Home
ಮೊಬೈಲ್

ಬಿಡುಗಡೆಗೂ ಮೊದಲೇ.. Realme Note 60 ಸೇಲ್: 8,000ಕ್ಕಿಂತ ಕಡಿಮೆ.. ಯಾವಾಗ? ಎಲ್ಲಿ?

ರಿಯಲ್‌ಮಿ (Realme) ಕಂಪನಿಯು ತನ್ನ 'Note 50' ಅನ್ನು ವಿಸ್ತರಿಸಲು ಸಜ್ಜಾಗಿದೆ. ಹೊಸ ರಿಯಲ್‌ಮಿ ನೋಟ್ 60 (Realme Note 60) ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಂಪನಿಯ ಇಂಡೋನೇಷ್ಯಾ ವೆಬ್‌ಸೈಟ್‌ನಲ್ಲಿ ಈ ಹೊಸ ಫೋನಿನ ಪ್ರಮುಖ ವಿಶೇಷತೆಗಳನ್ನು ಕಾಣಬಹುದು. ಇದು ಆಗಸ್ಟ್ 30 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರೊಂದಿಗೆ, ಫೋನ್ ಬಿಡುಗಡೆ ಮಾಡುವ ಮೊದಲೇ, ಕೆಲವು ಚಿಲ್ಲರೆ ವೆಬ್‌ಸೈಟ್‌ಗಳಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ. ಬನ್ನಿ, ಈ ಕುರಿತ ಸಂಪೂರ್ಣ ವಿವರಗಳನ್ನು ತಿಳಿಯೋಣ.

ಮುಂಬರುವ ರಿಯಲ್‌ಮಿ ನೋಟ್ 60 (Realme Note 60) ಫೋನಿನ ಬೆಲೆ, ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಇದು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 6.74 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು Unisoc T612 ಚಿಪ್‌ಸೆಟ್, 32 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5,000mAh ಬ್ಯಾಟರಿ, ನೀರು ಮತ್ತು ಧೂಳಿನ ನಿರೋಧಕತೆಗಾಗಿ IP64 ರೇಟಿಂಗ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಬಿಡುಗಡೆಗೂ ಮೊದಲೇ.. Realme Note 60 ಸೇಲ್: 8,000ಕ್ಕಿಂತ ಕಡಿಮೆ.. ಎಲ್ಲಿ?

ರಿಯಲ್‌ಮಿ ನೋಟ್ 60 ಫೋನಿನಲ್ಲಿ ಹೊಸತೇನಿದೆ?

ರಿಯಲ್‌ಮಿ ನೋಟ್ 50 (Realme Note 50) ಫೋನಿಗೆ ಹೋಲಿಸಿದರೆ, ಹೊಸ ರಿಯಲ್‌ಮಿ ನೋಟ್ 60 ಲೋಹದ ಚೌಕಟ್ಟಿನಲ್ಲಿ ಬರಲಿದೆ. ನೋಟ್ 50 ಫೋನ್ 13 ಮೆಗಾ ಪಿಕ್ಸೆಲ್ ಕ್ಯಾಮಾರಾ ಹೊಂದಿದ್ದರೆ, ಇದು 32 ಮೆಗಾ ಪಿಕ್ಸೆಲ್ ಸಂವೇದಕವನ್ನು ಹೊಂದಿರಲಿದೆ. ನೋಟ್ 50 ಫೋನ್ IP52 ರೇಟಿಂಗ್ ಹೊಂದಿತ್ತು. ಹೊಸ ಫೋನ್ IP64 ರೇಟಿಂಗ್‌ನೊಂದಿಗೆ ಬರುತ್ತದೆ. ವರ್ಚುವಲ್ RAM ತಂತ್ರಜ್ಞಾನ ಮತ್ತು ಸ್ಟೋರೇಜ್ ಆಯ್ಕೆಗಳೂ ವಿಭಿನ್ನವಾಗಿವೆ. ಆದರೆ, ಡಿಸ್ಪ್ಲೇ, ಚಿಪ್ಸೆಟ್ ಮತ್ತು ಬ್ಯಾಟರಿ ಒಂದೇ ಆಗಿರುತ್ತದೆ.

ರಿಯಲ್‌ಮಿ ನೋಟ್ 60 ಫೋನಿನ ಬೆಲೆ, ಲಭ್ಯತೆ

ವರದಿಯ ಪ್ರಕಾರ, ರಿಯಲ್‌ಮಿ ನೋಟ್ 60 ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ವರ್ಚುವಲ್ RAM ಸೌಲಭ್ಯವು ಎರಡೂ ಫೋನ್‌ಗಳಲ್ಲಿ ಲಭ್ಯವಿರುತ್ತದೆ. ಇದರ 4GB RAM ಮತ್ತು 64GB ಸ್ಟೋರೇಜ್‌ ಮಾಡೆಲ್ ಬೆಲೆ ಅಂದಾಜು 7,608 ರೂ. (Rp 1,399,000). ಇರಲಿದೆ. ಫೋನಿನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವು ಅಂದಾಜು 8,695 ರೂ.ಗೆ (Rp 1,599,000) ಬಿಡುಗಡೆಯಾಗಲಿದೆ. ವರ್ಚುವಲ್ RAM ಸೌಲಭ್ಯವು ಎಲ್ಲಾ ಮಾದರಿಗಳಲ್ಲಿ ಲಭ್ಯವಿರುತ್ತದೆ.

ಇಂಡೋನೇಷ್ಯಾದ ಕೆಲವು ಚಿಲ್ಲರೆ ವೆಬ್‌ಸೈಟ್‌ಗಳಲ್ಲಿ ರಿಯಲ್‌ಮಿ ನೋಟ್ 60 ಸ್ಮಾರ್ಟ್‌ಫೋನ್ ಮಾರಾಟವು ಈಗಾಗಲೇ ಪ್ರಾರಂಭವಾಗಿದೆ. ಇದು ಆಗಸ್ಟ್ 30 ರಂದು ಅಧಿಕೃತವಾಗಿ ಲಭ್ಯವಾಗಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ ನೋಟ್ 60 ಫೋನನ್ನು ಮಾರ್ಬಲ್ ಬ್ಲಾಕ್ ಮತ್ತು ವಾಯೇಜ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಪಟ್ಟಿ ಮಾಡಲಾಗಿದೆ.

ರಿಯಲ್‌ಮಿ ನೋಟ್ 60 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರಿಯಲ್‌ಮಿ ನೋಟ್ 60 ಫೋನ್ 6.74 ಇಂಚಿನ HD+ IPS LCD ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಫೋನ್‌ ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವನ್ನು ಸಹ ಹೊಂದಿರಲಿದೆ.

ಪ್ರೊಸೆಸರ್: ಮುಂಬರುವ ರಿಯಲ್‌ಮಿ ನೋಟ್ 60 ಫೋನ್ Unisoc T612 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಇದು 4GB RAM ಮತ್ತು 64GB ಸ್ಟೋರೇಜ್‌, 6GB RAM ಮತ್ತು 128GB ಸ್ಟೋರೇಜ್ ಹೊಂದಿರಲಿದೆ.

ಕ್ಯಾಮೆರಾ: ರಿಯಲ್‌ಮಿ ನೋಟ್ 60 ಫೋನಿನಲ್ಲಿ 32 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. 10x ಡಿಜಿಟಲ್ ಜೂಮ್‌ನೊಂದಿಗೆ ಇತರ ಸೆಕೆಂಡರಿ ಲೆನ್ಸ್‌ಗಳನ್ನು ಹೊಂದಿರುತ್ತದೆ. ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಇರಲಿದೆ.

ಬ್ಯಾಟರಿ: ರಿಯಲ್‌ಮಿ ನೋಟ್ 60 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದನ್ನು ಚಾರ್ಜ್ ಮಾಡಲು 10W ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುತ್ತದೆ.

ಇತರೆ ಫೀಚರ್ಸ್‌: ರಿಯಲ್‌ಮಿ ನೋಟ್ 60 ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP64 ರೇಟಿಂಗ್ ಅನ್ನು ಪಡೆದಿದೆ. ಭದ್ರತೆಗಾಗಿ ಮೊಬೈಲ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

Best Mobiles in India

English summary
Realme Note 60 goes on sale in Indonesia ahead of launch: price, specs revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+