ಭಾರತದಲ್ಲಿ realme P3 Pro ಲಾಂಚ್; 6000mAh ಬ್ಯಾಟರಿ.. 256GB ಸ್ಟೋರೇಜ್.. ಇಷ್ಟೆನಾ ಬೆಲೆ!
ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಕೊನೆಗೂ ಬಹುನಿರೀಕ್ಷಿತ ರಿಯಲ್‌ಮಿ P3 (realme P3) ಸರಣಿಯನ್ನು ಬಿಡುಗಡೆ ಮಾಡಿದೆ. ಹೌದು, ಕಂಪನಿಯು ಎರಡು ಹೊಸ ರಿಯಲ್‌ಮಿ 5G ಫೋನ್‌ಗಳನ್ನು ಭಾರತದಲ್ಲಿ ಲೋಕಾರ್ಪಣೆಗೊಳಿಸಿದೆ. ಇವುಗಳೇ ರಿಯಲ್‌ಮಿ P3x 5G (realme P3x 5G) ಮತ್ತು ರಿಯಲ್‌ಮಿ P3 ಪ್ರೊ 5G (realme P3 Pro 5G) ಸ್ಮಾರ್ಟ್‌ಫೋನ್‌ಗಳು. ಈ ಪೈಕಿ ರಿಯಲ್‌ಮಿ P3 ಪ್ರೊ 5G ಫೋನ್ ಸ್ಟೈಲಿಶ್ ಲುಕ್ ಮತ್ತು ಅತ್ಯುತ್ತಮ ವಿಶೇಷತೆಗಳನ್ನು ಹೊಂದಿದೆ. ಈ ಫೋನಿನ ಬೆಲೆ ಮತ್ತು ಫೀಚರ್ಸ್ ತಿಳಿಯಲು ಮುಂದೆ ಓದಿ.
ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ ಮಿಡ್ ಬಜೆಟ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 12GB RAM + 256GB ಸ್ಟೋರೇಜ್, 6000mAh ಬಿಗ್ ಬ್ಯಾಟರಿ ಮತ್ತು 80W ಅಲ್ಟ್ರಾ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ.

ರಿಯಲ್‌ಮಿ P3 ಪ್ರೊ 5G ಬೆಲೆ
- 8GB RAM + 128GB ಸ್ಟೊರೇಜ್ ಬೆಲೆ = 23,999 ರೂ.
- 8GB RAM + 256GB ಸ್ಟೊರೇಜ್ ಬೆಲೆ = 24,999 ರೂ.
- 12GB RAM + 256GB ಸ್ಟೊರೇಜ್ ಬೆಲೆ = 26,999 ರೂ.
ರಿಯಲ್‌ಮಿ P3 ಪ್ರೊ 5G ಮೊಬೈಲ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 8GB RAM + 128GB ಸ್ಟೊರೇಜ್ ಆಯ್ಕೆಯು 23,999 ರೂ. ಬೆಲೆ ಹೊಂದಿದೆ. 8GB RAM + 256GB ಸ್ಟೊರೇಜ್ ವೇರಿಯಂಟ್ ಬೆಲೆ 24,999 ರೂ. ಆಗಿದೆ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರವು 26,999 ರೂ.ಗೆ ಬಿಡುಗಡೆಯಾಗಿದೆ.
ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ ಫೆಬ್ರವರಿ 25 ರಿಂದ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಆರಂಭಿಕ ಸೇಲ್‌ನ ಪ್ರಯುಕ್ತ ಕೆಲವು ಆಫರ್ ಘೋಷಿಸಿದೆ. ನೀವು ಈ ಮೊಬೈಲ್ ಖರೀದಿ ಮೇಲೆ 2,000 ರೂ.ಗಳ ಬ್ಯಾಂಕ್ ರಿಯಾಯಿತಿಯ ಲಾಭ ಪಡೆಯಬಹುದು. ಇದು ನೆಬ್ಯುಲಾ ಗ್ಲೋ, ಗ್ಯಾಲಕ್ಸಿ ಪರ್ಪಲ್ ಮತ್ತು ಸ್ಯಾಟರ್ನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ P3 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P3 ಪ್ರೊ 5G ಫೋನ್ 6.83 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ವೆಟ್ ಟಚ್ ತಂತ್ರಜ್ಞಾನ ಹೊಂದಿದ್ದು, ಒದ್ದೆಯಾದ ಕೈಗಳಿಂದಲೂ ಫೋನನ್ನು ಬಳಸಬಹುದು.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ P3 ಪ್ರೊ 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S Gen 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ.
RAM ಮತ್ತು ಸ್ಟೊರೇಜ್ ಆಯ್ಕೆ
ರಿಯಲ್‌ಮಿ P3 ಪ್ರೊ 5Gಸ್ಮಾರ್ಟ್‌ಫೋನ್ ಎರಡು RAM ರೂಪಾಂತರಗಳನ್ನು ಹೊಂದಿದೆ. ಇದು 8GB RAM ಮತ್ತು 12GB RAM ಹೊಂದಿದೆ. ಈ ಫೋನ್ ವಿಸ್ತರಿಸಬಹುದಾದ RAM ತಂತ್ರಜ್ಞಾನ ಹೊಂದಿದೆ. ನೀವು ಭೌತಿಕ RAM ಜೊತೆಗೆ ವರ್ಚುವಲ್ RAM ವರೆಗೆ ಬಳಸಬಹುದು. ಈ ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್
ರಿಯಲ್‌ಮಿ P3 ಪ್ರೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ P3 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಫೋನ್ 39 ನಿಮಿಷಗಳನ್ನು ಶೇ.20 ರಿಂದ ಶೇ.100 ರಷ್ಟು ಸಂಪೂರ್ಣ ಚಾರ್ಜ್ ಆಗುತ್ತದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಹೊಂದಿದೆ. ಇದು ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಮುಂತಾದ ಫೀಚರ್ಸ್ ಒಳಗೊಂಡಿದೆ. ಈ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP66, IP68 ಮತ್ತು IP69 ರೇಟಿಂಗ್ ಪಡೆದಿದೆ.


Click it and Unblock the Notifications








