Home
ಮೊಬೈಲ್

ಫೆ.18ಕ್ಕೆ ಲಾಂಚ್: 6000mAh ಬ್ಯಾಟರಿ.. 50MP OIS ಕ್ಯಾಮೆರಾ.. ಯಾವ ಫೋನ್?

ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಶೀಘ್ರದಲ್ಲೇ ಹೊಸ ಗೇಮಿಂಗ್ ಫೋನ್‌ ಗ್ರಾಹಕರ ಕೈ ಸೇರಲಿದೆ. ಹೌದು, ರಿಯಲ್‌ಮಿ ತನ್ನ ಬಹುನಿರೀಕ್ಷಿತ ಹೊಸ ಫೋನಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಕಂಪನಿಯು ಕಳೆದ ವಾರ ತನ್ನ P3 ಸರಣಿಯ ವಿಸ್ತರಣೆಯ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ, ರಿಯಲ್‌ಮಿ P3 ಪ್ರೊ 5G (Realme P3 Pro 5G) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ P3 ಪ್ರೊ 5G ಫೋನಿನ ದಿನಾಂಕದ ಜೊತೆಗೆ, ಪ್ರಮುಖ ವಿಶೇಷತೆಗಳನ್ನು ಸಹ ಬಹಿರಂಗಪಡಿಸಲಾಗಿದೆ. ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಮೊಬೈಲ್ ಕ್ವಾಡ್-ಕರ್ವ್ಡ್ ಎಡ್ಜ್‌ಫ್ಲೋ ಡಿಸ್ಪ್ಲೇ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಸಹ ಲಭ್ಯವಿರುತ್ತದೆ. ಹಾಗೆಯೇ, ಈ ಫೋನ್ 6000mAh ಟೈಟಾನ್ ಬ್ಯಾಟರಿ, 80W ವೇಗದ ಚಾರ್ಜಿಂಗ್‌ ಮತ್ತು ಅನೇಕ ಎಐ ಫೀಚರ್ಸ್‌ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

ಫೆ.18ಕ್ಕೆ ಲಾಂಚ್: 6000mAh ಬ್ಯಾಟರಿ.. 50MP OIS ಕ್ಯಾಮೆರಾ.. ಯಾವ ಫೋನ್?

ರಿಯಲ್‌ಮಿ P3 ಪ್ರೊ 5G ಬಿಡುಗಡೆ ದಿನಾಂಕ

ರಿಯಲ್‌ಮಿ P3 ಪ್ರೊ 5G ಫೋನನ್ನು ಫೆಬ್ರವರಿ 18 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಘೋಷಿಸಿದೆ. ಆನ್‌ಲೈನ್ ಕಾರ್ಯಕ್ರಮದ ಮೂಲಕ ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮೈಕ್ರೋಸೈಟ್ ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ನೇರ ಪ್ರಸಾರವಾಗಿದೆ. ಲಾಂಚ್ ಬಳಿಕ, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್, ಕಂಪನಿಯ ವೆಬ್‌ಸೈಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಈ ಫೋನ್ ಮಾರಾಟ ಪ್ರಾರಂಭವಾಗಲಿದೆ.

ರಿಯಲ್‌ಮಿ P3 ಪ್ರೊ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ P3 ಪ್ರೊ 5G ಮೊಬೈಲ್ ಕ್ವಾಡ್ ಕರ್ವ್ಡ್ ಎಡ್ಜ್‌ಫ್ಲೋ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಇದು ತನ್ನ ವಿಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದೆ. ಈ ಡಿಸ್ಪ್ಲೇಯನ್ನು ಉತ್ತಮ ಗೇಮಿಂಗ್ ಅನುಭವ ಮತ್ತು ಅದ್ಭುತ ವೀಕ್ಷಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಹಾಯದಿಂದ, ನೀವು ನಯವಾದ ಅಂಚಿನ ಸ್ವೈಪ್‌ನ ಪ್ರಯೋಜನ ಪಡೆಯಬಹುದು. ಇದು ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ P3 ಪ್ರೊ 5G ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ ಹೊಂದಿರುತ್ತದೆ. ಇದನ್ನು 4nm TSMC ಪ್ರಕ್ರಿಯೆಯಲ್ಲಿ ತಯಾರಿಸಲಾಗಿದೆ. ಈ ಪ್ರೊಸೆಸರ್ 800K+ ಅಂತುಟು ಸ್ಕೋರ್ ಹೊಂದಿದ್ದು, ಇದು ಅಲ್ಟ್ರಾ ಸ್ಮೂತ್ ಮಲ್ಟಿಟಾಸ್ಕಿಂಗ್, ವೇಗವಾದ ಅಪ್ಲಿಕೇಶನ್ ಲಾಂಚ್ ಮತ್ತು ಉತ್ತಮ ಬಳಕೆದಾರ ಅನುಭವವನ್ನು ನೀಡುತ್ತದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ ಅದ್ಭುತ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು ದೊಡ್ಡ ವೃತ್ತಾಕಾರದ ಮಾಡ್ಯೂಲ್ ಅನ್ನು ಒಳಗೊಂಡಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಸಹ ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ P3 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರಲಿದೆ. ಇದು ಟೈಟಾನ್ ಬ್ಯಾಟರಿಯಾಗಿದೆ. ಗೇಮಿಂಗ್ ಪ್ರಿಯರು ಯಾವುದೇ ಅಡೆತಡೆಯಿಲ್ಲದೆ ದೀರ್ಘಕಾಲದವರೆಗೆ ಗೇಮಿಂಗ್ ಮಾಡಬಹುದು. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಇದು ಬಹಳ ಕಡಿಮೆ ಸಮಯದಲ್ಲಿ ಪೂರ್ಣ ಚಾರ್ಜ್ ಆಗುತ್ತದೆ.

ಜಿಟಿ ಬೂಸ್ಟ್ ತಂತ್ರಜ್ಞಾನ

ರಿಯಲ್‌ಮಿ P3 ಪ್ರೊ 5G ಫೋನ್ ಜಿಟಿ ಬೂಸ್ಟ್ ತಂತ್ರಜ್ಞಾನ ಹೊಂದಿರುತ್ತದೆ. ಇದನ್ನು ಕ್ರಾಫ್ಟನ್ ಜೊತೆ ಅಭಿವೃದ್ಧಿಪಡಿಸಲಾಗಿದೆ. ಇದು ಎಐ (AI) ಅಲ್ಟ್ರಾ ಸ್ಟೆಡಿ ಫ್ರೇಮ್‌ಗಳು, ಹೈಪರ್ ರೆಸ್ಪಾನ್ಸ್ ಎಂಜಿನ್, ಎಐ ಅಲ್ಟ್ರಾ ಟಚ್ ಕಂಟ್ರೋಲ್ ಮತ್ತು ಎಐ ಮೋಷನ್ ಕಂಟ್ರೋಲ್‌ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme P3 Pro Launching in India on Feb 18 with Quad-Curved Display, Snapdragon 7s Gen 3 and 6000mAh Battery: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+