Home
ಮೊಬೈಲ್

₹10,499 ಕ್ಕೆ 6,000mAh ಬ್ಯಾಟರಿಯ ಹೊಸ Realme 5G ಫೋನ್ ಲಾಂಚ್!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ರಿಯಲ್‌ಮಿ ತನ್ನ ಹೊಸ ಸ್ಮಾರ್ಟ್‌ಫೋನ್ Realme P3 Lite 5G ಅನ್ನು ಭಾರತದಲ್ಲಿ ಇಂದು (ಸೆ.15) ಬಿಡುಗಡೆ ಮಾಡಿದೆ. ಈ ಹೊಸ ಫೋನ್ Realme 'P' ಸರಣಿಗೆ ಹೊಸ ಆಗಮನವಾಗಿದ್ದು, ದೇಶದ ಬಜೆಟ್ ಫೋನ್‌ಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಹಾಗಾದರೆ, ಯುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೊಸ Realme P3 Lite 5G ಫೋನ್ ಹೇಗಿದೆ?, ಬೆಲೆ ಎಷ್ಟು? ಮತ್ತು ಇದರ ಕಾರ್ಯಕ್ಷಮತೆ ಮತ್ತು ಶಕ್ತಿಶಾಲಿ ಬ್ಯಾಟರಿ ಬ್ಯಾಕಪ್‌ನಂತಹ ಇತರೆ ಎಲ್ಲಾ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ.

Realme P3 Lite 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Realme P3 Lite 5G ಫೋನ್ 6.67 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರಲ್ಲಿರನ 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲೂ ಪರದೆಯನ್ನು ಸುಲಭವಾಗಿ ನೋಡಬಹುದು. ಇದಲ್ಲದೆ, ಈ ಫೋನ್ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡುತ್ತದೆ. ವಿಶೇಷವಾಗಿ 'ರೇನ್‌ವಾಟರ್ ಸ್ಮಾರ್ಟ್ ಟಚ್' ವೈಶಿಷ್ಟ್ಯವು ಒದ್ದೆಯಾದ ಕೈಗಳಿಂದಲೂ ಸುಲಭವಾಗಿ ಫೋನ್ ಬಳಸಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಕಾರ್ಯಕ್ಷಮತೆಗಾಗಿ, ಈ Realme P3 Lite 5G, 6nm ತಂತ್ರಜ್ಞಾನ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಹೊಂದಿದೆ. ಇದರಲ್ಲಿ 6GB ವರೆಗೆ RAM ಇದ್ದು, ಜೊತೆಗೆ ಹೆಚ್ಚುವರಿ 18GB ವರೆಗೆ ವರ್ಚುವಲ್ RAM ಸೌಲಭ್ಯವನ್ನೂ ನೀಡಲಾಗಿದೆ. ಇದರಿಂದ ಹೆಚ್ಚು ಆ್ಯಪ್‌ಗಳನ್ನು ಒಂದೇ ಸಮಯದಲ್ಲಿ ಸುಲಭವಾಗಿ ಬಳಸಬಹುದು. ಫೋನ್‌ನ 128GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಮತ್ತು ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

₹10,499 ಕ್ಕೆ 6,000mAh ಬ್ಯಾಟರಿಯ ಹೊಸ Realme 5G ಫೋನ್ ಲಾಂಚ್!

ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, ಈ ಫೋನ್ ಎಲ್ಲರನ್ನು ಆಶ್ಚರ್ಯಗೊಳಿಸಿದೆ. 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಜೊತೆಗೆ, 45W ವೇಗದ ಚಾರ್ಜಿಂಗ್ ಬೆಂಬಲ ಇರುವುದರಿಂದ, ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಫೋಟೋಗ್ರಫಿ ಪ್ರಿಯರಿಗೆ, ಈ ಪೋನಿನಲ್ಲಿ ಉತ್ತಮ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. ಇದರ ಹಿಂಭಾಗದಲ್ಲಿ 32 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, ಇದು ಸ್ಪಷ್ಟ ಮತ್ತು ಸುಂದರ ಫೋಟೊಗಳನ್ನು ಸೆರೆಹಿಡಿಯುತ್ತದೆ. ಸೆಲ್ಫಿಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಸಂಪರ್ಕ ಆಯ್ಕೆಗಳ, ಈ ಫೋನ್ ಬ್ಲೂಟೂತ್ 5.3, 5G, 4G LTE, GPS, USB ಟೈಪ್-C ಪೋರ್ಟ್ ಮತ್ತು ವೈ-ಫೈ ವೈಶಿಷ್ಟ್ಯಗಳನ್ನು ಹಾಗೂ ಇದು ಹೈ-ರೆಸಲ್ಯೂಷನ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ ಮತ್ತು OReality ಆಡಿಯೊ ಬೆಂಬಲದೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ. ಆನ್‌ಬೋರ್ಡ್ ಸೆನ್ಸರ್‌ಗಳಲ್ಲಿ ವೇಗವರ್ಧನೆ ಸಂವೇದಕ, ಕೆಪ್ಯಾಸಿಟಿವ್ ಫಿಂಗರ್‌ಪ್ರಿಂಟ್ ಸೆನ್ಸರ್, ಫ್ಲಿಕರ್ ಸಂವೇದಕ, ಲೈಟ್ ಸೆನ್ಸರ್ ಮತ್ತು ಜಿಯೋಮ್ಯಾಗ್ನೆಟಿಕ್ ಸೆನ್ಸರ್ ಸೇರಿವೆ. ಇನ್ನು ಈ ಫೋನ್ 197 ಗ್ರಾಂ ತೂಕ ಮತ್ತು ಕೇವಲ 7.94mm ದಪ್ಪವಿದೆ.

Realme P3 Lite 5G: ಬೆಲೆ, ಲಭ್ಯತೆ ಮತ್ತು ಕೊಡುಗೆಗಳು
Realme P3 Lite 5G ಫೋನ್ ಎರಡು ಮಾದರಿಗಳಲ್ಲಿ ಪರಿಚಯಗೊಂಡಿದೆ.
4GB RAM + 128GB ಸಂಗ್ರಹಣೆಯ ಮಾದರಿಯ ಬೆಲೆ ರೂ. 12,999.
6GB RAM + 128GB ಸಂಗ್ರಹಣೆಯ ಮಾದರಿಯ ಬೆಲೆ ರೂ. 13,999.

ಆದರೆ, ಬಿಡುಗಡೆ ಆಫರ್ ಅಡಿಯಲ್ಲಿ, ನೀವು ಈ ಫೋನ್‌ಗಳನ್ನು ಕ್ರಮವಾಗಿ ರೂ. 10,499 ಮತ್ತು ರೂ. 11,499 ಕ್ಕೆ ಪಡೆಯಬಹುದು ಎಂದು ಕಂಪೆನಿಯು ತಿಳಿಸಿದೆ. ಇನ್ನು ಈ Realme P3 Lite 5G ಫೋನ್ ಸೆಪ್ಟೆಂಬರ್ 22 ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಗ್ರಾಹಕರು ಈ ಫೋನ್ ಅನ್ನು ಲಿಲಿ ವೈಟ್, ಪರ್ಪಲ್ ಬ್ಲಾಸಮ್ ಮತ್ತು ಮಿಡ್‌ನೈಟ್ ಲಿಲಿ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.

Best Mobiles in India

English summary
Realme P3 Lite 5G: Realme launches its new 5G smartphone at ₹10,499 featuring a 6,000mAh battery, 120Hz display, and IP64 rating for durability.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+