ನಾಳೆ Realme P2 Pro ಸೇಲ್: 50MP ಕ್ಯಾಮೆರಾ.. 256GB ಮೆಮೊರಿ.. ಆಕರ್ಷಕ ಬೆಲೆ
ರಿಯಲ್‌ಮಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ ರಿಯಲ್‌ಮಿ P2 ಪ್ರೊ 5G (Realme P2 Pro 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು ಬಜೆಟ್ ಬೆಲೆಯ ಗ್ರಾಹಾಕರನ್ನು ಗಮನದಲ್ಲಿಟ್ಟುಕೊಂಡು ಈ ಫೋನನ್ನು ಲಾಂಚ್ ಮಾಡಿದೆ. ಇದು ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ, ಈ ಮೊಬೈಲ್ ನಾಳೆ (ಸೆಪ್ಟೆಂಬರ್ 17) ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ರಿಯಲ್‌ಮಿ P2 ಪ್ರೊ 5G ರಿಯಲ್‌ಮಿಯ 'P' ಸರಣಿಯ ನೂತನ ಫೋನ್ ಆಗಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s Gen 2 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 50 ಮೆಗಾಪಿಕ್ಸೆಲ್ ಸೋನಿ LYT 600 ಮುಖ್ಯ ಕ್ಯಾಮೆರಾ, 80 ವ್ಯಾಟ್ ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ, ಕೊಡುಗೆಗಳು ಮತ್ತು ವೈಶಿಷ್ಟ್ಯಗಳು ತಿಳಿಯೋಣ.

ರಿಯಲ್‌ಮಿ P2 ಪ್ರೊ 5G ಫೋನಿನ ಬೆಲೆ ಎಷ್ಟು?
ಕಂಪನಿಯು ರಿಯಲ್‌ಮಿ P2 ಪ್ರೊ 5G ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ 8GB + 128GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂಪಾಯಿ ಇದೆ. 12GB + 256GB ಸ್ಟೋರೇಜ್ ರೂಪಾಂತರವು 24,999 ರೂ.ಗೆ ಬಿಡುಗಡೆಯಾಗಿದೆ. 12GB + 512GB ಸ್ಟೋರೇಜ್ ಆಯ್ಕೆಯ ಬೆಲೆ 27,999 ರೂ.ಗೆ ಮಾರಾಟವಾಗಲಿದೆ.
ರಿಯಲ್‌ಮಿ P2 ಪ್ರೊ 5G ಫೋನಿನ ಆಫರ್ ಬೆಲೆ
8GB + 128GB ಬೆಲೆ = 19,999 ರೂ.
12GB + 256GB ಬೆಲೆ = 21,999 ರೂ.
12GB + 512GB ಬೆಲೆ = 24,999 ರೂ.
ಕಂಪನಿಯು ಲಾಂಚ್ ಆಫರ್ ಭಾಗವಾಗಿ 3,000 ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ. ನೀವು, ಪ್ಯಾರಟ್ ಗ್ರೀನ್ ಮತ್ತು ಈಗಲ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಈ ಫೋನನ್ನು ಖರೀದಿಸಬಹುದು. ನಾಳೆಯಿಂದ (ಸೆಪ್ಟೆಂಬರ್ 17) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಸ್ಮಾರ್ಟ್‌ಫೋನಿನ ಮಾರಾಟ ಪ್ರಾರಂಭವಾಗುತ್ತದೆ.
ರಿಯಲ್‌ಮಿ P1 ಪ್ರೊ 5G ಫೋನಿನ ಫೀಚರ್ಸ್
ನೂತನ ರಿಯಲ್‌ಮಿ P1 ಪ್ರೊ 5G ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಕರ್ವ್ಡ್ ಸ್ಯಾಮ್‌ಸಂಗ್ ಅಮೋಲೆಡ್ ಡಿಸ್ಲ್ಪೇಯನ್ನು ಹೊಂದಿದೆ. ಇದು 2412 X 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 240Hz ಸ್ಪರ್ಶ ಮಾದರಿ ದರವನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಗ್ರಾಫಿಕ್ಸ್‌ಗಾಗಿ ಅಡ್ರಿನೊ ಜಿಪಿಯು ಒದಗಿಸಲಾಗಿದೆ. ಈ ಫೋನ್ Android 14 ಆಧಾರಿತ Realme UI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ರಿಯಲ್‌ಮಿ P1 ಪ್ರೊ 5G ಫೋನ್ LED ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ LYTIA 600 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಲಭ್ಯವಿದೆ. ಈ ಫೋನ್ 5,200mAh ಬ್ಯಾಟರಿಯನ್ನು ಹೊಂದಿದೆ. ಇದು 80 ವ್ಯಾಟ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.
ನೂತನ ರಿಯಲ್‌ಮಿ P1 ಪ್ರೊ 5G ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಜೊತೆಗೆ, ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್, ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯ, ಜಿಟಿ ಮೋಡ್, ಏರ್ ಗೆಸ್ಚರ್, ಡ್ಯುಯಲ್ ಸ್ಟುಡಿಯೋ ಸ್ಪೀಕರ್, ಎಐ ಹೈಪರ್‌ರಾ ಅಲ್ಗಾರಿದಮ್, ಎಐ ಪೋರ್ಟ್ರೇಟ್ ಎಐ ಅಲ್ಟ್ರಾ ಕ್ಲಾರಿಟಿ, ಎಐ ಗ್ರೂಪ್ ಫೋಟೋ ವರ್ಧನೆ ಸೇರಿದಂತೆ ಇನ್ನಿತರ ಫೀಚರ್ಸ್ ಒಳಗೊಂಡಿದೆ.


Click it and Unblock the Notifications








