ಸ್ನಾಪ್‌ಡ್ರಾಗನ್ 6 Gen 4 SoC ನಿಂದ ಚಾಲಿತವಾಗಿದ್ದು, ಇದು ಆಂಡ್ರಾಯ್ಡ್ 15-ಆಧಾರಿತ ರಿಯಲ್‌ಮಿ UI 6.0 ಬೆಂಬಲದೊಂದಿಗೆ ಬಂದಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Realme Neo 7x ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸಾಮರ್ಥ್ಯದ OV50D40 ಮುಖ್ಯ ಸೆನ್ಸಾರ್ ಹೊಂದಿದೆ ಮತ್ತು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸೆನ್ಸಾರ್‌ನೊಂದಿಗೆ ಬಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 6,050mm² VC ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹಾಗೂ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಒಳಗೊಂಡಿದೆ.
ಸಂಪರ್ಕ ಆಯ್ಕೆಗಳಲ್ಲಿ, Realme Neo 7x ಸ್ಮಾರ್ಟ್‌ಫೋನ್‌ನಲ್ಲಿ 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.2, Beidou, GPS, GLONASS, Galileo, QZSS, NFC ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಇವೆ. ಭದ್ರತೆಗಾಗಿ, ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP66, IP68 ಮತ್ತು IP69 ರೇಟಿಂಗ್‌ಗಳನ್ನು ಪೂರೈಸುತ್ತದೆ ಎಂದು ಕಂಪೆನಿ ತಿಳಿಸಿದೆ. ಹಾಗೂ ಈ ಫೋನ್ 163.15 x 75.65 x 7.97mm ಗಾತ್ರದಲ್ಲಿ ಸುಮಾರು 194g ತೂಕವನ್ನು ಹೊಂದಿದೆ.
Realme Neo 7x ಬೆಲೆ, ಲಭ್ಯತೆ
ನೂತನ Realme Neo 7x ಸ್ಮಾರ್ಟ್‌ಫೋನ್ ಬೆಲೆ 8GB + 256GB ಆಯ್ಕೆಗೆ CNY 1,299 (ಸುಮಾರು ರೂ. 15,600) ರಿಂದ ಪ್ರಾರಂಭವಾಗುತ್ತದೆ. ಇದರ ಹೈ ವೆರಿಯಂಟ್ 12GB + 512GB ಆಯ್ಕೆಯ ಫೋನ್ ಬೆಲೆ CNY 1,599 (ಸುಮಾರು ರೂ. 19,200).ಗಳಾಗಿವೆ. ಇದು ಪ್ರಸ್ತುತ ಚೀನಾದಲ್ಲಿ ಮಾತ್ರ ಮಾರಾಟಕ್ಕೆ ಬಂದಿದ್ದು, ರಿಯಲ್‌ಮಿ ಚೀನಾ ಇ-ಸ್ಟೋರ್ ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಿದೆ. ಸಿಹಿಸುದ್ದಿ ಎಂದರೆ, ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲೂ ಈ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವ ಬಗ್ಗೆ ರಿಯಲ್‌ಮಿ ಕಂಪೆನಿ ಒಲವು ತೋರಿದೆ ಎಂದು ಉದ್ಯಮ ಮೂಲಗಳು ಅಭಿಪ್ರಾಯಪಟ್ಟಿವೆ.


Click it and Unblock the Notifications








