ಜಸ್ಟ್ 7000 ರೂ.! 6.74 ಇಂಚಿನ ಡಿಸ್ಪ್ಲೇ.. 5000mAh ಬ್ಯಾಟರಿ.. ಸದ್ದಿಲ್ಲದೆ Realme Note 60x ಲಾಂಚ್
ಸದ್ದಿಲ್ಲದೆ ಹೊಸ ರಿಯಲ್‌ಮಿ ಮೊಬೈಲ್ ಬಿಡುಗಡೆ. ಇದರ ಬೆಲೆ ಕೇವಲ 7,000 ರೂ.! ಹೌದು, ರಿಯಲ್‌ಮಿ ತನ್ನ 'ನೋಟ್' ಸರಣಿಯಲ್ಲಿ ನೂತನ ಫೋನನ್ನು ರಿಲೀಸ್ ಮಾಡಿದೆ. ಇದು ರಿಯಲ್‌ಮಿ ನೋಟ್ 60x (Realme Note 60x) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅಗ್ಗದ ದರವೆಂಬ ಕಾರಣಕ್ಕೆ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬನ್ನಿ, ಹೊಸ ರಿಯಲ್‌ಮಿ ನೋಟ್ 60x ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ ನೋಟ್ 60x ಮೊಬೈಲ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದರ ಸ್ಟೈಲಿಶ್ ಲುಕ್ ಮತ್ತು ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಫೋನ್ 6.74 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 10W ವೇಗದ ಚಾರ್ಜಿಂಗ್ ಲಭ್ಯವಿದೆ. ಇದು ಯುನಿಸೊಕ್ T612 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 4GB RAM + 64GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ ನೋಟ್ 60x ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ ನೋಟ್ 60x ಮೊಬೈಲ್ 6.74 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಹೊಂದಿದೆ. ಜೊತೆಗೆ ರೈನ್ ವಾಟರ್ ಟಚ್ ತಂತ್ರಜ್ಞಾನ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ರಿಯಲ್‌ಮಿ ನೋಟ್ 60x ಫೋನನ್ನು ಯುನಿಸೊಕ್ T612 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 12 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾದ ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ARM ಮಾಲಿ G57 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ರಿಯಲ್‌ಮಿ ನೋಟ್ 60x ಸ್ಮಾರ್ಟ್‌ಫೋನ್ 4GB RAM ಹೊಂದಿದೆ. ಜೊತೆಗೆ 4GB ಡೈನಾಮಿಕ್ RAM ವಿಸ್ತರಣೆ ತಂತ್ರಜ್ಞಾನ ಲಭ್ಯವಿದೆ. ನೀವು 8GB RAM ಬಳಸಬಹುದು. ಈ ಫೋನ್ 64GB ಸ್ಟೋರೇಜ್ ಆಯ್ಕೆ ಹೊಂದಿದ್ದು, ಇದನ್ನು 2TB ವರೆಗೆ ಹೆಚ್ಚಿಸಬಹುದು.
ಈ ಸುದ್ದಿ ಓದಿದ್ದೀರಾ?: 3500 ಅಗ್ಗ! 108MP ಕ್ಯಾಮೆರಾ.. 5030mAh ಬ್ಯಾಟರಿ.. ಈ Redmi 5G ಫೋನಿನ ಬೆಲೆ ಭಾರೀ ಇಳಿಕೆ

ಕ್ಯಾಮೆರಾ ಸೆಟಪ್
ರಿಯಲ್‌ಮಿ ನೋಟ್ 60x ಮೊಬೈಲ್ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ರಿಯಲ್‌ಮಿ ನೋಟ್ 60x ಫೋನನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ ನೋಟ್ 60x ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಜೊತೆಗೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.
ರಿಯಲ್‌ಮಿ ನೋಟ್ 60x ಬೆಲೆ ಮತ್ತು ಲಭ್ಯತೆ
ಕಂಪನಿಯು ರಿಯಲ್‌ಮಿ ನೋಟ್ 60x ಫೋನನ್ನು 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ಪರಿಚಯಿಸಿದೆ. ಇದರ ಬೆಲೆ ಕೇವಲ 7,000 ರೂ. (PHP 4,799) ಆಗಿದೆ. ಈ ಹೊಸ ರಿಯಲ್‌ಮಿ ಫೋನನ್ನು ವೈಲ್ಡರ್‌ನೆಸ್ ಗ್ರೀನ್ ಮತ್ತು ಮಾರ್ಬಲ್ ಬ್ಲಾಕ್ ಬಣ್ಣದಲ್ಲಿ ಖರೀದಿಸಬಹುದು. ಪ್ರಸ್ತುತ, ಈ ಮೊಬೈಲ್ ಫಿಲಿಪೈನ್ಸ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ.


Click it and Unblock the Notifications








