ಸದ್ದಿಲ್ಲದೇ Realme Note 60 ಬಿಡುಗಡೆ; ಕಡಿಮೆ ಬೆಲೆ.. ನೀವೆ ನೋಡಿ
ರಿಯಲ್‌ಮಿ ಕಂಪನಿಯು ಸದ್ದಿಲ್ಲದೇ ರಿಯಲ್‌ಮಿ ನೋಟ್ 60 (Realme Note 60) ಅನ್ನು ಬಿಡುಗಡೆ ಮಾಡಿದೆ. 32 ಮೆಗಾಪಿಕ್ಸೆಲ್ ಕ್ಯಾಮೆರಾ, 24GB RAM ಮತ್ತು 5,000mAh ಬ್ಯಾಟರಿಯನ್ನು ಹೊಂದಿರುವ ಈ ಫೋನ್ ಅನ್ನು ಕಂಪನಿಯು ಮೊದಲು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆಯಾದ ರಿಯಲ್‌ಮಿ C61 (realme C61) ಸ್ಮಾರ್ಟ್‌ಫೋನ್ ಹೋಲುತ್ತದೆ. ಹೀಗಾಗಿ, ಕಂಪನಿಯು ಈ ಮೊಬೈಲ್ ಅನ್ನು ಭಾರತದಲ್ಲಿ ಕೊಂಚ ತಡವಾಗಿ ಬಿಡುಗಡೆ ಮಾಡಲಿದೆ.
ರಿಯಲ್‌ಮಿ ನೋಟ್ 60 ಫೋನ್ 6.74 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು UNISOC T612 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. 16GB ಡೈನಾಮಿಕ್ RAM, 8GB RAM ಮತ್ತು 256GB ಮೆಮೊರಿ ಇದೆ. 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು, 10W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ಇನ್ನಿತರ ವೈಶಿಷ್ಟ್ಯಗಳು ತಿಳಿಯೋಣ.

ರಿಯಲ್‌ಮಿ ನೋಟ್ 60 ಬೆಲೆ ಮತ್ತು ಲಭ್ಯತೆ
4GB ಮತ್ತು 64GB ಸ್ಟೋರೇಜ್ ಬೆಲೆ = 7,580 ರೂ.
6GB ಮತ್ತು 128GB ಸ್ಟೋರೇಜ್ ಬೆಲೆ = 8,660 ರೂ.
8GB ಮತ್ತು 256GB ಸ್ಟೋರೇಜ್ ಬೆಲೆ = 10,830 ರೂ.
ಕಂಪನಿಯು ರಿಯಲ್‌ಮಿ ನೋಟ್ 60 ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಮಾರ್ಬಲ್ ಬ್ಲಾಕ್ ಮತ್ತು ವಾಯೇಜರ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು. 4GB ಮತ್ತು 64GB ಸ್ಟೋರೇಜ್ ಬೆಲೆ 7,580 ರೂ. ಇದೆ. 6GB ಮತ್ತು 128GB ಸ್ಟೋರೇಜ್ ಬೆಲೆ 8,660 ರೂ. ಮತ್ತು 8GB ಮತ್ತು 256GB ಸ್ಟೋರೇಜ್ ಬೆಲೆ 10,830 ರೂ.ಗೆ ಬಿಡುಗಡೆಯಾಗಿದೆ.
ರಿಯಲ್‌ಮಿ ನೋಟ್ 60 ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ರಿಯಲ್‌ಮಿ ನೋಟ್ 60 ಸ್ಮಾರ್ಟ್‌ಫೋನ್ 6.74 ಇಂಚಿನ HD + ಡಿಸ್ಪ್ಲೇಯನ್ನು ಹೊಂದಿದೆ. ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಡಿಸ್ಲ್ಪೇಯನ್ನು IPS LCD ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಇದು 90Hz ರಿಫ್ರೆಶ್ ದರ, 180Hz ಸ್ಪರ್ಶ ಮಾದರಿ ದರ ಮತ್ತು 560 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ಒಳಗೊಂಡಿದೆ.
ಪ್ರೊಸೆಸರ್: ರಿಯಲ್‌ಮಿ ನೋಟ್ 60 ಫೋನ್ 12nm ಫ್ಯಾಬ್ರಿಕೇಶನ್‌ಗಳಲ್ಲಿ ಮಾಡಲಾದ UNISOC T612 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ರಿಯಲ್‌ಮಿ ಯುಐ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ Mali-G57 GPU ಅನ್ನು ಬೆಂಬಲಿಸುತ್ತದೆ.
ಸ್ಟೋರೇಜ್: ರಿಯಲ್‌ಮಿ ನೋಟ್ 60 ಅನ್ನು 4GB, 6GB ಮತ್ತು 8GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ 16 GB ವರ್ಚುವಲ್ RAM ಮೆಮೊರಿಯನ್ನು ಹೊಂದಿದೆ. ಇದು ಭೌತಿಕ RAM ಜೊತೆಗೆ 24GB RAM ನ ಶಕ್ತಿಯನ್ನು ನೀಡುತ್ತದೆ. ಈ ಫೋನ್ 256GB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಜೊತೆಗೆ, 2TB ವರೆಗೆ ಕಾರ್ಡ್ ಬೆಂಬಲವನ್ನು ಹೊಂದಿದೆ.
ಕ್ಯಾಮೆರಾ: ರಿಯಲ್‌ಮಿ ನೋಟ್ 60 ಫೋನ್ 32 ಮೆಗಾಪಿಕ್ಸೆಲ್ ಕ್ಯಾಮೆರಾ ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕೆರೆಗಾಗಿ, 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಇದು 4-ಇನ್-1 ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುವ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ.
ಬ್ಯಾಟರಿ: ರಿಯಲ್‌ಮಿ ನೋಟ್ 60 ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ದೊಡ್ಡ ಬ್ಯಾಟರಿ ಜೊತೆಗೆ USB ಟೈಪ್-C ಪೋರ್ಟ್ ಮತ್ತು 10W ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.
ಇತರೆ ವೈಶಿಷ್ಟ್ಯಗಳು: ರಿಯಲ್‌ಮಿ ನೋಟ್ 60 ಫೋನ್ IP64 ರೇಟಿಂಗ್ ಪಡೆದಿದೆ. ಇದು ನೀರು ಮತ್ತು ಧೂಳು ನಿರೋಧಕವಾಗಿದೆ. ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 5GHz ವೈ-ಫೈ ಮತ್ತು ಬ್ಲೂಟೂತ್ 5.0 ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








