ಮತ್ತೆ Realme P1 Speed 5G ಸೇಲ್ ಶುರು: ಭರ್ಜರಿ ಡಿಸ್ಕೌಂಟ್.. ಬೆಲೆಯೂ ಕಡಿಮೆ! ಹೇಗಿವೆ ಫೀಚರ್ಸ್
ರಿಯಲ್‌ಮಿ ಪ್ರಿಯರಿಗೆ ಖುಷಿ ಸುದ್ದಿ ಇದೆ. ಈ ಹೊಸ ರಿಯಲ್‌ಮಿ 5G ಫೋನ್ ಭಾರೀ ಆಫರ್‌ನೊಂದಿಗೆ ಲಭ್ಯವಿದೆ. ಹೌದು, ರಿಯಲ್‌ಮಿ (Realme) ಕಳೆದ ತಿಂಗಳು ಹೊಸ ರಿಯಲ್‌ಮಿ P1 ಸ್ಪೀಡ್ 5G (Realme P1 Speed 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಕಳೆದ ಅಕ್ಟೋಬರ್ 20 ರಂದು ಈ ಮೊಬೈಲ್‌ನ ಮೊದಲ ಮಾರಾಟ ನಡೆದಿತ್ತು. ಇದೀಗ, ಕಂಪನಿಯು ತನ್ನ ಎರಡನೇ ಮಾರಾಟವನ್ನು ಆಯೋಜಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ 3000 ರೂ. ಮತ್ತು 2000 ರೂ.ಗಳ ಡಿಸ್ಕೌಂಟ್ ಲಭ್ಯವಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹೌದು, ರಿಯಲ್‌ಮಿ P1 ಸ್ಪೀಡ್ 5G ಫೋನಿನ ಎರಡನೇ ಮಾರಾಟ ಇಂದು (ನವೆಂಬರ್ 22) ಮಧ್ಯಾಹ್ನ 12 ಗಂಟೆಗೆ ಮತ್ತೆ ಪ್ರಾರಂಭವಾಗಲಿದೆ. ಈ ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜೊತೆಗೆ 6.67 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ P1 ಸ್ಪೀಡ್ 5G ಫೋನಿನ ಬೆಲೆ ಮತ್ತು ಆಫರ್‌ಗಳು
8GB + 128GB ಸ್ಟೋರೇಜ್ ಬೆಲೆ = 17,999 ರೂ.
ಆಫರ್ ಬೆಲೆ = 14,999 ರೂ. (3,000 ರಿಯಾಯಿತಿ)
12GB + 256GB ಸ್ಟೋರೇಜ್ ಬೆಲೆ = 20,999 ರೂ.
ಆಫರ್ ಬೆಲೆ = 18,999 ರೂ. (2,000 ರಿಯಾಯಿತಿ)
ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಫೋನಿನ 8GB + 128GB ಸ್ಟೋರೇಜ್ ರೂಪಾಂತರದ ಖರೀದಿ ಮೇಲೆ 3,000 ರೂ. ಬ್ಯಾಂಕ್ ಡಿಸ್ಕೌಂಟ್ ನೀಡುತ್ತಿದೆ. ನೀವು, ಈ ಫೋನನ್ನು 14,999 ರೂ.ಗೆ ಕೊಳ್ಳಬಹುದು. ಫೋನಿನ 12GB + 256GB ಸ್ಟೋರೇಜ್ ಆಯ್ಕೆಯ ಮೇಲೆ 2,000 ರೂ. ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್‌ನೊಂದಿಗೆ 18,999 ರೂ.ಗೆ ಖರೀದಿಸಬಹುದು. ನೀವು, ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನನ್ನು ಕೊಳ್ಳಬಹುದು.
ರಿಯಲ್‌ಮಿ P1 ಸ್ಪೀಡ್ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2400 ×1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ರೇಟ್ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ ರೇನ್ ವಾಟರ್ ಸ್ಮಾರ್ಟ್ ಟಚ್ ಹಾಗೂ ಪಾಂಡಾ ಗ್ಲಾಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ P1 ಸ್ಪೀಡ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G615 MC2 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ನಿರ್ವಹಿಸಲಿದೆ.
ಸ್ಟೋರೇಜ್ ಆಯ್ಕೆ
ರಿಯಲ್‌ಮಿ P1 ಸ್ಪೀಡ್ 5G ಸ್ಮಾರ್ಟ್‌ಫೋನ್ 26GB ವರೆಗೆ RAM ಹೊಂದಿದೆ. 256GB ವರೆಗೆ ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಫೋನ್ 14GB ವರೆಗೆ ಡೈನಾಮಿಕ್ RAM ಬೆಂಬಲ ಸಹ ಹೊಂದಿದೆ. ಇದು 8GB + 128GB ಮತ್ತು 12GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಫೋನನ್ನು 5000mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ P1 ಸ್ಪೀಡ್ 5G ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ ಸಿಮ್ 5G, ವೈ-ಫೈ 6, ಬ್ಲೂಟೂತ್ 5.4, 5G, 4G, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








