10 ಸಾವಿರಕ್ಕೆ ಹೊಸ Realme P3 Lite 5G ಫೋನ್?..ಬಿಡುಗಡೆಗೆ ಎರಡೇ ದಿನ ಬಾಕಿ!
ಭಾರತದ ಸ್ಮಾರ್ಟ್‌ಫೋನ್ ಲೋಕದಲ್ಲಿ ತನ್ನ ಆಕ್ರಮಣಕಾರಿ ಬೆಲೆ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಹೆಸರು ಮಾಡಿರುವ ರಿಯಲ್‌ಮಿ, ಇದೀಗ ಮತ್ತೊಂದು ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್ ಒಂದರ ಮೂಲಕ ಸದ್ದು ಮಾಡಲು ಬರುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ಬಹುದಿನಗಳಿಂದ ನಿರೀಕ್ಷಿಸಲಾಗಿದ್ದ Realme P3 Lite 5G ಫೋನ್ ಬಿಡುಗಡೆ ದಿನಾಂಕವು ಅಧಿಕೃತವಾಗಿ ಪ್ರಕಟವಾಗಿದೆ. ಇಷ್ಟೇ ಅಲ್ಲದೆ, ಈ ಫೋನಿನ ಪ್ರಮುಖ ಫೀಚರ್ಸ್ ಅನ್ನು ಸಹ ಪರಿಚಯಿಸಲಾಗಿದ್ದು, ಇದರ 6,000mAh ಬ್ಯಾಟರಿ ಮತ್ತು ಸ್ಲಿಮ್ ವಿನ್ಯಾಸವು ದೊಡ್ಡ ಚರ್ಚೆಗೆ ಕಾರಣವಾಗಿದೆ.
Realme P3 Lite 5G: ಬಿಡುಗಡೆ ದಿನಾಂಕ ಮತ್ತು ಬಣ್ಣ ಮತ್ತು ಸ್ಟೋರೇಜ್ ಆಯ್ಕೆಗಳು.
ದೇಶದಲ್ಲಿ Realme P3 Lite 5G ಫೋನ್ ಇದೇ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ ಎಂದು ಕಂಪೆನಿಯು ಅಧಿಕೃತವಾಗಿ ಪ್ರಕಟಿಸಿದೆ. ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಮುಂಬರುವ ಈ P ಸರಣಿಯ ಸ್ಮಾರ್ಟ್‌ಫೋನ್ ಅನ್ನು ಪಟ್ಟಿ ಮಾಡಿದ್ದು, Lily White, Purple Blossom, ಮತ್ತು Midnight Lily ಬಣ್ಣಗಳಲ್ಲಿ ಈ ಫೋನ್ ಲಭ್ಯವಾಗಲಿದೆ ಎಂದು ತಿಳಿಸಿದೆ .ಜೊತೆಗೆ ಇದು 6GB RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಇಷ್ಟೇ ಅಲ್ಲ, ಮಲ್ಟಿಟಾಸ್ಕಿಂಗ್ ಅನ್ನು ಸುಧಾರಿಸಲು 18GB ವರೆಗೆ ವರ್ಚುವಲ್ RAM ಸೌಲಭ್ಯವನ್ನೂ ನೀಡಲಾಗಿದೆ.
Realme P3 Lite 5G: ಪ್ರಮುಖ ವೈಶಿಷ್ಟ್ಯಗಳು.
Realme ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿರುವಂತೆ, Realme P3 Lite 5G ಫೋನ್ 67 ಇಂಚಿನ HD+ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಇದರಿಂದ ಸ್ಕ್ರೀನ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವವು ಅತ್ಯಂತ ಮೃದುವಾಗಿರುತ್ತದೆ. ಇದರ 625 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊರಗೆ ಸೂರ್ಯನ ಬೆಳಕಿನಲ್ಲಿಯೂ ಸುಲಭವಾಗಿ ಕಂಟೆಂಟ್ ನೋಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, IP64 ಪ್ರಮಾಣೀಕರಣ ಇರುವುದರಿಂದ ಇದು ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡುತ್ತದೆ. ಮಳೆ ಬಂದಾಗಲೂ ಫೋನ್ ಅನ್ನು ಬಳಸಲು ಅನುಕೂಲವಾಗುವಂತೆ "Rainwater Smart Touch" ಎಂಬ ವಿಶೇಷ ತಂತ್ರಜ್ಞಾನವನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಈ ಫೋನ್‌ನ ಕಾರ್ಯಕ್ಷಮತೆಗೆ 6nm ತಂತ್ರಜ್ಞಾನ ಆಧಾರಿತ MediaTek Dimensity 6300 5G ಪ್ರೊಸೆಸರ್ ಶಕ್ತಿ ತುಂಬುತ್ತದೆ. ಇದು ದೈನಂದಿನ ಕಾರ್ಯಗಳು ಮತ್ತು ಮಧ್ಯಮ ಮಟ್ಟದ ಗೇಮಿಂಗ್‌ಗೂ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. ಬ್ಯಾಟರಿ ವಿಚಾರದಲ್ಲಿ ರಿಯಲ್‌ಮಿ ನಿಜಕ್ಕೂ ಒಂದು ಹೆಜ್ಜೆ ಮುಂದಿಟ್ಟಿದೆ. 6,000mAh ಬ್ಯಾಟರಿಯೊಂದಿಗೆ ಬರುವ ಇದು, ಕೇವಲ 7.94mm ದಪ್ಪವಿದೆ. ಇದು ಇಷ್ಟು ದೊಡ್ಡ ಬ್ಯಾಟರಿ ಹೊಂದಿರುವ ಫೋನ್‌ಗಳಲ್ಲಿ ಅತ್ಯಂತ ತೆಳ್ಳಗಿನ ಮಾದರಿಗಳಲ್ಲಿ ಒಂದಾಗಿದೆ. 45W ಫಾಸ್ಟ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಸೌಲಭ್ಯವೂ ಇರುವುದರಿಂದ, ಬ್ಯಾಟರಿ ಖಾಲಿಯಾಗುವ ಚಿಂತೆ ಇರುವುದಿಲ್ಲ. ಏಕೆಂದರೆ, ಕಂಪನಿಯ ಪ್ರಕಾರ, ಒಂದೇ ಚಾರ್ಜ್‌ನಲ್ಲಿ ಇದು 54 ಗಂಟೆಗಳ ಟಾಕ್‌ಟೈಮ್ ನೀಡುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, Realme P3 Lite 5G ಫೋನ್ ಹಿಂಭಾಗದಲ್ಲಿ 32 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರಲ್ಲಿನAI ಆಧಾರಿತ ತಂತ್ರಜ್ಞಾನಗಳು ಫೋಟೋಗಳನ್ನು ಇನ್ನಷ್ಟು ಆಕರ್ಷಕವಾಗಿ ಸೆರೆ ಹಿಡಿಯಲು ನೆರವಾಗುತ್ತವೆ ಎಂದು ಕಂಪೆನಿಯು ತಿಳಿಸಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಕಂಪೆನಿಯು ಈ ವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಫೋನ್ 10 ಸಾವಿರ ಅಥವಾ ಅದಕ್ಕಿಂತ ಕಡಿಮೆ ಬೆಲೆ ಹೊಂದಿರುವ ಸಾಧ್ಯತೆ ಇದೆ ಎಂದು ಹಲವಾರು ಸೋರಿಕೆಯ ವರದಿಗಳು ಹೇಳಿವೆ. ಒಂದು ವೇಳೆ ಇದೇ ಬೆಲೆಯಲ್ಲಿ Realme P3 Lite 5G ಫೋನ್ ಆಗಮನವಾದರೆ, ಇದರ ಉತ್ತಮ ವೈಶಿಷ್ಟ್ಯಗಳು, ಶಕ್ತಿಯುತ ಬ್ಯಾಟರಿ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಹುದು.


Click it and Unblock the Notifications








